ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಕೆಟ್ಟನ್ನು ಮೀರಿ ಭಾರತ- ಪಾಕ್‌ ಬಾಂಧವ್ಯದ ವಾಜಪೇಯಿ ಕನಸು

By Staff
|
Google Oneindia Kannada News

ಕ್ರಿಕೆಟ್ಟನ್ನು ಮೀರಿ ಭಾರತ- ಪಾಕ್‌ ಬಾಂಧವ್ಯದ ವಾಜಪೇಯಿ ಕನಸು
ಕ್ರಿಕೆಟ್‌ ಶಾಂತಿಯುತ ವಾತಾವರಣದಲ್ಲಿ ನಡೆಯುತ್ತಿದೆ. ನಿಜವಾದ ಸಮಸ್ಯೆ ಭಯೋತ್ಪಾದನೆ

ಬಹ್ರೇಚ್‌: ಭಾರತ ಮತ್ತು ಪಾಕಿಸ್ಥಾನದ ಬಾಂಧವ್ಯವು ಕ್ರಿಕೆಟ್‌ನ್ನು ಮೀರಿ ಇನ್ನಷ್ಟು ಗಟ್ಟಿಗೊಳ್ಳಬೇಕಾಗಿದೆ. ಅದು ಕ್ರಿಕೆಟ್‌ನ್ನು ಮೀರಿ ಮುಂದುವರಿಯಬೇಕಾಗಿದೆ ಎಂದು ಪ್ರಧಾನಿ ವಾಜಪೇಯಿ ಹೇಳಿದ್ದಾರೆ. ಅವರು ಉತ್ತರಪ್ರದೇಶದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡುತ್ತಿದ್ದರು.

ಕ್ರಿಕೆಟ್‌ ಶಾಂತಿಯುತ ವಾತಾವರಣದಲ್ಲಿ ನಡೆಯುತ್ತಿದೆ. ಆದರೆ ನಿಜವಾದ ಸಮಸ್ಯೆ ಇರುವುದು ಭಯೋತ್ಪಾದನೆಯಲ್ಲಿ. ಅದರ ಬಗ್ಗೆ ಸೂಕ್ತವಾದ ಕ್ರಮ ಕೈಗೊಳ್ಳಬೇಕಾಗಿದೆ. ತಪ್ಪಿತಸ್ಥರನ್ನು ಶಿಕ್ಷಿಸಬೇಕಾಗಿದೆ. ಅದಕ್ಕಾಗಿ ಕ್ರಿಕೆಟ್‌ನ್ನೂ ಮೀರಿ ಎರಡೂ ದೇಶಗಳು ಕಾರ್ಯತಂತ್ರ ರೂಪಿಸಬೇಕಾಗಿದೆ ಎಂದು ವಾಜಪೇಯಿ ಹೇಳಿದರು.

ನಾವು ಬಾಂಬ್‌ಗಳಿಂದ ಆಟ ಶುರು ಮಾಡಿದ್ದೇವೆ. ಈಗ ಕ್ರಿಕೆಟ್‌ಗೆ ಬಂದು ಮುಟ್ಟಿದ್ದೇವೆ. ಇನ್ನು ಇದಕ್ಕಿಂತ ಮುಂದಿನ ಹಂತದ ಕುರಿತು ಕಾರ್ಯತಂತ್ರ ಮಂದುವರಿಸಬೇಕಾಗಿದೆ ಎಂದರು.

ಭಾರತದ ಇಂದಿನ ಸಮಸ್ಯೆಗಳಿಗೆಲ್ಲ ಹಿಂದಿನ ಕಾಂಗೈ ಆಡಳಿತ ಕಾರಣ ಎಂದು ಹೇಳಿದ ಅವರು ನದಿ ಜೋಡಣೆಯಂತಹ ಮಹತ್ತರ ಕಾರ್ಯಗಳನ್ನು ನಾವು ಕಾರ್ಯರೂಪಕ್ಕೆ ತರಲಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅವರು ಮರಳಿ ಅಧಿಕಾರಕ್ಕೆ ಬರುವ ಭರವಸೆಯನ್ನು ವ್ಯಕ್ತಪಡಿಸಿದರು.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X