ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಳೂರು ಮಠಾಧೀಶರ ಅಪಹರಣಕ್ಕೆ ವೀರಪ್ಪನ್‌ ಕೈ ಹಾಕಿದ್ದನಾ?

By Staff
|
Google Oneindia Kannada News

ಸಾಳೂರು ಮಠಾಧೀಶರ ಅಪಹರಣಕ್ಕೆ ವೀರಪ್ಪನ್‌ ಕೈ ಹಾಕಿದ್ದನಾ?
ಕಾಡಿನಿಂದ ನಾಡಿಗೆ ಹಬ್ಬುತ್ತಿರುವ ಸುದ್ದಿಗಳು.... ಅವು ವದಂತಿಗಳಷ್ಟೇ ಅನ್ನುತ್ತಿದ್ದಾರೆ ಪೊಲೀಸರು !

ಮೈಸೂರು: ನರಹಂತಕ ವೀರಪ್ಪನ್‌ ಮತ್ತೊಂದು ಅಪಹರಣಕ್ಕೆ ಕೈ ಹಾಕಿದ್ದನೇ ?

ಗಡಿ ಅರಣ್ಯದ ಭಾಗಗಳಿಂದ ಬಂದಿರುವ ವರದಿಗಳು ಇಂಥದೊಂದು ಸುದ್ದಿ ಹೇಳುತ್ತಿವೆ. ವೀರಪ್ಪನ್‌ನ ಬಲಗೈ ಬಂಟ ಸೇತುಕುಳಿ ಗೋವಿಂದ, ಫೆ.24ರ ಮಂಗಳವಾರ ಸಾಳೂರು ಮಠದ ಸ್ವಾಮಿಯನ್ನು ಅಪಹರಿಸಲು ಮುಂದಾಗಿದ್ದ , ಆದರೆ ಅವನ ಲೆಕ್ಕಾಚಾರವನ್ನು ಕರ್ನಾಟಕ ಪೊಲೀಸ್‌ ಪಡೆ ತಲೆಕೆಳಗು ಮಾಡಿದೆ ಎನ್ನಲಾಗಿದೆ.

ವರದಿಯ ಪ್ರಕಾರ ಘಟನೆಯ ಹಿನ್ನೆಲೆ ಹೀಗಿದೆ :

ಸೇತುಕುಳಿ ಗೋವಿಂದನ ನೇತೃತ್ವದಲ್ಲಿ ಸಶಸ್ತ್ರರಾದ ನಾಲ್ಕು ಜನರ ಗುಂಪು, ಎಂ.ಎಂ. ಹಿಲ್ಸ್‌ನಿಂದ ಮೂರು ಕಿಲೋ ಮೀಟರ್‌ ದೂರದಲ್ಲಿರುವ ಸಾಳೂರು ಮಠಕ್ಕೆ ಫೆಬ್ರವರಿ 24 ರಂದು ಬಂದಿತ್ತು. ಚಿಕ್ಕ ಸ್ವಾಮೀಜಿ (ಎಮ್ಮಾಡಿ ಮಹಾದೇವ ಸ್ವಾಮಿ) ನೋಡಲೆಂದು ಬಂದ ಅವರಿಗೆ ಸ್ವಾಮಿ ಕಾಣಲಿಲ್ಲ. ಸ್ವಾಮೀಜಿಯ ಮಾಹಿತಿ ತಿಳಿಯಲೆಂದು ಹಳೆಯೂರಿನ ಪುಟ್ಟರಾಜು ಮನೆಗೆ ಧಾವಿಸಿದರು. ತಮ್ಮ ಪರಿಚಯ ಮಾಡಿಕೊಂಡು ಸ್ವಾಮೀಜಿಯ ಬಗ್ಗೆ ವಿಚಾರಿಸಿದರು. ಆದರೆ ಯಾವುದೇ ಮಾಹಿತಿ ಸಿಗಲಿಲ್ಲ. ಯುಗಾದಿಯ ನಂತರ ಪುನಃ ಬರುತ್ತೇವೆಂದು ಹೇಳಿ ಅಲ್ಲಿಂದ ನಡೆದರು.

ಕರ್ನಾಟಕದ ಗಡಿ ಪ್ರದೇಶದ ಅರಣ್ಯಗಳಲ್ಲಿ ಈ ಘಟನೆ ಸಂಭವಿಸಿದೆ. ಎಸ್‌ಟಿಎಫ್‌ ಪಡೆ ಗಡಿ ಅರಣ್ಯ ಪ್ರದೇಶಗಳಲ್ಲಿ ಯಾವುದೇ ಗಣ್ಯರ ಅಥವಾ ಪ್ರಮುಖರ ಅಪಹರಣ ನಡೆಯದಂತೆ ಅತಿ ಜಾಗ್ರತವಾಗಿತ್ತು. ಪರಿಣಾಮವಾಗಿ ಅಪಹರಣಕಾರರ ಸಂಚು ವಿಫಲವಾಗಿದೆ. ಪಾಲಾರ್‌ ಸ್ಫೋಟಕ್ಕೆ ಸಂಬಂಧಪಟ್ಟಂತೆ ವೀರಪ್ಪನ್‌ನ ನಾಲ್ವರು ಸಹಚರರಿಗೆ ಸುಪ್ರಿಂಕೋರ್ಟ್‌ ಮರಣ ದಂಡನೆ ಶಿಕ್ಷೆ ವಿಧಿಸಿದ ಪ್ರತೀಕಾರವಾಗಿ ಈ ಅಪಹರಣ ಯೋಜಿಸಲಾಗಿತ್ತು ಎನ್ನಲಾಗಿದೆ.

ಸೇತುಕುಳಿ ಗೋವಿಂದನ್‌ ಗುಂಪು ಮಠಕ್ಕೆ ಬಂದಿರುವುದು ಮತ್ತು ಪುಟ್ಟರಾಜುವನ್ನು ಭೇಟಿ ಮಾಡಿರುವುದು ಖಚಿತ. ಜೊತೆಗೆ ಮಠದ ಸ್ವಾಮೀಜಿಯ ಬಗೆಗೆ ಮಾಹಿತಿಯನ್ನೂ ಅವರು ಸಂಗ್ರಹಿಸದೇ ಹೋಗಿರಲಾರರು ಎಂದು ಮಠದ ಮೂಲಗಳು ತಿಳಿಸಿವೆ.

ಕಟ್ಟು ಕಥೆ, ಇದೆಲ್ಲಾ ವದಂತಿ!

ವೀರಪ್ಪನ್‌ ತಂಡದಿಂದ ಸ್ವಾಮೀಜಿಯ ಅಪಹರಣಕ್ಕೆ ಸಂಚು ನಡೆದಿತ್ತು ಎನ್ನುವ ಸುದ್ದಿಯನ್ನು ಪೊಲೀಸರು ತಳ್ಳಿಹಾಕಿದ್ದಾರೆ. ಸ್ವಾಮಿಗಳ ರಕ್ಷಣೆಯ ಸಲುವಾಗಿ ಸಶಸ್ತ್ರ ಪೊಲೀಸರನ್ನು ಸರ್ಕಾರ ನೇಮಿಸಿದೆ. ಎಲ್ಲೆಡೆ ಹಬ್ಬಿರುವ ಈ ವರದಿ ಕಟ್ಟುಕತೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

(ಇನ್ಫೋ ವಾರ್ತೆ)

ಮುಖಪುಟ / ವೀರಪ್ಪನ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X