ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರಿನಲ್ಲಿ ‘ಬೀಚ್‌ ಉತ್ಸವ’ವೆಂಬ ಪ್ರೇಮಿಗಳದಿನದ ಜಾತ್ರೆ

By Staff
|
Google Oneindia Kannada News

ಮಂಗಳೂರಿನಲ್ಲಿ ‘ಬೀಚ್‌ ಉತ್ಸವ’ವೆಂಬ ಪ್ರೇಮಿಗಳದಿನದ ಜಾತ್ರೆ
ಫೆ.14 ಮತ್ತು 15ರಂದು ಪಣಂಬೂರ್‌ ಬೀಚ್‌ನಲ್ಲಿ ‘ಬೀಚ್‌ ಉತ್ಸವ’

ಪ್ರೇಮಿಗಳಿಗೆ ಮಂಗಳೂರಿನಲ್ಲಿ ಈ ಬಾರಿ ಹಬ್ಬವೋ ಹಬ್ಬ. ಮಂಗಳೂರಿನ ನಗರಾಭಿವೃದ್ಧಿ ಪ್ರಾಧಿಕಾರವು- ಪ್ರೇಮಿಗಳಿಗಾಗಿ ಪ್ರೇಮಿಗಳ ದಿನದ ಸಂದರ್ಭದಲ್ಲಿ ‘ಬೀಚ್‌ ಉತ್ಸವ’ ಆಚರಿಸುತ್ತಿದೆ.

ಫೆ.14 ಮತ್ತು 15ರಂದು ಮಂಗಳೂರಿನ ಪಣಂಬೂರ್‌ ಬೀಚ್‌ನಲ್ಲಿ ಹೋಟೆಲ್‌ ಮಾಲಿಕರ ಸಹಯೋಗದೊಂದಿಗೆ ‘ಬೀಚ್‌ ಉತ್ಸವ’ ಆಚರಿಸಲಾಗುವುದು ಎಂದು ಮಂಗಳೂರು ನಗರಾಭಿವೃದ್ಧಿ ಆಯುಕ್ತ ಕೃಷ್ಣಪ್ಪ ಪೂಜಾರಿ ಹೇಳಿದ್ದಾರೆ. ಪ್ರೇಮಿಗಳ ದಿನ- ಬೀಚ್‌ ಉತ್ಸವ ಎಂದಾಕ್ಷಣ, ತಕ್ಷಣ, ಆಲೋಚನೆ ಎತ್ತಲೆತ್ತಲೋ ಓಡುವ ಪ್ರಮೇಯವಿಲ್ಲ ಎಂದೂ ಕೃಷ್ಣಪ್ಪ ಸ್ಪಷ್ಟನೆ ನೀಡಿದ್ದಾರೆ.

ಎರಡು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಶುದ್ಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನಂಗಾ ನಾಚ್‌ ಅಂತೂ ಇಲ್ಲವೇ ಇಲ್ಲವಂತೆ! ಪರಿಣತರಿಂದ ಜನಪದ ನೃತ್ಯ, ಸಾಹಸಿಗರಿಂದ ಪ್ಯಾರಾಸೈಕಲಿಂಗ್‌, ಬೀಚ್‌ ರಕ್ಷಕ ಸಿಬ್ಬಂದಿಗಳಿಂದ ಬೀಚ್‌ ವಾಲಿಬಾಲ್‌, ಕಾಲೇಜು ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ, ಜೂ.ಶಂಕರ್‌ ಅವರಿಂದ ಮಾಯಾಜಾಲ ಇವಿಷ್ಟೂ ಹಾಗೂ ಇನ್ನಷ್ಟು ಬೀಚ್‌ ಉತ್ಸವದ ಪ್ರಮುಖ ಆಕರ್ಷಣೆಗಳು.

ಹೊಟ್ಟೆಯ ಬಗ್ಗೆ ಚಿಂತಿಸ ಬೇಡಿ. ಅಲ್ಲಿ ಹೋಟೆಲ್‌ ಮ್ಯಾನೇಜ್‌ಮೆಂಟ್‌ ವಿದ್ಯಾರ್ಥಿಗಳಿಂದ ದಕ್ಷಿಣ ಭಾರತೀಯ ತಿನಿಸು ಹಾಗೂ ಖ್ಯಾತ ಹೋಟೆಲ್‌ಗಳಿಂದ ‘ಆಹಾರೋತ್ಸವ’ ಇದೆ. ಬಂಗುಡೆ ಮೀನಿನ ಊಟವಿರಬಹುದಲ್ಲವೇ? ಅಷ್ಟೇ ಅಲ್ಲದೇ ನೀವೇ ಭಾಗವಹಿಸಬಹುದಾದ ಹಗ್ಗ ಜಗ್ಗಾಟ, ನಾಡ ದೋಣಿ ಸ್ಪರ್ಧೆ, ಗಾಳಿ ಪಟ ಹಾರಾಟ, ಮರಳಿನಲ್ಲಿ ಕೋಟೆ ಕಟ್ಟುವಿಕೆಯಂತಹ ಸ್ಪರ್ಧೆಗಳಿವೆ. ಬನ್ನಿ ಬನ್ನಿ ಎಂದು ಸ್ವಾಗತಿಸಲು ಕಡಲ ಅಲೆಗಳು ಹುಮ್ಮಸ್ಸ್ಸಿನಲ್ಲಿವೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X