ಸ್ನೇಹ ಸರಣಿ : ದ್ರಾವಿಡ್ ಮುಡಿಗೆ ಮುಲ್ತಾನ್ ಟೆಸ್ಟ್ ಕ್ಯಾಪ್ಟನ್ ಕ್ಯಾಪ್
ಸ್ನೇಹ ಸರಣಿ : ದ್ರಾವಿಡ್ ಮುಡಿಗೆ ಮುಲ್ತಾನ್ ಟೆಸ್ಟ್ ಕ್ಯಾಪ್ಟನ್ ಕ್ಯಾಪ್
ಅನಿಲ್ ಕುಂಬ್ಳೆ, ಅಗರ್ಕರ್ ಸೇರ್ಪಡೆಯಾಂದಿಗೆ ಬಲಗೊಂಡ ಭಾರತದ ಬೌಲಿಂಗ್
ಮೊದಲ ಪಂದ್ಯದಲ್ಲಿ ದ್ರಾವಿಡ್ ತಂಡವನ್ನು ಮುನ್ನಡೆಸಲಿದ್ದಾರೆ. ನಾನು ಲಾಹೋರ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಗುಣಮುಖನಾಗಿ ಆಡಬಹುದು ಎಂದು ವೈದ್ಯರು ತಿಳಿಸಿದ್ದಾರೆ ಎಂದು ಸೌರವ್ ಗಂಗೂಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಏಕದಿನ ಪಂದ್ಯದಲ್ಲಿ ಯಶಸ್ವಿ ನಾಯಕ ಎನಿಸಿದ ದ್ರಾವಿಡ್ ಟೆಸ್ಟ್‌ನಲ್ಲಿ ಎರಡನೆ ಬಾರಿಗೆ ನಾಯಕರಾಗಿ ಕಣಕ್ಕಿಳಿಯುತ್ತಿದ್ದಾರೆ. ಈ ಹಿಂದೆ ಮೊಹಾಲಿಯಲ್ಲಿ ನಡೆದ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ದ್ರಾವಿಡ್ ಭಾರತವನ್ನು ಮುನ್ನಡೆಸಿದ್ದರು. ಆ ಪಂದ್ಯ ಡ್ರಾಗೊಂಡಿತ್ತು.
ಏಕದಿನ ಪಂದ್ಯಗಳಿಂದ ತಂಡದಿಂದ ಗಾಯಾಳುವಾಗಿ ಹೊರಗುಳಿದಿದ್ದ ಅನಿಲ್ ಕುಂಬ್ಳೆ ಮತ್ತು ಅಗರ್ಕರ್ ಮೊದಲ ಟೆಸ್ಟ್‌ನಲ್ಲಿ ಆಡಲಿದ್ದಾರೆ. ಗಂಗೂಲಿಯವರ ಸ್ಥಾನವನ್ನು ಯುವರಾಜ್ ಸಿಂಗ್ ತುಂಬಲಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications