ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಸಫಲ ಅಟಲ್‌ ಮತ್ತು ವಿಫಲ ಕೃಷ್ಣ’ ರಾಜ್ಯಬಿಜೆಪಿ ಪ್ರಚಾರ ಮಂತ್ರ

By Staff
|
Google Oneindia Kannada News

‘ಸಫಲ ಅಟಲ್‌ ಮತ್ತು ವಿಫಲ ಕೃಷ್ಣ’ ರಾಜ್ಯಬಿಜೆಪಿ ಪ್ರಚಾರ ಮಂತ್ರ
ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಸ್ವತಂತ್ರ ಸ್ಪರ್ಧೆ

ಬೆಂಗಳೂರು : ಭ್ರಷ್ಟ ಕಾಂಗ್ರೆಸ್‌ ಸರಕಾರದ ‘ಆಡಳಿತ ವಿರೋಧಿ ಅಲೆ’ ಯ ಲಾಭವನ್ನು ಪಡೆಯುವ ಮೂಲಕ ಬಿಜೆಪಿ ಬಹುಮತದೊಂದಿಗೆ ಆಡಳಿತಕ್ಕೆ ಬರಲಿದೆ ಎಂದು ಬಿಜೆಪಿ ಹೇಳಿಕೊಂಡಿದೆ.

ಮೊದಲ ಬಾರಿ ಬಿಜೆಪಿ ಆಡಳಿತಕ್ಕೆ ಬರುವ ಸಾಧ್ಯತೆಯ ಸತ್ಯಾಂಶವನ್ನು ನಾವೀಗ ಕರ್ನಾಟಕದಲ್ಲಿ ಕಾಣುತಿದ್ದೇವೆ. ಈ ಅವಕಾಶದ ಪೂರ್ಣ ಪ್ರಯೋಜನ ಪಡೆದುಕೊಳ್ಳುತ್ತೇವೆ ಎಂದು ರಾಜ್ಯ ಬಿಜೆಪಿ ಚುನಾವಣೆ ಉಸ್ತುವಾರಿ ವಹಿಸಿರುವ ಬಿಜೆಪಿ ಮುಖಂಡ ಹಾಗೂ ಕೇಂದ್ರ ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ. ಅವರು ಪಕ್ಷದ ಚುನಾವಣಾ ಸಿದ್ಧತೆ ಕುರಿತ ಸಭೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡುತಿದ್ದರು.

ಈ ಚುನಾವಣೆಯಲ್ಲಿ ಬಿಜೆಪಿಗೆ ಕರ್ನಾಟಕವು ದಕ್ಷಿಣದ ಹೆಬ್ಬಾಗಿಲು . ನಾವು ಇಲ್ಲಿ ಎರಡು ಅಂಶಗಳನ್ನು ಚುನಾವಣೆಯಲ್ಲಿ ಅಳವಡಿಸಿಕೊಳ್ಳಲಿದ್ದೇವೆ. ‘ಆಟಲ್‌ ವ್ಯಕ್ತಿತ್ವ ಮತ್ತು ಆಡಳಿತದ ಯಶಸ್ಸು ’ ಮೊದಲನೆಯದು. ‘ಕೃಷ್ಣ ಸರಕಾರದ ವಿರುದ್ಧದ ಆಡಳಿತ ವಿರೋಧಿ ಅಲೆ’ ಎರಡನೆಯದು. ಇವೆರಡೂ ಕರ್ನಾಟಕದಲ್ಲಿ ಬಿಜೆಪಿಯ ಚುನಾವಣಾ ಮಂತ್ರಗಳು ಎಂದು ಜೇಟ್ಲಿ ತಿಳಿಸಿದರು.

ಕರ್ನಾಟಕದಲ್ಲಿ ಆಡಳಿತ ವಿರೋಧಿ ಅಲೆ ಎದ್ದಿದ್ದು , ಜನರು ಅಸಂತುಷ್ಟರಾಗಿದ್ದಾರೆ. ಈ ಅಸಂತುಷ್ಟ ಮತದಾರರು ಆಡಳಿತ ಸರಕಾರವನ್ನು ಹೊರಹಾಕುತ್ತಾರೆ. ಅದಕ್ಕಾಗಿ ನಾವು ನಿರಂತರವಾಗಿ ಅವರ ಅಸಮಾಧಾನದ ಕಾರಣವವನ್ನು ನೆನಪಿಸುತ್ತೇವೆ. ನಮಗೆ ಕರ್ನಾಟಕದ ಚುನಾವಣೆ ಅತಿ ಮುಖ್ಯವಾಗಿದೆ ಎಂದು ಜೇಟ್ಲಿ ಹೇಳಿದರು .

ಕಳೆದ ಐದು ವರ್ಷಗಳ ಕಾಂಗೈ ಭ್ರಷ್ಟ™™™ಆಡಳಿತದಿಂದಾಗಿ ರಾಜ್ಯದಲ್ಲಿ ಕಾಂಗೈ ಶಕೆ ಕೊನೆಗೊಳ್ಳಲಿದೆ. ತೆಲಗಿ ಹಗರಣದಲ್ಲಿ ಭಾಗಿಯಾದವರನ್ನು ಒಳಗೊಂಡಂತೆ ರಾಜ್ಯ ಅತಿಭ್ರಷ್ಟ ನಾಯಕರನ್ನು ಕಂಡಿದೆ. ಕೃಷ್ಣ ಮಾತ್ರ ನಿಷ್ಕಿೃಯ ನೀತಿ ಅನುಸರಿಸಿದ್ದಾರೆ. ಸರಕಾರದ ಮುಖ್ಯ ನಾಯಕರು ಹಗರಣಗಳಲ್ಲಿ ಒಳಗೊಂಡಿದ್ದಾರೆ. ಹಲವು ಸಚಿವರ ತೆಲಗಿ ಸಾಂಗತ್ಯವನ್ನು ಕೃಷ್ಣ ನಿರಾಕರಿಸಲಾಗದಂತಹ ಘಟನೆಗಳೇ ನಡೆದಿದೆ. ರಾಜ್ಯ ಸಚಿವಾಲಯದ ಹೊಸ ಭ್ರಷ್ಟಾಚಾರದ ಪ್ರಕರಣಗಳೂ ಹೊರಬರಲಿದೆ. ಇದರಲ್ಲಿ ಕೃಷ್ಣ ರ ಪಾತ್ರ ಇಲ್ಲವೆನ್ನುವಂತಿಲ್ಲ. ಇವರೇ ಅವರಿಗೆ ಅಭಯ ನೀಡಿದ್ದಾರೆ. ಪಕ್ಷದ ಆಂತರಿಕ ಅಧ್ಯಯನದಿಂದಾಗಿ ರಾಜ್ಯದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಬೆಂಬಲ ಪಕ್ಷಕ್ಕೆ ವ್ಯಕ್ತವಾಗಿರುವುದು ತಿಳಿದಿದೆ ಎಂದು ಜೇಟ್ಲಿ ಹೇಳಿದರು.

ರಾಜ್ಯದಲ್ಲಿ ತಳಮಟ್ಟದ ಮತದಾನ ಕ್ರಮಗಳಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಜನ ಸಾಂಪ್ರದಾಯಿಕ ಮತದಾನ ಶೈಲಿಯನ್ನು ಬಿಟ್ಟುಬಿಟ್ಟಿದ್ದಾರೆ. ಅಂದರೆ ಇದರರ್ಥ ಬಿಜೆಪಿಯೆಡೆಗೆ ಒಲವು ತೋರಿಸಿದ್ದಾರೆ ಎಂದರ್ಥ. ರಾಜ್ಯದಲ್ಲಿ ಸ್ವಬಲದಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ. ಮುಖ್ಯಮಂತ್ರಿ ಯಾರೆಂಬುದನ್ನು ಸಮಯ ಬರುವಾಗ ಪಕ್ಷ ನಿರ್ಧರಿಸುತ್ತದೆ. ಇದಕ್ಕಾಗಿ ಅಂತರಿಕ ಹೋರಾಟಗಳಿಲ್ಲ . ಆದರೆ ನಾಯಕರುಗಳ ಬ್ರಹ್ಮಾಂಡವೇ ಇಲ್ಲಿದೆ ಎಂದರು.

ರಾಜ್ಯ ಘಟಕದ ನಿರ್ಧಾರದಂತೆ ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುತ್ತಿಲ್ಲ. ರಾಜ್ಯದ ಎಲ್ಲಾ ಕ್ಷೇತ್ರಗಳಿಗೆ ಬಿಜೆಪಿಯೇ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಜೇಟ್ಲಿ ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X