ರೋಗಿ ಮನೆ ಬಾಗಿಲಿಗೆ ಶೃಂಗೇರಿ ಶಾರದಾ ಪೀಠದ ಧರ್ಮಾಸ್ಪತ್ರೆ
ರೋಗಿ ಮನೆ ಬಾಗಿಲಿಗೆ ಶೃಂಗೇರಿ ಶಾರದಾ ಪೀಠದ ಧರ್ಮಾಸ್ಪತ್ರೆ
ಅಭಿನವ ವಿದ್ಯಾತೀರ್ಥರ ಪೀಠಾರೋಹಣ ಬೆಳ್ಳಿಹಬ್ಬ ಸ್ಮರಣಾರ್ಥ ವೈದ್ಯಕೀಯ ಪ್ರತಿಷ್ಠಾನ
ಶಾರದಾಪೀಠದ ಶ್ರೀ ಭಾರತಿ ತೀರ್ಥ ಸ್ವಾಮೀಜಿಗಳು ಭಾನುವಾರ ಸಂಜೆ ವೈದ್ಯಕೀಯ ಪ್ರತಿಷ್ಠಾನ ಹಾಗೂ ಧರ್ಮಾಸ್ಪತ್ರೆಯ ಬೆಳ್ಳಿಹಬ್ಬದ ಕಾರ್ಯಕ್ರಮವನ್ನು ಔಪಚಾರಿಕವಾಗಿ ಉದ್ಘಾಟಿಸಿದರು.
ದೇಶದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲೊಂದಾದ ಶೃಂಗೇರಿ ಶಾರದಪೀಠ, ಮಲೆನಾಡಿನ ಪರಿಸರದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಕೊಂಡಿದೆ. ಈ ಪ್ರದೇಶದಲ್ಲಿನ ಜನರು ವೈದ್ಯಕೀಯ ಸೌಲಭ್ಯಗಳ ಕೊರತೆ ಎದುರಿಸುತ್ತಿರುವುದನ್ನು ಮನಗಂಡ ಪೀಠದ 35ನೇ ಗುರುಗಳಾದ ಶ್ರೀ ಜಗದ್ಗುರು ಅಭಿನವ ವಿದ್ಯಾತೀರ್ಥ ಸ್ವಾಮೀಜಿಗಳು 1979ರಲ್ಲಿ ಧರ್ಮಾಸ್ಪತ್ರೆ ಪ್ರಾರಂಭಿಸಿದ್ದರು. ಸಣ್ಣ ದವಾಖಾನೆಯಾಗಿ ಪ್ರಾರಂಭಗೊಂಡ ಈ ಧರ್ಮಾಸ್ಪತ್ರೆ ಪ್ರಸ್ತುತ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ.
ದಿನದ ಇಪ್ಪತ್ತನಾಲ್ಕು ತಾಸೂ ಚಿಕಿತ್ಸೆಯ ಸೌಲಭ್ಯ ದೊರೆಯುವ ಧರ್ಮಾಸ್ಪತ್ರೆಯಲ್ಲಿ , ಅತ್ಯುತ್ತಮ ಆಹಾರವನ್ನು ರೋಗಿಗಳಿಗೆ ಒದಗಿಸಲಾಗುತ್ತದೆ. ಚಿಕಿತ್ಸೆ ಹಾಗೂ ಆಹಾರ ಸಂಪೂರ್ಣ ಉಚಿತ. ಈ ಆಸ್ಪತ್ರೆಯ ಘಟಕಗಳನ್ನು ವಿವಿಧ ಪ್ರದೇಶಗಳಲ್ಲಿ ಸ್ಥಾಪಿಸಲಾಗಿದ್ದು , ಇವುಗಳು ನಿಯಮಿತವಾಗಿ ವಿಶೇಷ ಕ್ಯಾಂಪ್‌ಗಳನ್ನು ನಡೆಸುತ್ತಿವೆ. ಇದರಿಂದಾಗಿ ಆಸ್ಪತ್ರೆಗೆ ಬರಲಾಗದ ರೋಗಿಗಳು ಕೂಡ ವೈದ್ಯಕೀಯ ಚಿಕಿತ್ಸೆ ಹೊಂದುವುದು ಸಾಧ್ಯವಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications