ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುವರ್ಣ ಚತುರ್ಭುಜ : 78 ಕಿ.ಮೀ. ಹೆದ್ದಾರಿ ರಾಷ್ಟ್ರಕ್ಕೆ ಸಮರ್ಪಣೆ

By Staff
|
Google Oneindia Kannada News

ಸುವರ್ಣ ಚತುರ್ಭುಜ : 78 ಕಿ.ಮೀ. ಹೆದ್ದಾರಿ ರಾಷ್ಟ್ರಕ್ಕೆ ಸಮರ್ಪಣೆ
ತುಮಕೂರು- ಬೆಂಗಳೂರು ಪ್ರಯಾಣ, ಕೊಂಚ ಆರಾಮ

ತುಮಕೂರು: ಕೇಂದ್ರ ಭೂಸಾರಿಗೆ ಸಚಿವ ಹಾಗೂ ನಿವೃತ್ತ ಮೇಜರ್‌ ಜನರಲ್‌ ಬಿ.ಸಿ. ಖಂಡೂರಿ , ಸುವರ್ಣ ಚತುರ್ಭುಜ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಸಿದ್ಧಗೊಂಡಿರುವ 78 ಕಿಮೀ ಉದ್ದದ 4 ಪಥ ರಸ್ತೆಯನ್ನು ತಮಿಳುನಾಡು ಹಾಗೂ ಕರ್ನಾಟಕದಲ್ಲಿ ನಡೆದ ಎರಡು ಬೇರೆ ಬೇರೆ ಸಮಾರಂಭಗಳಲ್ಲಿ ಫೆ.9 ರ ಸೋಮವಾರ ಉದ್ಘಾಟಿಸಿದರು.

ಕರ್ನಾಟಕದ ತುಮಕೂರು ನಗರದ ಹೊರವಲಯದ ಮಂಚಕಲ್‌ಕುಪ್ಪೆ ಬಳಿ ನಡೆದ ಸಮಾರಂಭದಲ್ಲಿ ನೆಲಮಂಗಲ-ತುಮಕೂರು 29.5 ಕಿಮೀ ಮತ್ತು ರಾಷ್ಟ್ರೀಯ ಹೆದ್ದಾರಿ-04 ರ 0.62 ಕಿಮೀ ಉದ್ದದ ಚತುಷ್ಪಥ ರಸ್ತೆಯನ್ನು ಖಂಡೂರಿ ರಾಷ್ಟ್ರಕ್ಕೆ ಅರ್ಪಿಸಿದರು. ಈ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಲೋಕೋಪಯೋಗಿ ಸಚಿವ ಧರ್ಮಸಿಂಗ್‌ ವಹಿಸಿದ್ದರು. ಸ್ಥಳೀಯ ಶಾಸಕ ಶಿವಣ್ಣ, ಯೋಜನಾ ನಿರ್ದೇಶಕ ಡಿ.ಎಲ್‌.ಎನ್‌.ರಾವ್‌ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನಿಗದಿತ ಅವಧಿಗಿಂತ 4 ತಿಂಗಳು ಮುನ್ನ, ಅಂದರೆ ಕೇವಲ 7 ತಿಂಗಳಲ್ಲಿ ಕಾಮಗಾರಿ ಸಂಪೂರ್ಣಗೊಂಡಿದೆ. ಈ ಕಾರ್ಯವನ್ನು ಜೆಸ್‌ ಟೋಲ್‌ ಕಂಪೆನಿಗೆ ಗುತ್ತಿಗೆ ನೀಡಲಾಗಿತ್ತು. ಸುಮಾರು 155 ಕೋಟಿ ರೂ. ವೆಚ್ಚದಲ್ಲಿ ಈ ರಸ್ತೆ ನಿರ್ಮಾಣಗೊಂಡಿದೆ. ಆತ್ಯಾಧುನಿಕ ತಂತ್ರಜ್ಞಾನ ಬಳಸಿ 100 ಕಿಮೀ ವೇಗದಲ್ಲಿ ಚಲಿಸಬಹುದಾದ ಸೇತುವೆ, ಪಾದಾಚಾರಿ ಸುರಂಗ ಮಾರ್ಗಗಳು , ಮೇಲು ಸೇತುವೆ, ಹೆದ್ದಾರಿಯ ಇಕ್ಕೆಲೆಗಳಲ್ಲಿ ಗ್ರಾಮೀಣ ರಸ್ತೆ ಇತ್ಯಾದಿ ಸೌಲಭ್ಯ ಕಲ್ಪಿಸಿ ಈ ರಸ್ತೆಯನ್ನು ನಿರ್ಮಿಸಲಾಗಿದೆ ಎಂದು ಹೇಳಿದರು .

ದೇಶದಲ್ಲಿ ಪ್ರಧಾನಿ ಕನಸಿನ 24,000 ಕಿಮೀ ಉದ್ದದ ಚತುಷ್ಪಥ ರಸ್ತೆಗಳ ನಿರ್ಮಾಣ ಆಗಲಿವೆ. 2007 ರಲ್ಲಿ ಕನ್ಯಾಕುಮಾರಿ- ಶ್ರಿನಗರ ಹೆದ್ದಾರಿಯ ಕಾರ್ಯ ಸಂಪೂರ್ಣಗೊಳ್ಳಲಿದೆ ಎಂದರು. ಬಿಹಾರದಲ್ಲಿ ಆಡಳಿತಾತ್ಮಕ ಸಮಸ್ಯೆಯಿಂದ ಹೆದ್ದಾರಿ ಕಾಮಗಾರಿಯ ವೇಗ ಕುಂಠಿತವಾಗಿದೆ. ಉಳಿದೆಡೆ ಉತ್ತಮ ಪ್ರಗತಿಯಲ್ಲಿದೆ. ದೇಶದಲ್ಲಿ 94 ಸಾವಿರ ಕೋಟಿ ರೂಪಾಯಿಯನ್ನು ರಸ್ತೆಯ ಆಧುನಿಕರಣಕ್ಕೆ ಬಳಸಲಾಗುವುದು ಎಂದು ಹೇಳಿದರು.

ಚುನಾವಣಾ ನೀತಿ ಸಂಹಿತೆ ಪಾಲಿಸಬೇಕೆಂದ ಚುನಾವಣಾ ಆಯೋಗದ ಆಧ್ಯಕ್ಷ ಟಿ ಎಸ್‌ ಕೃಷ್ಣಮೂರ್ತಿಯವರ ಹೇಳಿಕೆಯನ್ನು ಗೌರವಿಸುತ್ತೇನೆ. ಆದರೆ ಕೇಂದ್ರ ಸರಕಾರ ಯಾವ ರೀತಿಯಲ್ಲೂ ನೀತಿ ಸಂಹಿತೆ ಮೀರಿಲ್ಲ ಎಂದು ಸಚಿವ ಖಂಡೂರಿ ನುಡಿದರು.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X