ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್‌ಟಿಡಿಸಿ ರಾಯಭಾರಿಗಳಾಗಿ ದ್ರಾವಿಡ್‌- ವಸುಂಧರಾ ದಾಸ್‌

By Staff
|
Google Oneindia Kannada News

ಕೆಎಸ್‌ಟಿಡಿಸಿ ರಾಯಭಾರಿಗಳಾಗಿ ದ್ರಾವಿಡ್‌- ವಸುಂಧರಾ ದಾಸ್‌
ಮೂರು ವರ್ಷಗಳ ಒಪ್ಪಂದಕ್ಕೆ ತಾರೆಗಳ ಸಹಿ

ಬೆಂಗಳೂರು : ಪಾಕಿಸ್ತಾನ ಕ್ರಿಕೆಟ್‌ ಪ್ರವಾಸಕ್ಕೆ ಪ್ಯಾಡ್‌ ಕಟ್ಟುತ್ತಿರುವ ಖ್ಯಾತ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಈಗ ಹೊಸದೊಂದು ಪಾತ್ರದಲ್ಲಿ ಕಂಗೊಳಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ)ದ ರಾಯಭಾರಿಯಾಗಿ ರಾಹುಲ್‌ ದ್ರಾವಿಡ್‌ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದಾರೆ.

ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ರಾಯಭಾರಿಗಳಾಗಿ ಕಾರ್ಯ ನಿರ್ವಹಿಸುವ ಒಪ್ಪಂದಕ್ಕೆ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಹಾಗೂ ಸಿನಿಮಾ ನಟಿ ವಸುಂಧರಾ ದಾಸ್‌ ಮಂಗಳಾರ (ಫೆ.24) ಸಹಿ ಹಾಕಿದರು.

ಕೆಎಸ್‌ಡಿಟಿಯ ಕಾರ್ಯಕ್ರಮಗಳು, ಪ್ರಚಾರಾಂದೋಲನಗಳು, ಸಾರ್ವಜನಿಕ ಸಂಪರ್ಕ ಕಾರ್ಯಕ್ರಗಳಲ್ಲಿ ದ್ರಾವಿಡ್‌ ಹಾಗೂ ವಸುಂಧರಾ ಭಾಗವಹಿಸುವರು. ಈ ಒಪ್ಪಂದ ಮೂರು ವರ್ಷಗಳ ಅವಧಿಯದಾಗಿದ್ದು , ರಾಯಭಾರಿ ಕಾರ್ಯಕ್ಕಾಗಿ ವಸುಂಧರಾ ಹಾಗೂ ದ್ರಾವಿಡ್‌ ತಲಾ 3 ಲಕ್ಷ ರುಪಾಯಿ ಪಡೆಯಲಿದ್ದಾರೆ.

ಇಬ್ಬರು ಖ್ಯಾತನಾಮರನ್ನು ಪ್ರವಾಸೋದ್ಯಮ ನಿಗಮ ರಾಯಭಾರಿಗಳನ್ನಾಗಿ ಹೊಂದಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರವಾಸೋದ್ಯಮ ಸಚಿವ ಜೆ.ಅಲೆಗ್ಸಾಂಡರ್‌- ಈ ಇಬ್ಬರೂ ರಾಯಭಾರಿಗಳು ಕರ್ನಾಟಕದಲ್ಲಿ ಆನೆ ಮತ್ತು ದೇಗುಲಗಳು ಮಾತ್ರವಲ್ಲದೆ ಇತರ ಅದ್ಭುತ ಸ್ಥಳಗಳು ಇರುವ ಕುರಿತು ವಿಶ್ವದ ಗಮನ ಸೆಳೆಯಲಿದ್ದಾರೆ. ರಾಜ್ಯದ ಕಲೆ ಹಾಗೂ ಸಾಂಸ್ಕೃತಿಕ ರಾಯಭಾರಿಗಳಾಗಿ ರಾಹುಲ್‌-ವಸುಂಧರಾ ಕಾರ್ಯ ನಿರ್ವಹಿಸುವರು ಎಂದರು.

2003ನೇ ಇಸವಿಯಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರವಾಸಿಗರು ಕರ್ನಾಟಕಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿದ್ದಾರೆ. ಈ ಹೆಚ್ಚಳ ಶೇ.15ರಷ್ಟಿದೆ ಎಂದು ಸಚಿವ ಅಲೆಗ್ಸಾಂಡರ್‌ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X