ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆತನದ ಮಗಳು ಪ್ರಿಯಾಂಕಾ ರಾಜ್ಯದಿಂದ ಸ್ಪರ್ಧಿಸುವ ಸಾಧ್ಯತೆ

By Staff
|
Google Oneindia Kannada News

ಮನೆತನದ ಮಗಳು ಪ್ರಿಯಾಂಕಾ ರಾಜ್ಯದಿಂದ ಸ್ಪರ್ಧಿಸುವ ಸಾಧ್ಯತೆ
ಬಿಜೆಪಿಯ ದಕ್ಷಿಣದ ಹೆಬ್ಬಾಗಿಲು ಮುಚ್ಚಿಸಲು ಪ್ರಿಯಾಂಕಾಳೇ ಬೇಕು ಎನ್ನುತ್ತಿರುವ ರಾಜ್ಯ ಕಾಂಗೈ

  • ದಟ್ಸ್‌ಕನ್ನಡ ಬ್ಯೂರೋ
ಬಳ್ಳಾರಿ : ಕಾಂಗ್ರೆಸ್‌ ಪಕ್ಷದ ಭದ್ರಕೋಟೆ ಎಂದೇ ಖ್ಯಾತಿ ಹೊಂದಿರುವ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಪ್ರಿಯಾಂಕ ವಾದ್ರಾ ಕಣಕ್ಕಿಳಿಯುವ ವದಂತಿಗಳು ರಾಜ್ಯದೆಲ್ಲೆಡೆ ಈಗ ಚರ್ಚೆಗೆ ಗ್ರಾಸವಾಗಿದೆ.

1999ರ ಚುನಾವಣೆಯಲ್ಲಿ ಪ್ರತಿಷ್ಠಿತ ಕ್ಷೇತ್ರವಾಗಿದ್ದ ಬಳ್ಳಾರಿಯಿಂದ ಸೋನಿಯಾ ಗೆದ್ದಿದ್ದರು. ಆದರೆ ಬಳಿಕ ರಾಜಿನಾಮೆ ನೀಡಿದ ಅವರು ಈ ಚುನಾವಣೆಯಲ್ಲಿ ಕೇವಲ ರಾಯ್‌ಬರೆಲಿ ಕ್ಷೇತ್ರದಿಂದ ಮಾತ್ರ ಸ್ಪರ್ಧಿಸುತ್ತಿದ್ದಾರೆ. ಅವರ ಪುತ್ರ ರಾಹುಲ್‌ ಗಾಂಧಿ ಅಮೇಠಿಯಿಂದ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿಯಾಗಿದೆ. ರಾಜ್ಯ ಕಾಂಗೈಗೆ ಮತ್ತೆ ಉಳಿದದ್ದು?

ಕೆಪಿಸಿಸಿ ಈಗಾಗಲೆ ಬಳ್ಳಾರಿಯಿಂದ ನೆಹರೂ ಮನೆತನದವರೆ ಆಭ್ಯರ್ಥಿಯಾಗ ಬೇಕೆಂದು ಮನವಿ ಮಾಡಿದೆ. ಇಲ್ಲಿಯ ವಿಸರ್ಜಿತ ಲೋಕಸಭಾ ಅಭ್ಯರ್ಥಿ ಕೋಳೂರು ಬಸವನಗೌಡ ಸಹ ಪ್ರಿಯಾಂಕ ಸ್ಪರ್ಧೆಗೆ ಒಲವು ತೋರಿದ್ದಾರೆ. ಬಿಜೆಪಿ ಮುಖಂಡರು ಕರ್ನಾಟಕ ದಕ್ಷಿಣದ ಹೆಬ್ಬಾಗಿಲು ಎಂದು ಹೇಳುತ್ತಿದ್ದಾರೆ. ಇದಕ್ಕೆ ಬಲವಾದ ಪ್ರತಿರೋಧ ತರಲು ಪ್ರಿಯಾಂಕ ಸ್ಪರ್ಧಿಸಲೇ ಬೇಕೆಂದು ಹೈಕಮಾಂಡಿಗೆ ರಾಜ್ಯ ನಾಯಕರು ಒತ್ತಡ ತರುತ್ತಿದ್ದಾರೆ.

ಕಳೆದ ಬಾರಿ ಸೋನಿಯಾ ರಾಜ್ಯದಿಂದ ಸ್ಪರ್ಧಿಸಿದ್ದರಿಂದ ಅಧಿಕಾರಕ್ಕೆ ಬಂದಿದ್ದೇವೆ. ಅದಕ್ಕಾಗಿ ಈ ಬಾರಿ ಅವರ ಮನೆತನದವರು ಒಬ್ಬರು ಕರ್ನಾಟಕದಿಂದ ಸ್ಪರ್ಧಿಸಲಿ ಎಂಬುದು ಕಾರ್ಯಕರ್ತರ ಅಭಿಪ್ರಾಯವಾಗಿದೆ. ಕೊನೆ ಕ್ಷಣದಲ್ಲಿ ಅವರು ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ.

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X