ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್‌ಎಸ್‌ಎಸ್‌ ಕಂಡಂತೆ ಗಾಂಧಿ ಮಾಡಿದ ಎರಡು ದೊಡ್ಡ ತಪ್ಪು ..

By Staff
|
Google Oneindia Kannada News

ಆರ್‌ಎಸ್‌ಎಸ್‌ ಕಂಡಂತೆ ಗಾಂಧಿ ಮಾಡಿದ ಎರಡು ದೊಡ್ಡ ತಪ್ಪು ..
ನೆಹರೂಗೆ ಪ್ರಧಾನಿ ಪಟ್ಟ ಕಟ್ಟಿದ್ದು ಐತಿಹಾಸಿಕ ಪ್ರಮಾದ -ಸುದರ್ಶನ್‌

ಜೈಪುರ : ಗ್ರಾಮೀಣ ಪ್ರದೇಶ್‌ಗಳ ಕಿಂಚಿತ್ತೂ ಜ್ಞಾನವಿರದ ಜವಾಹರಲಾಲ್‌ ನೆಹರೂರವರನ್ನು ಪ್ರಧಾನಿ ಪಟ್ಟಕ್ಕೆ ಏರಿಸಿದ್ದು ಮಹಾತ್ಮಾ ಗಾಂಧಿ ಮಾಡಿದ ಬಹು ದೊಡ್ಡ ಪ್ರಮಾದ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘ (ಆರ್‌ಎಸ್‌ಎಸ್‌) ಅಭಿಪ್ರಾಯಪಟ್ಟಿದೆ.

ಆರ್‌ಎಸ್‌ಎಸ್‌ ಪರಿವಾರದದ ಸೋಮವಾರದ (ಮಾ.15) ಸಭೆಯಲ್ಲಿ ಮಹಾತ್ಮಗಾಂಧಿಯವರ ಕುರಿತು ಆರ್‌ಎಸ್‌ಎಸ್‌ ತನ್ನ ನಿಲುವುಗಳನ್ನು ವ್ಯಕ್ತಪಡಿಸಿತು ಮಂಡಿಸಿತು. ‘ಸಂಸದ್‌ ಮೇ ಸಾಂಸ್ಕೃತಿಕ್‌ ರಾಷ್ಟ್ರವಾದ್‌’ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಆರ್‌ಎಸ್‌ಎಸ್‌ ಪರಿವಾರದ ಈ ಸಭೆ ಸೇರಿತ್ತು. ರಾಜ್ಯಸಭೆಯ ಮಾಜಿ ಸಂಸದ ಮಹೇಶಚಂದ್ರ ಶರ್ಮ ಪುಸ್ತಕವನ್ನು ಬಿಡುಗಡೆ ಮಾಡಿದರು.

ಮಹಾತ್ಮಾ ಗಾಂಧಿ ಎರಡು ದೊಡ್ಡ ತಪ್ಪು ಮಾಡಿದ್ದಾರೆ. ನೆಹರೂ ಅವರನ್ನು ಪ್ರಧಾನಿ ಮಾಡಿದ್ದು ಮೊದಲ ತಪ್ಪಾದರೆ, ಖಿಲಾಫತ್‌ ಚಳವಳಿಯನ್ನು ಬೆಂಬಲಿಸಿದ್ದು ಎರಡನೇ ತಪ್ಪು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥರು ಅಭಿಪ್ರಾಯಪಟ್ಟರು. ನೆಹರೂ ಬದಲಿಗೆ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ರನ್ನು ಗಾಂಧೀಜಿ ಪ್ರಧಾನಿ ಪದವಿಗೆ ತಂದಿದ್ದರೆ ಸ್ವತಂತ್ರ ಭಾರತದ ಇತಿಹಾಸವೇ ಬದಲಾಗುತ್ತಿತ್ತು ಎಂದು ಆರ್‌ಎಸ್‌ಎಸ್‌ ನಾಯಕ ಸುದರ್ಶನ್‌ ಅಭಿಪ್ರಾಯಪಟ್ಟರು.

ನೆಹರೂಗೆ ಗ್ರಾಮೀಣ ಪ್ರದೇಶಗಳ ಜನ ಜೀವನದ ಗಂಧಗಾಳಿಯೇ ಇರಲಿಲ್ಲ. ಅವರಿಗೆ ಗೊತ್ತಿದ್ದುದು ಪಾಶ್ಚಾತ್ಯ ಮಾದರಿಯ ನಗರೀಕರಣ ಮಾತ್ರ. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಅವರು ಪಳಗಿದವರೂ ಆಗಿರಲಿಲ್ಲ. ಇಂದು ನಾವು ಇತರರ ಅನುಕರಣೆ ಮಾಡುತ್ತಿದ್ದೇವೆ. ನಾವು ನಮ್ಮ ಸ್ವ-ಪ್ರತಿಷ್ಠೆಯನ್ನು ಅರಿತರೆ ಇಡೀ ವಿಶ್ವವೇ ನಮ್ಮನ್ನು ಹಿಂಬಾಲಿಸುತ್ತದೆ. ಇದು ವಾಸ್ತವ್ಯಕ್ಕೆ ಬರಲು ಸಾವಿರಾರು ವರ್ಷಗಳ ಹಳೆಯ ನಾಗರಿಕತೆಯ ಭದ್ರ ಬುನಾದಿಯನ್ನು ಹೊಂದಿರುವ ನಮ್ಮ ಸಾಂಸ್ಕೃತಿಕ ರಾಷ್ಟ್ರೀಯವಾದವನ್ನು ನಾವು ಮನವರಿಕೆ ಮಾಡಿಕೊಳ್ಳಬೇಕು.

ಮುಸ್ಲಿಂ ಜನಾಂಗ ತಮ್ಮ ಸಂಕುಚಿತ ಮೌಢ್ಯವನ್ನು ತೊರೆದು ರಾಷ್ಟ್ರೀಯ ಐಕ್ಯತೆಯ ಹಾದಿಯಲ್ಲಿ ನಡೆಯಬೇಕು. ಇತರ ಬಲಾಢ್ಯ ಜನಾಂಗಗಳು ನಿಮ್ಮ ವಿರೋಧಿಗಳಾಗಿ ನಿಂತಿವೆ ಎನ್ನುವಂತಹ ತಪ್ಪು ತಿಳುವಳಿಕೆಯನ್ನು ಮನಸ್ಸಿನಿಂದ ಹೊಡೆದೋಡಿಸಿ ರಾಷ್ಟ್ರೀಯ ಭಾವೈಕ್ಯತೆಯಲ್ಲಿ ಭಾಗಿಗಳಾಗಬೇಕು. ದೇಶದ ಪ್ರತಿಯಾಬ್ಬ ಪ್ರಜೆಗೂ ಧಾರ್ಮಿಕ ಸ್ವಾತಂತ್ರ್ಯವಿದೆ. ಪ್ರತಿಯಾಬ್ಬರೂ ತಮಗಿಷ್ಟವೆನಿಸಿದ ಧರ್ಮವನ್ನು ಅನುಸರಿಸಬಹುದು ಎಂದು ಸುದರ್ಶನ್‌ ಹೇಳಿದರು.

ಮೂಲಭೂತವಾದಿಗಳು ಮುಸ್ಲಿಂರಲ್ಲಿ ಅನಗತ್ಯವಾದ ಅಪನಂಬಿಕೆಗಳನ್ನು ಹುಟ್ಟಿಸಲೆಂದೇ ಇದ್ದಾರೆ. ಅವುಗಳನ್ನೆಲ್ಲ ಮೀರಿ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಎಲ್ಲರೂ ಒಂದಾದಾದರೆ ಪ್ರಬುದ್ಧ ಮತ್ತು ಪ್ರಕಾಶಮಾನ ಭಾರತದ ನಿರ್ಮಾಣ ಮಾಡಬಹುದು ಎಂದು ಸುದರ್ಶನ್‌ ಅಭಿಪ್ರಾಯಪಟ್ಟರು.

(ಪಿಟಿಐ)

ಗಾಂಧೀಜಿ ಕುರಿತ ಆರ್‌ಎಸ್‌ಎಸ್‌ ನಿಲುವನ್ನು ಒಪ್ಪುವಿರಾ ?

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X