ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

26 ವರ್ಷದ ಬಳಿಕ ತೆರೆದ ಪೂನಾ ‘ಎಫ್‌ಟಿಐಐ’ ಸ್ಕೂಲುಬಾಗಿಲು

By Staff
|
Google Oneindia Kannada News

26 ವರ್ಷದ ಬಳಿಕ ತೆರೆದ ಪೂನಾ ‘ಎಫ್‌ಟಿಐಐ’ ಸ್ಕೂಲುಬಾಗಿಲು
ಎಫ್‌ಟಿಟಿಐನ ‘ಅಭಿನಯ’ ಮತ್ತು ‘ಸ್ಕಿೃಪ್ಟ್‌ ಬರಹ’ ದ ತರಗತಿಗಳ ಆರಂಭ

ನವದೆಹಲಿ : 26 ವರ್ಷಗಳ ಬಳಿಕ ಪೂನಾದಲ್ಲಿರುವ ಪ್ರತಿಷ್ಠಿತ ಭಾರತೀಯ ಸಿನಿಮಾ ಮತ್ತು ದೂರದರ್ಶನ ಸಂಸ್ಥೆ ತನ್ನ ತರಬೇತಿ ತರಗತಿಗಳನ್ನು ಪುನರಾರಂಭಿಸಲಿದೆ.

2004ರ ಜುಲೈ ತಿಂಗಳಿಂದ ‘ಅಭಿನಯ’ ಮತ್ತು ‘ಸ್ಕಿೃಪ್ಟ್‌ ಬರಹ’ ದ ತರಗತಿಗಳನ್ನು ಆರಂಭಿಸಲಾಗುವುದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಮಂತ್ರಿ ರವಿಶಂಕರ್‌ ಪ್ರಸಾದ್‌ ಫೆ.28ರಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. 20 ವಿದ್ಯಾರ್ಥಿಗಳ ತಂಡಕ್ಕೆ ಎರಡು ವರ್ಷಗಳ ಕಾಲ ತರಬೇತಿ ನೀಡಲಾಗುವುದು. ತರಬೇತಿಗೆ ಆಯ್ಕೆ ಮಾಡಲು ಸಂದರ್ಶನ, ಸಿನಿಮಾ ತಜ್ಞರ ಕಾರ್ಯಗಾರ ಮತ್ತು ಲಿಖಿತ ಪರೀಕ್ಷೆ ನಡೆಸಲಾಗುವುದು ಎಂದು ಸಚಿವರು ಹೇಳಿದರು.

ಖ್ಯಾತ ನಟ ರವಿ ಬಸ್ವಾನಿ ಅಭಿನಯ ತರಬೇತಿಗೆ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುವರು. ಖ್ಯಾತ ಬರಹಗಾರ ಅಂಜುಮ್‌ ರಾಜ್‌ಬಾಲಿ ಸ್ಕಿೃಪ್ಟ್‌ಬರಹ ತರಗತಿಯ ನಿರ್ದೇಶಕರಾಗಿರುತ್ತಾರೆ. ಸದ್ಯದಲ್ಲೇ ಇದರೊಂದಿಗೆ ‘ಎನಿಮೇಶನ್‌’ ತರಗತಿಗಳನ್ನು ಕೂಡಾ ಆರಂಭಿಸಲಾಗುವುದು ಎಂದು ರವಿಶಂಕರ್‌ ಪ್ರಸಾದ್‌ ಹೇಳಿದರು.

ಸಂಸ್ಥೆಯ ನಿರ್ದೇಶಕರಾದ ತ್ರಿಪುರಾರಿ ಶರಣ್‌ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ದೇಶದ 12 ಸ್ಥಳಗಳಲ್ಲಿ ಪ್ರವೇಶ ಪರೀಕ್ಷೆ ನಡೆಸಲಾಗುವುದು. ಪುಣೆ ಒಳಗೊಂಡಂತೆ ಪ್ರಮುಖ ರಾಜ್ಯಗಳ ರಾಜಧಾನಿಗಳಲ್ಲಿ ಪರೀಕ್ಷೆ ನಡೆಸಲಾಗುವುದು. ಎಂದಿಗಿಂತ ತರಗತಿಗಳ ಶುಲ್ಕ ಹೆಚ್ಚಿದ್ದರೂ ವಿದ್ಯಾರ್ಥಿ ವೇತನ ಮತ್ತು ವಿವಿಧ ಪ್ರಾಯೋಜಕರು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ನೆರವಾಗುವರು ಎಂದು ತ್ರಿಪುರಾರಿ ಶರಣ್‌ ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X