ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ನೋವು, ಹಸಿವು ತೋರಿಸೊ ಕಾಂಗೈನಿಂದ ದೇಶದ ಘನತೆ ಭಂಗ’

By Staff
|
Google Oneindia Kannada News

‘ನೋವು, ಹಸಿವು ತೋರಿಸೊ ಕಾಂಗೈನಿಂದ ದೇಶದ ಘನತೆ ಭಂಗ’
ರಾಜ್ಯ ಸಂಯುಕ್ತ ಜನತಾದಳದ ಅಸ್ತಿತ್ವ ಪ್ರಶ್ನಿಸಿದ ವೆಂಕಯ್ಯನಾಯ್ಡು

ಬೆಂಗಳೂರು : ಒಮ್ಮೆ ಮಾಡಿದ ತಪ್ಪನ್ನು ನಾವು ಮತ್ತೆ ಮಾಡಲು ಇಷ್ಟ ಪಡುವುದಿಲ್ಲ. ಕಳೆದ ಬಾರಿ ಜೆಡಿ-ಯು ಜೊತೆ ಕರ್ನಾಟಕದಲ್ಲಿ ಹೊಂದಾಣಿಕೆ ಮಾಡಿಕೊಂಡ ಪರಿಣಾಮ ಎಲ್ಲರಿಗೂ ಗೊತ್ತಿದೆ. ಹಳೆ ತಪ್ಪನ್ನು ಮತ್ತೆ ಮತ್ತೆ ಮಾಡಲು ನಾವು ಇಷ್ಟ ಪಡುವುದಿಲ್ಲ . ಆದರೂ ಅವರ ಜೊತೆಗಿನ ಹೊಂದಾಣಿಕೆಯನ್ನು ನಿರಾಕರಿಸುವಂತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ವೆಂಕಯ್ಯನಾಯ್ಡು ಹೇಳಿದ್ದಾರೆ. ಅವರು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡುತ್ತಿದ್ದರು.

ಕರ್ನಾಟಕದಲ್ಲಿ ಜೆಡಿ-ಯು ಅಸ್ತಿತ್ವವಾದರು ಏನಿದೆ? ಆವರ ಪಕ್ಷದ ಶಕ್ತಿಯಾದರು ಎಲ್ಲಿದೆ? ದೇವೇಗೌಡರಾದರೆ ತಮ್ಮದೆ ಶೈಲಿಯಲ್ಲಿ ಪಕ್ಷ ಕಟ್ಟಿದ್ದಾರೆ. ಅದರ ಪ್ರಭಾವವಿದೆ. ಇವರ ಬಲ ಎಲ್ಲಿ ದೆ? ಕಳೆದ ಚುನಾವಣೆಯಲ್ಲಿ ಬಿಜೆಪಿಯ ಕೇಂದ್ರ ನಾಯಕರ ಒತ್ತಡಕ್ಕೆ ಮಣಿದ ರಾಜ್ಯ ಘಟಕ ಬಲಿಯಾಗಬೇಕಾಯಿತು. ಯಾವ ರೀತಿಯ ಬೆಳವಣಿಗೆಗಳು ಆಗುತ್ತವೆ ಮುಂದೆ ನೋಡೊಣ ಎಂದು ಪತ್ರಕರ್ತರ ಪ್ರಶ್ನೆಗೆ ವೆಂಕಯ್ಯ ನಾಯ್ಡು ಉತ್ತರಿಸಿದರು.

ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಎನ್‌ಡಿಎ ಸಂಚಾಲಕ , ಜೆಡಿಯು ಮುಖಂಡ ಜಾರ್ಜ್‌ ಫೆರ್ನಾಂಡೀಸ್‌ ರಾಜ್ಯದಲ್ಲಿ ಬಿಜೆಪಿ ಹೊಂದಾಣಿಕೆಗೆ ಒಪ್ಪದಿದ್ದರೆ ಒಂಟಿಯಾಗಿ ಪಕ್ಷ ಚುನಾವಣೆ ಎದುರಿಸಲಿದೆ ಎಂದು ಹೇಳಿದ್ದರು. ಆ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ, ಅವರೊಡನೆ ಚರ್ಚಿಸಿ ನಿರ್ಣಯ ಕೈಗೊಳ್ಳುತ್ತೇನೆ ಎಂದು ಹೇಳಿದರು.

ಮಾರ್ಚ್‌ 21ರಂದು ಬಿಜೆಪಿ ಕೇಂದ್ರೀಯ ಸಮಿತಿ ಸಭೆ ಸೇರಿ ಟಿಕೆಟ್‌ ಹಂಚಿಕೆಯ ಕುರಿತು ಬಹುತೇಕ ಎಲ್ಲಾ ನಿರ್ಧಾರಗಳನ್ನು ಕೈಗೊಳ್ಳಲಿದೆ. ಮಾರ್ಚ್‌ 24ರಂದು ಸಂಪೂರ್ಣ ಪಟ್ಟಿ ಮಾಡಿ ಮುಗಿಸಲು ನಿರ್ಧರಿಸಿದೆ ಎಂದು ಹೇಳಿದರು.

ಕಾಂಗೈ ‘ಭ್ರಷ್ಟ ಮತ್ತು ಋಣಾತ್ಮಕ’ ಪ್ರಚಾರ ಮಾಡುತ್ತಿದೆ. ಅಳು, ನೋವು, ನಿದ್ದೆ ,ಆಯಾಸ, ಹಸಿವು ಮುಂತಾದುವುಗಳನ್ನು ತೋರಿಸಿ ದೇಶದ ಘನತೆಗೆ ಕುತ್ತು ತರುತ್ತಿದೆ ಎಂದು ವೆಂಕಯ್ಯಆರೋಪಿಸಿದರು. ಕಾಂಗೈ ತನ್ನದೇ ಆಡಳಿತವಿರುವ ರಾಜ್ಯದಲ್ಲಿ ರೈತರನ್ನು ತುಳಿಯುತ್ತಿದೆ. ಇಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅವರು ಆಂಧ್ರ ಸರಕಾರದ ಹಾಗೆ ಸಾಲ ನೀಡುತ್ತೇವೆ ಎಂದು ಹೇಳುವ ಮೂಲಕ ಜನಗಳನ್ನು ಹಾದಿ ತಪ್ಪಿಸಲು ಸಾಧ್ಯವಿಲ್ಲ. ಬೇಕಾದರೆ ನಾವು ವಾಜಪೇಯಿ ಸರಕಾರದ ಸಾಧನೆ ಕುರಿತು ಅವರೊಡನೆ ಚರ್ಚಿಸಲು ತಯಾರಿದ್ದೇವೆ ಎಂದು ಹೇಳಿದರು.

ಬಳ್ಳಾರಿಯಿಂದ ಮತ್ತೆ ಸೋನಿಯಾ ಸ್ಪರ್ಧಿಸಲಿಕ್ಕಿಲ್ಲ. ಈ ಹಿಂದೆ ಗೆದ್ದು ಕ್ಷೇತ್ರ ತ್ಯಜಿಸಿದವರ ಪಾಡು ನಿಮಗೆ ಗೊತ್ತಿದೆ. ರಾಜ್ಯದಲ್ಲಿ ಎಐಎಡಿಎಮ್‌ಕೆ ಜೊತೆ ಹೊಂದಾಣಿಕೆ ಅಗತ್ಯವೆನಿಸಿದಲ್ಲಿ ಮಾಡಲಾಗುವುದು ಎಂದು ಹೇಳಿದರು.

ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿ ತಮ್ಮ ಕ್ಷೇತ್ರವನ್ನ ನಿರ್ಲಕ್ಷಿಸಿದ್ದೀರಿ ಎಂಬ ಕೃಷ್ಣರ ಆರೋಪಕ್ಕೆ, ರಾಜ್ಯಕ್ಕೆ 50, 000 ಟನ್‌ ಬರಪರಿಹಾರ ಆಹಾರ ಧಾನ್ಯ ಬಂದದ್ದು ನಾನು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಆಗಿದ್ದಾಗ. ಬಳ್ಳಾರಿಯ 3,000 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್‌ ಎಲ್ಲಿ ಹೋಯಿತು ಎಂದು ಅವರು ಮೊದಲು ತಿಳಿಸಲಿ ಎಂದು ವ್ಯಂಗ್ಯವಾಡಿದರು.

ಗೋಷ್ಠಿಯಲ್ಲಿ ಹಾಜರಿದ್ದ ಪಕ್ಷದ ರಾಜ್ಯಾಧ್ಯಕ್ಷ ಅನಂತ್‌ ಕುಮಾರ್‌ ಮಾ.18ರ ಗುರುವಾರದಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ರಾಜ್ಯದ ಆಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X