ಕೇಂದ್ರದಿಂದ ಮುಖ್ಯಮಂತ್ರಿ ಕೃಷ್ಣರ ಫೋನ್ ಕದ್ದಾಲಿಕೆ -ಮೊಯ್ಲಿ
ಕೇಂದ್ರದಿಂದ ಮುಖ್ಯಮಂತ್ರಿ ಕೃಷ್ಣರ ಫೋನ್ ಕದ್ದಾಲಿಕೆ -ಮೊಯ್ಲಿ
ಕಾಂಗ್ರೆಸ್‌ನಿಂದ ಚುನಾವಣಾ ವಿಷಯವಾಗಿ ಫೋನ್ ಕದ್ದಾಲಿಕೆ ಪ್ರಕರಣ
ಮುಖ್ಯಮಂತ್ರಿ ಕೃಷ್ಣ , ಮುಖ್ಯಮಂತ್ರಿಗಳ ಸಿಬ್ಬಂದಿ, ಕೆಪಿಸಿಸಿ ಅಧ್ಯಕ್ಷ ಜನಾರ್ಧನ ಪೂಜಾರಿ ಮತ್ತಿತರ ನಾಯಕರ ದೂರವಾಣಿಗಳನ್ನು ಸತತವಾಗಿ ಕದ್ದಾಲಿಸಲಾಗುತ್ತಿದೆ. ರಾಜ್ಯ ಬಿಜೆಪಿ ಚುನಾವಣಾ ತಂತ್ರವನ್ನು ರೂಪಿಸಲಿಕ್ಕಾಗಿ ಈ ಕದ್ದಾಲಿಕೆ ನಡೆಸಲಾಗುತ್ತಿದೆ. ಕದ್ದಾಲಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಫೆ.26ರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಮತ್ತು ಕಾಂಗ್ರೆಸ್ ವಕ್ತಾರ ವಿ.ಎಸ್.ಉಗ್ರಪ್ಪ ಒತ್ತಾಯಿಸಿದರು.
ದೂರವಾಣಿ ಕದ್ದಾಲಿಕೆಯ ಕುರಿತು ಕಾನೂನು ಕ್ರಮ ಕೈಗೊಳ್ಳುವ ಕುರಿತು ಸ್ಪಷ್ಟವಾಗಿ ಏನನ್ನೂ ಹೇಳಲು ನಿರಾಕರಿಸಿದ ವೀರಪ್ಪ ಮೊಯಿಲಿ- ಪ್ರಕರಣವನ್ನು ಚುನಾವಣಾ ವಿಷಯವನ್ನಾಗಿ ಬಳಸಿಕೊಳ್ಳಲಾಗುವುದು ಎಂದರು.
ದೂರವಾಣಿ ಕದ್ದಾಲಿಕೆ ಕುರಿತು ಕೆಪಿಸಿಸಿ ಅಧ್ಯಕ್ಷರು ಪಕ್ಷದ ನಾಯಕರಿಗೆ ಸೂಚನೆ ನೀಡಿದ್ದಾರೆ. ಇದರಿಂದಾಗಿ ಪಕ್ಷದ ನಾಯಕರು ದೂರವಾಣಿ ಬಳಕೆಯನ್ನೇ ಕಡಿಮೆ ಮಾಡಿದ್ದಾರೆ ಎನ್ನಲಾಗಿದೆ.
(ಪಿಟಿಐ)
ಮುಖಪುಟ / ಕೃಷ್ಣಗಾರುಡಿ












Click it and Unblock the Notifications