ಅಮರನಾಥ ಶೆಟ್ಟಿ ಸಹಿತ 19 ಮಂದಿ ಚುನಾವಣೆ ಸ್ಪರ್ಧೆಗೆ ಅನರ್ಹ
ಅಮರನಾಥ ಶೆಟ್ಟಿ ಸಹಿತ 19 ಮಂದಿ ಚುನಾವಣೆ ಸ್ಪರ್ಧೆಗೆ ಅನರ್ಹ
ಪ್ರಜಾಪ್ರತಿನಿಧಿ ಕಾಯಿದೆ11 ನೇ ಎ ಕಲಮ್ಮಿನಂತೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳು ವೆಚ್ಚದ ವಿವರವನ್ನು ಆಯೋಗಕ್ಕೆ ಸಲ್ಲಿಸಬೇಕಿತ್ತು.
ಪ್ರಜಾಪ್ರತಿನಿಧಿ ಕಾಯಿದೆ11 ನೇ ಎ ಕಲಮ್ಮಿನಂತೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳು ವೆಚ್ಚದ ವಿವರವನ್ನು ಆಯೋಗಕ್ಕೆ ಸಲ್ಲಿಸಬೇಕಿತ್ತು. ನಿಗದಿತ ಅವಧಿಯಲ್ಲಿ ಸಲ್ಲಿಸದ ಅಭ್ಯರ್ಥಿಗಳನ್ನು ಮೂರು ವರ್ಷಗಳವರೆಗೆ ಅನರ್ಹಗೊಳಿಸುವ ಅಧಿಕಾರವನ್ನು ಆಯೋಗ ಹೊಂದಿದೆ. ಆದರಂತೆ 19 ಮಂದಿಯನ್ನು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಆಯೋಗ ನಿರ್ದೇಶಿಸಿದೆ. ದೇಶದಲ್ಲಿ ಒಟ್ಟು 3,300 ಮಂದಿಯನ್ನು ಅನರ್ಹಗೊಳಿಸಲಾಗಿದೆ.
ಕ್ರಿಮಿನಲ್ ಆರೋಪ ಹೊಂದಿದ ಅಥವಾ ಅಕ್ರಮ ಅಪರಾಧ ಎಸಗಿದ ಅಭ್ಯರ್ಥಿಗಳನ್ನು ಕೂಡಾ ಅನರ್ಹಗೊಳಿಸಲು ಆಯೋಗಕ್ಕೆ ಅಧಿಕಾರವಿದೆ. ಆದರೆ ಅಂತಹ ಅಭ್ಯರ್ಥಿಗಳು ರಾಷ್ಟ್ರಪತಿಗೆ ಮೇಲ್ಮನವಿ ಸಲ್ಲಿಸಬಹುದು. ಆರೋಪ ಸಾಬೀತಾದಲ್ಲಿ 6 ವರ್ಷಗಳ ಕಾಲ ಅನರ್ಹಗೊಳಿಸಲು ಚುನಾವಣಾ ಆಯೋಗಕ್ಕೆ ಅಧಿಕಾರವಿದೆ.
ಕರ್ನಾಟಕದಲ್ಲಿ ಅನರ್ಹಗೊಂಡ ಅಭ್ಯರ್ಥಿಗಳು
| ಅಭ್ಯರ್ಥಿ | ವಿಧಾನ ಸಭೆ ಕ್ಷೇತ್ರ | ಅಮಾನತು ಅಂತ್ಯಗೊಳ್ಳುವ ದಿನಾಂಕ |
| ಬಡಿಗೆ ಅಣ್ಣಪ್ಪ ತಮ್ಮಣ್ಣ | ಕಾಗವಾಡ | 7.6. 2004 |
| ಎ.ಬುಗ್ಗಯ್ಯ | ಗುರುಮಿಟ್ಕಲ್ | 7.6. 2004 |
| ವಿಶ್ವನಾಥ ಮಾಲಕಪ್ಪ | ಚಿತ್ತಾಪುರ | 7.8. 2004 |
| ಜಿ.ರಾಮಪ್ಪ | ಹೊಳಲ್ಕೆರೆ | 7.8. 2004 |
| ಬಿ.ಶಿವನಂಜಪ್ಪ | ಗುಬ್ಬಿ | 7.8. 2004 |
| ಭೀಮಣ್ಣ ಕೊಳ್ಳೆ | ಭಾಲ್ಕಿ | 8.10. 2004 |
| ಪಾಯ್ಗೆ ವೈಜನಾಥ್ | ಹುಲಸೂರು (ಮೀಸಲು) | 8.10. 2004 |
| ಎಚ್ ಮಹದೇವಿ | ಹುಲಸೂರು | 8.10. 2004 |
| ರಾಜೇಂದ್ರ ಗೋಪು ಚೌಹಾಣ್ | ಹುಲಸೂರು | 8.10. 2004 |
| ವಿಠ್ಠಲ್ ಸಿಪ್ಪಿಕ್ಕರ್ | ಹುಲಸೂರು | 8.10. 2004 |
| ಎಂ.ಎ.ಹನನ್ ಮಾಲಿಕ್ | ಬೀದರ್ | 8.10. 2004 |
| ಅಬೂಬಕರ್ ಕೆಂಜಾಲ್ | ಸುರತ್ಕಲ್ | 8.10. 2004 |
| ಹಾಲಪ್ಪ ದಾಸನ್ನರ | ಹೊನ್ನಾಳಿ | 8.10. 2004 |
| ಅಮರನಾಥ ಶೆಟ್ಟಿ | ಮೂಡಬಿದಿರೆ | 7.11. 2004 |
| ಕೆ.ಎಚ್.ಹನುಮಂತೇಗೌಡ | ತುರುವೇಕೆರೆ | 7.12. 2004 |
| ಬಿ.ಜಿ.ಪೆರಿರಾ | ಮೂಡಬಿದರೆ | 7.12. 2004 |
| ಅಷ್ಟುದ್ದೀನ್ | ಹುಮ್ನಾಬಾದ್ | 8.12. 2004 |
| ಚೆನ್ನ ಬಸವಾನಂದ ಸ್ವಾಮಿ | ಹುಮ್ನಾಬಾದ್ | 8.12. 2004 |
| ಎಂ.ಜಿ. ದಯಾನಂದ್ ರಂಜೋಲ್ಕೆನಿ | ಹುಮ್ನಾಬಾದ್ | 8.12. 2004 |
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications