ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಗಾರಕನ ಅಂಗಳದಲ್ಲೂ ‘ಜೀವಜಲ’ ! ನಾಸಾ ಸಾಕ್ಷ್ಯಾಧಾರ

By Staff
|
Google Oneindia Kannada News

ಅಂಗಾರಕನ ಅಂಗಳದಲ್ಲೂ ‘ಜೀವಜಲ’ ! ನಾಸಾ ಸಾಕ್ಷ್ಯಾಧಾರ
ಮಂಗಳ ಗ್ರಹದ ತೇವಾಂಶ ಉಳ್ಳ ಜಾಗದಲ್ಲಿ ಆಪರ್ಚುನಿಟಿ ಠಿಕಾಣಿ

ವಾಶಿಂಗ್ಟನ್‌: ಮಂಗಳ ಗ್ರಹದ ಹಲವು ಭಾಗಗಳಲ್ಲಿ ಮನುಷ್ಯ ಜೀವಿಸಲು ಸಾಕಾಗುವಷ್ಟು ನೀರಿದೆ ಎಂದು ನಾಸಾ ತಿಳಿಸಿದೆ.

ನಾಸಾದಿಂದ ರವಾನಿಸಲಾದ ಆಪರ್ಚುನಿಟಿ ಬಾಹ್ಯಾಕಾಶ ನೌಕೆಯು ಮಂಗಳ ಗ್ರಹದ ಸಮತಟ್ಟಾದ ಜಾಗವೊಂದರಲ್ಲಿ ನೀರು ಹರಿದಿರುವ ಅಥವಾ ನಿಂತಿರುವುದಕ್ಕೆ ಸಾಕ್ಷ್ಯಾಧಾರಗಳನ್ನು ಒದಗಿಸಿದೆ. ಮಂಗಳ ಗ್ರಹದ ತೇವಾಂಶ ಉಳ್ಳ ಜಾಗದಲ್ಲಿಯೇ ಆಪರ್ಚುನಿಟಿ ತಳವೂರಿದೆ ಎಂದು ನಾಸಾದ ಸಹಾಯಕ ಆಡಳಿತ ಸಿಬ್ಬಂದಿ ಇ.ಡಿ. ವೇಲರ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅಷ್ಟೇ ಅಲ್ಲದೇ, ಮಂಗಳನ ಪರಿಸರದಲ್ಲಿ ಈ ಮುನ್ನ ಕೂಡಾ ಉತ್ತಮ ವಾತಾವರಣ ನಿರ್ಮಾಣವಾಗಿತ್ತು ಎನ್ನುವಲ್ಲಿ ಸಂಶಯವಿಲ್ಲ. ಅದರರ್ಥ ಮೊದಲು ಇಲ್ಲಿ ಜೀವಿಗಳು ನೆಲೆಸಿದ್ದರೆಂದಲ್ಲ; ಆದರೆ ದೊರಕಿರುವ ಮಾಹಿತಿಯನ್ನು ಅಧ್ಯಯನ ಮಾಡಿದಾಗ, ಭೂಮಿಯಂತೆ ಮಂಗಳದ ಪರಿಸರದಲ್ಲಿಯೂ ಜೀವಜಂತುಗಳಿರುವ ಸಾಧ್ಯತೆ ಇದೆ ಎಂದು ವೇಲರ್‌ ಅಭಿಪ್ರಾಯಪಟ್ಟರು.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X