ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಏಡ್ಸ್‌ ಮಾರಿ ನಿರ್ಲಕ್ಷಿಸಿದರೆ ಪ್ರಕಾಶಮಾನ ಭಾರತದ ಸರ್ವನಾಶ’

By Staff
|
Google Oneindia Kannada News

‘ಏಡ್ಸ್‌ ಮಾರಿ ನಿರ್ಲಕ್ಷಿಸಿದರೆ ಪ್ರಕಾಶಮಾನ ಭಾರತದ ಸರ್ವನಾಶ’
ಭಾರತದ ಅಭ್ಯುದಯಕ್ಕೆ ಏಡ್ಸ್‌ ಅಡ್ಡಗಾಲು - ವಾಷಿಂಗ್ಟನ್‌ ಆತಂಕ

ವಾಷಿಂಗ್ಟನ್‌: ಭಾರತ ದೇಶದ ಬೆಳವಣಿಗೆಗೆ ಎಚ್‌ಐವಿ/ ಏಡ್ಸ್‌ ಮಾರಕವಾಗುತ್ತಿದೆ ಎಂದು ಅಮೇರಿಕಾ ಮೂಲದ ತಜ್ಞರ ತಂಡವೂಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಭಾರತ ದೇಶದಲ್ಲಿ 1994ರಲ್ಲಿ 1.75 ಮಿಲಿಯನ್‌ ಇದ್ದ ಏಡ್ಸ್‌ ರೋಗಿಗಳ ಪ್ರಮಾಣ 2002 ನೇ ಇಸವಿಯಲ್ಲಿ 5 ಮಿಲಿಯಕ್ಕೇರಿದೆ. ಆದರೆ ಈ ಬೆಳವಣಿಗೆ ಕುರಿತು ಜನಸಾಮಾನ್ಯರಿಗೆ ಏನೂ ತಿಳುವಳಿಕೆ ಇಲ್ಲ ಎಂದು ವಾಷಿಂಗ್ಟನ್‌ ಜನಸಂಖ್ಯಾ ಮಾಹಿತಿ ಬ್ಯೂರೋದ ಕಾರ್ಲ್‌ ಹಬ್‌ ಹೇಳಿದ್ದಾರೆ.

ಭಾರತದಲ್ಲಿ 15 ರಿಂದ 49 ವಯೋಮಿತಿ ಒಳಗಿನವರಲ್ಲಿ 0.8 ಶೇಕಡಾ ಏಡ್ಸ್‌ ತಗುಲಿದವರು. ವಿಶ್ವದಲ್ಲಿ ದಕ್ಷಿಣ ಏಷ್ಯಾದಲ್ಲಿ ಅತೀ ಹೆಚ್ಚಿನ ಏಡ್ಸ್‌ ರೋಗಿಗಳಿದ್ದಾರೆ. ಭಾರತೀಯ ಮಾಧ್ಯಮವು ಈಗ ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಏಡ್ಸ್‌ ಕೇವಲ ಲೈಂಗಿಕ ಸಂಪರ್ಕ ಹಾಗೂ ಡ್ರಗ್ಸ್‌ಸೇವನೆಯಿಂದ ಬರುವುದೆಂದು ಭಾರತೀಯರ ತಿಳುವಳಿಕೆ ಆಗಿದೆ. ಅಷ್ಟು ಮಾತ್ರವಲ್ಲ ದೆ, ಬೇರೆ ರೀತಿಯಲ್ಲೂ ಏಡ್ಸ್‌ ಬರಬಹುದು ಎಂದು ಭಾರತೀಯರು ತಿಳಿದಿಲ್ಲ ಎಂದು ಹಬ್‌ ಅಭಿಪ್ರಾಯಪಟ್ಟರು.

ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಮಣಿಪುರ ಮತ್ತು ನಾಗಾಲ್ಯಾಂಡ್‌ನಲ್ಲಿ ಎಚ್‌ಐವಿ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗಿದೆ. ಸೂಕ್ತವಾದ ಹೆಜ್ಜೆಯನ್ನು ಸರಕಾರ ತೆಗೆದುಕೊಳ್ಳದಿದ್ದರೆ, ಮುಂದೊಂದು ದಿನ ಭಾರತ ನಶಿಸಬಹುದು. ನಿರ್ಲಕ್ಷಿಸಿದಲ್ಲಿ ಆಫ್ರಿಕಾವೂ ಏಡ್ಸ್‌ನಿಂದಾಗಿ ಕ್ರಮೇಣ ಇಲ್ಲದಾಗಬಹುದು ಎಂದು ಹಬ್‌ ಏಡ್ಸ್‌ ಮಾರಿಯ ಭೀಕರತೆಯ ಕುರಿತು ಆತಂಕ ವ್ಯಕ್ತಪಡಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X