ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಲ್ಲಿ ಪಂಪನ ಕೃತಿಗಳು ಮತ್ತು ‘ನುಡಿ’ ತಂತ್ರಾಂಶ ಪ್ರಾತ್ಯಕ್ಷಿಕೆ

By Staff
|
Google Oneindia Kannada News

ಮೈಸೂರಲ್ಲಿ ಪಂಪನ ಕೃತಿಗಳು ಮತ್ತು ‘ನುಡಿ’ ತಂತ್ರಾಂಶ ಪ್ರಾತ್ಯಕ್ಷಿಕೆ
ಅಂಕೀಕರಣಗೊಂಡಿರುವ ಪಂಪನ ಕೃತಿಗಳು, ನಿಘಂಟು ಹಾಗೂ ನುಡಿ ತಂತ್ರಾಂಶದ ಬಗ್ಗೆ ಗಣಕ ಪರಿಷತ್ತಿನಿಂದ ಪ್ರಾತ್ಯಕ್ಷಿಕೆ

ಮೈಸೂರು : ಅಂಕೀಕರಣಗೊಂಡಿರುವ ಆದಿಕವಿ ಪಂಪನ ‘ಆದಿಪುರಾಣ’, ‘ವಿಕ್ರಮಾರ್ಜುನ ವಿಜಯಂ’ ಮತ್ತು ಕನ್ನಡ-ಕನ್ನಡ ನಿಘಂಟುಗಳ ಪ್ರಾತ್ಯಕ್ಷಿಕೆ ಹಾಗೂ ಉಚಿತ ಕನ್ನಡ ತಂತ್ರಾಂಶ ‘ನುಡಿ 4.0’ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಫೆ.14ರ ಶನಿವಾರ ಮೈಸೂರಿನಲ್ಲಿ ನಡೆಯಲಿದೆ.

ಕನ್ನಡ ಗಣಕ ಪರಿಷತ್ತಿನ ಮೈಸೂರು ಕೇಂದ್ರ ಹಾಗೂ ದಿ ಇನ್ಸ್‌ಟಿಟ್ಯೂಷನ್‌ ಆಫ್‌ ಇಂಜಿನಿಯರ್ಸ್‌ನ ಮೈಸೂರು ಕೇಂದ್ರಗಳು ಈ ಕಾರ್ಯಕ್ರಮವನ್ನು ಜಂಟಿಯಾಗಿ ಆಯೋಜಿವೆ. ಸಂಜೆ 5 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ.

ಕಾರ್ಯಕ್ರಮ ನಡೆಯುವ ಸ್ಥಳ : ಎಸ್‌ ಪಿ ಭಟ್‌ ಸಭಾಂಗಣ, ದಿ ಇನ್ಸ್‌ಟಿಟ್ಯೂಷನ್‌ ಆಫ್‌ ಇಂಜಿನಿಯರ್ಸ್‌ , ಝಾನ್ಸಿ ಲಕ್ಷ್ಮೀಬಾಯಿ ರಸ್ತೆ , ಮೈಸೂರು-570 005.

ಕನ್ನಡ ಗಣಕ ಪರಿಷತ್ತಿನ ಕಾರ್ಯದರ್ಶಿ ಜಿ.ಎನ್‌.ನರಸಿಂಹಮೂರ್ತಿ ಅಂಕೀಕರಣಗೊಂಡಿರುವ ಆದಿಕವಿ ಪಂಪನ ‘ಆದಿಪುರಾಣ’, ‘ವಿಕ್ರಮಾರ್ಜುನ ವಿಜಯಂ’ ಮತ್ತು ಕನ್ನಡ-ಕನ್ನಡ ನಿಘಂಟುಗಳ ಪ್ರಾತ್ಯಕ್ಷಿಕೆ ಹಾಗೂ ಉಚಿತ ಕನ್ನಡ ತಂತ್ರಾಂಶ ‘ನುಡಿ 4.0’ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತಪಡಿಸುವರು. ದಿ ಇನ್ಸ್‌ಟಿಟ್ಯೂಷನ್‌ ಆಫ್‌ ಇಂಜಿನಿಯರ್ಸ್‌ನ ಮೈಸೂರು ಕೇಂದ್ರದ ಅಧ್ಯಕ್ಷರಾದ ಪ್ರೊ.ಎಂ.ಎನ್‌.ಶಿವರಾಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕನ್ನಡ ಗಣಕ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಚಿ.ವಿ.ಶ್ರೀನಾಥ ಶಾಸ್ತ್ರೀ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X