ಪರಿಶುದ್ಧ ಆರೋಗ್ಯ ರೀತಿ : ರಾಜ್ಯದಲ್ಲಿ ಸಾವಯವ ಕೃಷಿ ನೀತಿ

ಪರಿಶುದ್ಧ ಆರೋಗ್ಯ ರೀತಿ : ರಾಜ್ಯದಲ್ಲಿ ಸಾವಯವ ಕೃಷಿ ನೀತಿ
ನೆಲ-ಜಲ, ಮನುಜ-ಪ್ರಕೃತಿ ರಕ್ಷಣೆಗಾಗಿ : ಎಚ್‌.ಕೆ. ಪಾಟೀಲ್‌

ಬೆಂಗಳೂರು: ದೇಶದಲ್ಲೇ ಚೊಚ್ಚಲವಾಗಿ ಸಾವಯವ ಕೃಷಿನೀತಿ ಆಳವಡಿಸುವ ಕೀರ್ತಿಗೆ ಕರ್ನಾಟಕ ರಾಜ್ಯ ಸರಕಾರ ಪಾತ್ರವಾಗಿದೆ. ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ, ಈ ಉತ್ಪನ್ನಗಳ ಮಾರಾಟ ಹಾಗೂ ಸಂಸ್ಕರಿಸುವ ಕೈಗಾರಿಕೆಗಳಿಗೆ ನೆರವು, ಭೂಮಿ-ನೀರು ಸಂರಕ್ಷಣೆಗೆ ವಿಶೇಷ ಮಹತ್ವ, ಶಾಲಾ ಪಠ್ಯ ಪುಸ್ತಕದಲ್ಲಿ ಈ ಕೃಷಿ ಪದ್ಧತಿಯ ಕುರಿತಾದ ಮಾಹಿತಿ, ರಫ್ತು ಉತ್ತೇಜನ, ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು, ಸ್ನಾತಕೋತ್ತರ ವಿಷಯದಲ್ಲಿ ಕೃಷಿ ವಿಷಯ ಅಳವಡಿಕೆ ಸೇರಿದಂತೆ ಇತರ ಪ್ರಮುಖ ಅಂಶಗಳು ಸಾವಯವ ಕೃಷಿ ನೀತಿಯಲ್ಲಿ ಅಡಕವಾಗಿದೆ.

ರಾಸಾಯನಿಕ ಗೊಬ್ಬರ ಬಳಸಿದ ಉತ್ಪನ್ನಗಳು ಮನುಷ್ಯನ ಆರೋಗ್ಯಕ್ಕೆ ಹಾಗೂ ಪ್ರಕೃತಿಗೆ ಉತ್ತಮವಲ್ಲ. ಪರಿಸರ ಹಾಗೂ ಜೀವಸಂಕುಲವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸೂಕ್ಷ್ಮ ಪ್ರದೇಶಗಳನ್ನು ರಾಸಾನಿಕ ಗೊಬ್ಬರ ಮುಕ್ತ ವಲಯವನ್ನಾಗಿ ಘೋಷಿಸಲಾಗುವುದು. ಬಹು ರಾಷ್ಟ್ರೀಯ ಗೊಬ್ಬರ ಕಂಪೆನಿಗಳ ಒತ್ತಡಕ್ಕೆ ಮಣಿಯದೆ, ಜನತೆ ಹಾಗೂ ಬರ ಪೀಡಿತ ಪ್ರದೇಶದ ಹಿತವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ನೀತಿಯನ್ನು ರೂಪಿಸಲಾಗಿದೆ ಎಂದು ರಾಜ್ಯ ಕೃಷಿ ಸಚಿವ ಎಚ್‌.ಕೆ. ಪಾಟೀಲ್‌ ಹೇಳಿದ್ದಾರೆ.

ಇತ್ತೀಚೆಗೆ ತೀವ್ರ ಬೇಡಿಕೆ ಪಡೆದಿರುವ ಸಾವಯವ ಕೃಷಿ ಉತ್ಪನ್ನಗಳ ತಯಾರಿಕೆಗೆ ರಾಜ್ಯ ಮುಂದಡಿ ಇಡುತ್ತಿದೆ. ಇದರ ಅಳವಡಿಕೆಗಾಗಿ ‘ಮಿನಿ ಮಿಷನ್‌’ ರಚಿಸಲಾಗುವುದು. ಕೃಷಿ ವಿಜ್ಞಾನಿಗಳು ಇದರ ಮುಖ್ಯಸ್ಥರು. ಸಾವಯವ ಕೃಷಿ ನಿರತ ರೈತ ಮುಖಂಡರು ಈ ಸಮಿತಿಯಲ್ಲಿರುತ್ತಾರೆ. ಕೃಷಿ ವೆಚ್ಚ ತಗ್ಗಿಸಿ ಉತ್ಪಾದನೆ ಹೆಚ್ಚಿಸಲು ಇದೊಂದೇ ಪರಿಹಾರ ಹಾಗೂ ನೈಸರ್ಗಿಕವಾದ ಸಂರಕ್ಷಣೆ ದೊರೆಯುತ್ತದೆ ಎಂದು ಪಾಟೀಲ್‌ ಅಭಿಪ್ರಾಯಪಟ್ಟಿದ್ದಾರೆ.

ಆಧುನಿಕ ತಂತ್ರಜ್ಞಾನ ಆಳವಡಿಕೆಯಿಂದ ಅಡ್ಡ ಪರಿಣಾಮಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಸಾವಯವ ಕೃಷಿ ನೀತಿಯನ್ನು ಸ್ವಾಗತಿಸೋಣ. ಸಾಂಪ್ರದಾಯಿಕ ಕೃಷಿ ಪದ್ಧತಿ ಹಾಗೂ ಪರಿಸರ ಪ್ರೇಮಿವಿಜ್ಞಾನವನ್ನು ತನ್ನದಾಗಿಸಿಕೊಳ್ಳುವುದರಿಂದ ಸಾವಯವ ಶೈಲಿಯ ಬದುಕಿಗೆ ಜೈ ಎನ್ನೋಣ!

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+