ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಟುಂಬ ಯೋಜನೆ : ಪುರುಷರಿಗಾಗಿ ಹರ್ಬಲ್‌ ಮುಲಾಮು !

By Staff
|
Google Oneindia Kannada News

ಕುಟುಂಬ ಯೋಜನೆ : ಪುರುಷರಿಗಾಗಿ ಹರ್ಬಲ್‌ ಮುಲಾಮು !
ಮೂರು ತಿಂಗಳಲ್ಲಿ ಮಾರುಕಟ್ಟೆಗೆ ‘ಕಾನ್ಸೆಪ್‌’

ಲಕ್ನೊ : ವಿವಿಧ ಕುಟುಂಬ ಯೋಜನೆಯ ತಂತ್ರಗಳ ಬಗ್ಗೆ ಜನರಲ್ಲಿ ಕಾಳಜಿ ಮೂಡಿಸುವ ಉದ್ದೇಶದಿಂದ ಭಾರತ ಸರ್ಕಾರ ನಾನಾ ಕ್ರಮಗಳನ್ನು ಅಂಗೀಕರಿಸುತ್ತಿದೆ. ಈ ನಿಟ್ಟಿನಲ್ಲಿ ವಿಶ್ವದ ಪ್ರಪ್ರಥಮ ಪುರುಷರ ಕುಟುಂಬ ನಿಯಂತ್ರಣ ‘ಕ್ರೀಮ್‌’ನ ಔಪಚಾರಿಕ ಉದ್ಘಾಟನೆ ಫೆಬ್ರವರಿ 15ರಂದು ನಡೆಯಿತು.

ದೆಹಲಿಯ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಘಟಕದ ನಿರ್ದೇಶಕ ಆರ್‌.ಎ. ಮಶೇಲ್ಕರ್‌ ನೂತನ ಕಾನ್ಸೆಪ್‌ ಕ್ರೀಂನ್ನು ಉದ್ಘಾಟಿಸಿದರು. ಸದ್ಯದಲ್ಲೇ ಮಾರುಕಟ್ಟೆಗೆ ಬರಲಿರುವ ಈ ಪುರುಷರ ಕ್ರೀಮ್‌ನ ಹೆಸರು ‘ಕಾನ್ಸೆಪ್‌’. ಇದು ಸಂಪೂರ್ಣ ಔಷಧೀಯ ಸಸ್ಯಗಳಿಂದ ತಯಾರಿಸಲಾಗಿದೆ. ಕೇಂದ್ರ ಔಷಧ ಸಂಶೋಧನಾ ಸಂಸ್ಥೆ (ಸಿ.ಡಿ.ಆರ್‌.ಐ), ಲಕ್ನೊ ಇದರ ತಯಾರಕರು.

ಫೆಬ್ರವರಿ 17ರಂದು ಆರ್‌.ಎ. ಮಶೇಲ್ಕರ್‌ ನಾಲ್ಕು ದಿನದ ದ್ವಿತೀಯ ಅಂತರರಾಷ್ಟ್ರೀಯ ವಿಚಾರಗೋಷ್ಠಿಯಲ್ಲಿ ಪಾಲ್ಗೊಳ್ಳುತ್ತಿದ್ದು , ಈ ಗೋಷ್ಠಿಯಲ್ಲಿ ಔಷಧಗಳ ಪರಿಶೋಧನೆ ಮತ್ತು ಅನ್ವೇಶಣೆಯ ಮಾರ್ಗ ಎಂಬ ವಿಷಯದ ಬಗ್ಗೆ ಹಾಗೂ ಕಾನ್ಸೆಪ್‌ ಕುರಿತು ಮಾತನಾಡಲಿದ್ದಾರೆ.

ಕುಟುಂಬ ಯೋಜನೆಗೆ ಪೂರಕವಾಗಿ, ಜನಸಂಖ್ಯಾ ನಿಯಂತ್ರಣದ ಉದ್ದೇಶ ಇಟ್ಟುಕೊಂಡು, ಮೂರು ತಿಂಗಳೊಳಗೆ ಮಾರುಕಟ್ಟೆಗೆ ಪಾದಾರ್ಪಣೆ ಮಾಡಲಿರುವ ಜಗತ್ತಿನ ಪ್ರಪ್ರಥಮ ಕ್ರೀಮ್‌ (ಕಾನ್ಸೆಪ್‌) ಬಳಕೆಯ ವಿವರಗಳು ಸದ್ಯಕ್ಕೆ ತಿಳಿದುಬಂದಿಲ್ಲ.

(ಏಜನ್ಸೀಸ್‌)

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X