ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಜಾತ್ಯತೀತ ರಾಷ್ಟ್ರೀಯತೆ’ ಪ್ರತಿಪಾದಿಸುವ ಕಾಂಗೈ ಪ್ರಣಾಳಿಕೆ ಪ್ರಕಟ

By Staff
|
Google Oneindia Kannada News

‘ಜಾತ್ಯತೀತ ರಾಷ್ಟ್ರೀಯತೆ’ ಪ್ರತಿಪಾದಿಸುವ ಕಾಂಗೈ ಪ್ರಣಾಳಿಕೆ ಪ್ರಕಟ
ಅಯೋಧ್ಯೆ ಸಮಸ್ಯೆಗೆ ಕೋರ್ಟನಿಂದಲೇ ಪರಿಹಾರ, ವಿದೇಶಿ ಮೂಲದ ಪ್ರಶ್ನೆಯನ್ನು ನಿರ್ಧರಿಸುವವರು ಜನ

  • ದಟ್ಸ್‌ಕನ್ನಡ ಬ್ಯೂರೊ
ನವದೆಹಲಿ : 2004ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಆಗಿದೆ. ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಪ್ರಣಾಳಿಕೆಯನ್ನು ಇಂದು ನವದೆಹಲಿಯಲ್ಲಿ ಬಿಡುಗಡೆ ಮಾಡಿದ್ದಾರೆ.

ಜಾತ್ಯತೀತ ರಾಷ್ಟ್ರೀಯತೆ, ಸಂಪೂರ್ಣ ಸಮಾನತೆ, ದಲಿತರು ಸೇರಿದಂತೆ ಸಮಾಜದ ಹಿಂದುಳಿದ ವರ್ಗಗಳ ಬಗ್ಗೆ ವಿಶೇಷ ಕಾಳಜಿ, ಬಿಜೆಪಿ ಆಡಳಿತದಲ್ಲಿ ಕಡೆಗಣಿಸಲ್ಪಟ್ಟ ಕೃಷಿ ಹಾಗೂ ಇತರ ಕ್ಷೇತ್ರಗಳ ಬಗ್ಗೆ ವಿಶೇಷ ಕಾಳಜಿ ವ್ಯಕ್ತಪಡಿಸಿರುವುದು ಪ್ರಣಾಳಿಕೆಯ ಹೈಲೈಟ್ಸ್‌.

ವಿದೇಶಾಂಗ ನೀತಿ, ಆರ್ಥಿಕ ನೀತಿ, ಸಾಮಾಜಿಕ ಸಶಕ್ತತೆ ಮತ್ತು ರಾಷ್ಟ್ರೀಯ ಸುಭಧ್ರತೆ ಕುರಿತು ಇನ್ನು ಎರಡು ದಿನಗಳಲ್ಲಿ ‘ ವಿಶನ್‌ ಡಾಕ್ಯುಮೆಂಟ್‌’ ಎಂಬ ಸಮಗ್ರ ಪುಸ್ತಕವನ್ನೆ ಬಿಡುಗಡೆಗೊಳಿಸಲಾಗುವುದು. ಪಕ್ಷವು ಪ್ರತಿ ವರ್ಷ ಅಕ್ಟೋಬರ್‌ ತಿಂಗಳಲ್ಲಿ ‘ಅಭಿವೃದ್ಧಿ ವರದಿ’ ಯನ್ನು ಜನಗಳಿಗೆ ನೀಡಲಿದೆ ಹಾಗೂ ತಮ್ಮ ಪಕ್ಷವು ‘ಜಾತ್ಯತೀತ ರಾಷ್ಟ್ರೀಯತೆ’ಯನ್ನು ಅನುಸರಿಸಲಿದೆ ಎಂದು ಸೋನಿಯಾಗಾಂಧಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಮತ್ತೆ ಬಂದರೆ ವಿದೇಶಿ ಮೂಲದವರಿಗೆ ಭಾರತದ ಪರಮೋಚ್ಚ ಸ್ಥಾನ ನಿರಾಕರಿಸುವ ಕಾನೂನು ತರುವುದಾಗಿ ಬಿಜೆಪಿ ಅಧ್ಯಕ್ಷ ವೆಂಕಯ್ಯ ನಾಯ್ಡು ಹೇಳಿಕೆಯನ್ನು ಪ್ರಸ್ತಾಪಿಸಿದಾಗ, ‘ ಅವರು ( ಬಿಜೆಪಿ) ಇಷ್ಟರವರೆಗೆ ಯಾಕೆ ಆ ಕಾನೂನನ್ನು ತಂದಿಲ್ಲ ? ಚುನಾವಣೆಯ ಹೊತ್ತಲ್ಲಿ ಮಾತ್ರ ವಿದೇಶಿ ಮೂಲದ ಕುರಿತು ಯಾಕೆ ಮಾತಾಡುತ್ತಾರೆ? ಎಂದು ವಾದಿಸಿದ ಸೋನಿಯಾ, ’ ಇಂಥ ಪ್ರಶ್ನೆಗಳನ್ನು ನಿರ್ಧರಿಸುವವರು ಅವರಲ್ಲ , ಈ ದೇಶದ ಜನಗಳು’ ಎಂದು ಪ್ರತಿಪಾದಿಸಿದ್ದಾರೆ.

ಸೋಮವಾರ ಬೆಳಗ್ಗೆ ದೆಹಲಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಪ್ರಣಾಳಿಕೆ ಬಿಡುಗಡೆ ಮಾಡಿ, ಆನಂತರ ಪ್ರತಿಪಕ್ಷಗಳ ಮೇಲೆ ಹರಿಹಾಯ್ದರು. ಈ ಸಂದರ್ಭದಲ್ಲಿ ಹಾಜರಿದ್ದ ಪಕ್ಷದ ಹಿರಿಯ ಮುಖಂಡರಾದ ಮನಮೋಹನ ಸಿಂಗ್‌ ಮತ್ತು ಪ್ರಣವ್‌ ಮುಖರ್ಜಿ ಮಾತನಾಡಿದರು. ‘ ನಾವು ಬಂಡವಾಳ ಹಿಂತೆಗೆತ ಮತ್ತು ಕೃಷಿ ಕುರಿತು ಬಿಜೆಪಿ ಆಡಳಿತ ಅನುಸರಿಸಿದ ವಿಶೇಷ ನೀತಿಯನ್ನೇ ಅನುಸರಿಸುತ್ತೇವೆ. ಅಯೋಧ್ಯೆ ವಿಚಾರದಲ್ಲಿ ಸ್ಪಷ್ಟವಾದ ನಿಲುವು ಹೊಂದಿದ್ದೇವೆ. ನಾವು ನ್ಯಾಯಾಲಯ ತೀರ್ಪನ್ನು ಗೌರವಿಸುತ್ತೇವೆ. ಅಧಿಕಾರಕ್ಕೆ ಬಂದರೆ ವಾರ್ಷಿಕ ಒಂದು ಕೋಟಿ ಉದ್ಯೋಗ ಸೃಷ್ಠಿಸುತ್ತೇವೆ’ ಎಂಬ ಭರವಸೆಗಳನ್ನು ಈರ್ವರು ನಾಯಕರು ಕೊಟ್ಟರು.

ಪ್ರಣಾಳಿಕೆಯಲ್ಲಿ ಇನ್ನೇನಿದೆ :

ಪ್ರಣಾಳಿಕೆಯು 6 ಆಡಳಿತಾತ್ಮಕ ಅಂಶಗಳನ್ನು ಒಳಗೊಂಡಿರುತ್ತದೆ.

  • ಸಾಮಾಜಿಕ ಸದ್ಭಾವನೆ
  • ಯುವ ರೋಜ್‌ಗಾರ್‌
  • ಗ್ರಾಮೀಣ ವಿಕಾಸ
  • ಆರ್ಥಿಕ ನವೋತ್ಥಾನ
  • ಮಹಿಳಾ ಸಶಕ್ತೀಕರಣ
  • ಸಮಾನ ಅವ್‌ಸಾರ್‌
ಇದರೊಂದಿಗೆ

-ಅರ್ಥಿಕ ಅಭಿವೃದ್ಧಿ ಪ್ರಮಾಣದಲ್ಲಿ ಹೆಚ್ಚಳ
- ಸರ್ವರಿಗೂ ಉದ್ಯೋಗಕ್ಕಾಗಿ ಕಾನೂನು
-ಕಾರ್ಮಿಕ ನಿರ್ಮಿತ ವಸ್ತುಗಳ ರಫ್ತಿಗೆ ಮನ್ನಣೆ
-ಗುಡಿ ಮತ್ತು ಸಣ್ಣ ಕೈಗಾರಿಕಾ ಬೆಳವಣಿಗೆಗೆ ಆದ್ಯತೆ
- ಸ್ವ ಉದ್ಯೋಗಕ್ಕೆ ಮಹತ್ವ
-ಸಂಸ್ಥೆಗಳ ಉಸ್ತುವಾರಿಗೆ ರಾಷ್ಟ್ರೀಯ ಆಯೋಗ ರಚನೆ
- ಉದ್ಯೋಗ ವ್ಯವಹಾರದ ಕಾನೂನು ತಿದ್ದುಪಡಿ
-ಕೃಷಿಯಲ್ಲಿ ಸಾರ್ವಜನಿಕ ಬಂಡವಾಳ ಹೂಡಿಕೆ
-ಒಣ ಮತ್ತು ಮರುಭೂಮಿಗಳಿಗೆ ವಿಶೇಷ ಸವಲತ್ತು
-ರೈತರಿಗೆ ವಿಮೆ
-ಮಹಿಳಾ (ಶೇ.33) ಮಸೂದೆಯ ಜಾರಿಗೆ
-ಶಿಕ್ಷಣಕ್ಕೆ ಸಾರ್ವಜನಿಕ ಹಣದ ಹೆಚ್ಚಿನ ಬಳಕೆ
-ವೈಜ್ಞಾನಿಕ ಸಂಸ್ಥೆ ಮತ್ತು ಉನ್ನತ ವ್ಯಾಸಂಗಕ್ಕೆ ಅದ್ಯತೆ

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X