ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಇಎಲ್‌ ವಿದ್ಯುನ್ಮಾನ ಮತಯಂತ್ರಕ್ಕೆ ವಿದೇಶಗಳಲ್ಲೂ ಬೇಡಿಕೆ

By Staff
|
Google Oneindia Kannada News

ಬಿಇಎಲ್‌ ವಿದ್ಯುನ್ಮಾನ ಮತಯಂತ್ರಕ್ಕೆ ವಿದೇಶಗಳಲ್ಲೂ ಬೇಡಿಕೆ
ಚುನಾವಣೆ ದಿನಗಳಲ್ಲಿ ದಿನವೊಂದಕ್ಕೆ 1,500 ಮತಯಂತ್ರಗಳ ತಯಾರಿ

ಬೆಂಗಳೂರು : ಚುನಾವಣೆ ಘೋಷಣೆಯಾಗಿದೆ. ಚುನಾವಣೆ ಜ್ವರ ಸಾಂಕ್ರಾಮಿಕವಾಗಿರುವ ಈ ಹೊತ್ತು ಎಲ್ಲೆಡೆಯೂ ಚುನಾವಣೆಯದೇ ಮಾತುಕತೆ. ಅಂದಹಾಗೆ, ಚುನಾವಣೆಯಲ್ಲಿ ಬಳಸುವ ವಿದ್ಯುನ್ಮಾನ ಮತಯಂತ್ರಗಳು ತಯಾರಾಗುವುದು ಎಲ್ಲಿ ಎನ್ನುವುದು ಗೊತ್ತೇ ?

ಮತದಾನದ ದಿನ ಹತ್ತಿರ ಬರುತ್ತಿದ್ದಂತೆ ರಾಜಕಾರಣಿ ಹಾಗೂ ಅಧಿಕಾರಿಗಳಿಗೆ ಮಾತ್ರ ಬಿಡುವಿಲ್ಲದ ಕೆಲಸವಲ್ಲ ; ಇಲ್ಲಿ ಮತಯಂತ್ರ ತಯಾರಕರಿಗೂ ಪುರುಸೊತ್ತಿಲ್ಲ. ಬೆಂಗಳೂರಿನ ಭಾರತ್‌ ಎಲೆಕ್ಟ್ರಾನಿಕ್‌ ಲಿಮಿಟೆಡ್‌ನಲ್ಲಿ (ಬಿಇಎಲ್‌) ಚುನಾವಣಾ ಮತಯಂತ್ರಗಳು ತಯಾರಾಗುತ್ತವೆ. ಬಿಇಎಲ್‌ನಲ್ಲೀಗ ಮತಯಂತ್ರಗಳ ಸಮರೋಪಾದಿ ತಯಾರಿಕೆ.

ಮಾರ್ಚ್‌ ತಿಂಗಳ ಒಳಗಾಗಿ ಚುನಾವಣಾ ಆಯೋಗಕ್ಕೆ 60,000 ಎಲೆಕ್ಟ್ರಾನಿಕ್‌ ಮತಯಂತ್ರಗಳನ್ನು ಪೂರೈಸುವ ತುರ್ತು ಬಿಇಎಲ್‌ಗಿದೆ. ಇದಕ್ಕಾಗಿ ದಿನವೊಂದಕ್ಕೆ 1,500 ಮತಯಂತ್ರಗಳನ್ನು ತಯಾರಿಸುತ್ತಿದ್ದೇವೆ ಎನ್ನುತ್ತಾರೆ ಬಿಇಎಲ್‌ ರಫ್ತು ತಯಾರಿಕಾ ವಿಭಾಗದ ಜನರಲ್‌ ಮೇನೇಜರ್‌ ಎನ್‌.ಎನ್‌.ಸಿಂಹ.

2003ರ ಡಿಸೆಂಬರ್‌ವರಿಗೆನ ಅಂಕಿಅಂಶಗಳಂತೆ, ಈವರೆಗೆ 2,600 ಕೋಟಿ ಮೌಲ್ಯದ 4.47 ಲಕ್ಷ ಮತಯಂತ್ರಗಳನ್ನು ಬಿಇಎಲ್‌ ಸರಾಬರಾಜು ಮಾಡಿದೆ. ಬೆಂಗಳೂರಷ್ಟೇ ಅಲ್ಲ , ಹೈದರಬಾದ್‌ನ ಇನ್ನೊಂದು ಘಟಕದಲ್ಲಿಯೂ ಈ ಎಲೆಕ್ಟ್ರಾನಿಕ್‌ ಮತಯಂತ್ರ ತಯಾರಾಗುತ್ತವೆ.

ವಿದ್ಯುನ್ಮಾನ ಮತಯಂತ್ರಗಳಿಂದ ಏನು ಉಪಯೋಗ? ಎನ್‌.ಎನ್‌.ಸಿಂಹ ಅವರ ಹೇಳುತ್ತಾರೆ, ಕೇಳಿ- ಈ ಪರಿಸರ ಸ್ನೇಹಿ ಎಲೆಕ್ಟ್ರಾನಿಕ್‌ಯಂತ್ರ ಅಳವಡಿಕೆಯಿಂದಾಗಿ ಟನ್‌ಗಟ್ಟಲೆ ಕಾಗದ ಉಳಿಯುತ್ತದೆ. ಅಷ್ಟೇ ಅಲ್ಲ , ಮತ ಎಣಿಕೆ ಪ್ರಕ್ರಿಯೆಯೂ ಸುಲಭ. ಚುನಾವಣೆಯಲ್ಲಿ ಪಾರದರ್ಶಕತೆಯೂ ಸಾಧ್ಯ.

ವಿದ್ಯುನ್ಮಾನ ಮತ ಯಂತ್ರ ಸತತ ಪರೀಕ್ಷೆಗಳಿಗೆ ಒಳಪಟ್ಟಿದೆ. ಇದು ಜಮ್ಮುಕಾಶ್ಮೀರದ ಗಡಗಡ ಚಳಿಯನ್ನು ಹಾಗೂ ರಾಜಸ್ಥಾನದ ಕಡು ಬಿಸಿಯನ್ನು ತಡೆದುಕೊಳ್ಳಬಲ್ಲದು. ಭಾರತದ ವಾಯುವ್ಯದಲ್ಲಿರುವ ದೇಶಗಳಿಂದಲೂ ಈ ಮತಯಂತ್ರ ನಿರ್ಮಾಣಕ್ಕೆ ಬೇಡಿಕೆ ಬರುತ್ತಲಿದೆ ಎನ್ನುತ್ತಾರೆ ಸಿಂಹ.

ಅಂದಹಾಗೆ, 5 ಕೆಜಿ ಭಾರದ ಈ ಮತಯಂತ್ರದಲ್ಲಿ ಒಂದು ನಿಮಿಷಕ್ಕೆ 6 ಮತ ಚಲಾಯಿಸಬಹುದು. ಕುಲಗೆಟ್ಟ ಮತಗಳಿರಲು ಅವಕಾಶವೇ ಇಲ್ಲ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X