ಬಳ್ಳಾರಿಯಿಂದ ಸ್ಪರ್ಧಿಸುತ್ತೀರಾ ? ಗೊತ್ತಿಲ್ಲ ಎಂದರು ಸೋನಿಯಾ
ಬಳ್ಳಾರಿಯಿಂದ ಸ್ಪರ್ಧಿಸುತ್ತೀರಾ ? ಗೊತ್ತಿಲ್ಲ ಎಂದರು ಸೋನಿಯಾ
ಕಾಂಗ್ರೆಸ್ ಈವರೆಗೂ ಸೋಲದಿರುವ ಕ್ಷೇತ್ರದಲ್ಲಿ ಸ್ಪರ್ಧೆ
ತಾವು ಅಥವಾ ತಮ್ಮ ಮಕ್ಕಳು ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಸೋನಿಯಾ ಬುಧವಾರ ಸುದ್ದಿಗಾರರಿಗೆ ತಿಳಿಸಿದರು. ಆಂಧ್ರಪ್ರದೇಶದ ಅನಂತಪುರ ಮತ್ತು ನಂದ್ಯಾಲಕ್ಕೆ ತೆರಳುವ ಸಂದರ್ಭದಲ್ಲಿ , ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೋನಿಯಾ ಈ ವಿಷಯ ತಿಳಿಸಿದರು.
ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎನ್ನುವ ವಿಷಯ ಸದ್ಯದಲ್ಲೇ ನಿಮಗೆ ತಿಳಿಯಲಿದೆ ಎಂದ ಸೋನಿಯಾ- ಯಾವ ಕ್ಷೇತ್ರದಲ್ಲಿ ಈವರೆಗಿನ ಚುನಾವಣೆಯಲ್ಲಿ ಒಮ್ಮೆಯೂ ಕಾಂಗ್ರೆಸ್ ಸೋತಿಲ್ಲವೋ ಅಲ್ಲಿ ನಾನು ಅಥವಾ ನನ್ನ ಮಕ್ಕಳು ಸ್ಪರ್ಧಿಸಲಿದ್ದೇವೆ ಎಂದರು.
ಸೋನಿಯಾ ಅವರು ಕಳೆದ ಚುನಾವಣೆಯಲ್ಲಿ ಬಳ್ಳಾರಿ ಮತ್ತು ಅಮೇಥಿಗಳಲ್ಲಿ ಆರಿಸಿಬಂದಿದ್ದರು. ಆನಂತರ ಅಮೇಥಿ ಕ್ಷೇತ್ರವನ್ನು ಉಳಿಸಿಕೊಂಡ ಸೋನಿಯಾ ಬಳ್ಳಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳ್ಳಾರಿಯಲ್ಲಿನ ಬಿಜೆಪಿಯ ಸುಷ್ಮಾ ಸ್ವರಾಜ್ ಹಾಗೂ ಸೋನಿಯಾ ನಡುವಿನ ಸ್ಪರ್ಧೆ ರಾಷ್ಟ್ರದ ಗಮನ ಸೆಳೆದಿತ್ತು .
ಕಾಂಗ್ರೆಸ್ ಪಕ್ಷದ ನಾಯಕ ಗುಲಾಂ ನಬಿ ಅಜಾದ್ ಸೋನಿಯಾ ಅವರೊಂದಿಗಿದ್ದರು. ಮುಖ್ಯಮಂತ್ರಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮತ್ತು ಕೆಪಿಸಿಸಿ ಅಧ್ಯಕ್ಷ ಜನಾರ್ಧನ ಪೂಜಾರಿ ವಿಮಾನ ನಿಲ್ದಾಣದಲ್ಲಿ ಸೋನಿಯಾ ಅವರನ್ನು ಸ್ವಾಗತಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications