ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ಧಗಂಗೆ ಮಾಜಿ ಸ್ವಾಮಿಗೆ 10 ವರ್ಷ ಕಠಿಣ ಸಜೆ, 25ಲಕ್ಷ ದಂಡ

By Staff
|
Google Oneindia Kannada News

ಸಿದ್ಧಗಂಗೆ ಮಾಜಿ ಸ್ವಾಮಿಗೆ 10 ವರ್ಷ ಕಠಿಣ ಸಜೆ, 25ಲಕ್ಷ ದಂಡ
ಗೌರಿಶಂಕರರ ಮೇಲಿನ ಸಲಿಂಗ ರತಿ ಆರೋಪ ಸಾಬೀತು

ಬೆಂಗಳೂರು : ಬಾಲಕನೊಬ್ಬನನ್ನು ಸಲಿಂಗ ರತಿಗೆ ಬಳಸಿಕೊಂಡ ಪ್ರಕರಣದಲ್ಲಿ ಸಿದ್ಧಗಂಗಾ ಮಠದ ಮಾಜಿ ಸ್ವಾಮಿ ಗೌರೀಶಂಕರರಿಗೆ 10 ವರ್ಷದ ಕಠಿಣ ಸಜೆ ಹಾಗೂ 25 ಲಕ್ಷ ರುಪಾಯಿ ದಂಡವನ್ನು ರಾಜ್ಯ ಹೈಕೋರ್ಟ್‌ ವಿಧಿಸಿದೆ.

ನ್ಯಾಯಮೂರ್ತಿ ಎಂ.ಎಫ್‌.ಸಲ್ಡಾನ ಮತ್ತು ನ್ಯಾಯಮೂರ್ತಿ ಕೆ.ರಾಮಣ್ಣ ಅವರನ್ನೊಳಗೊಂಡ ನ್ಯಾಯಪೀಠ, ಗೌರೀಶಂಕರ ಸ್ವಾಮಿಗೆ 10 ವರ್ಷಗಳ ಕಠಿಣ ಶಿಕ್ಷೆ ಹಾಗೂ 25 ಲಕ್ಷ ರುಪಾಯಿಗಳ ದಂಡವನ್ನು ಮಂಗಳವಾರ ವಿಧಿಸಿತು. ಅಪರಾಧಿಯನ್ನು ತಕ್ಷಣವೇ ಬಂಧಿಸಿ ಜೈಲಿಗೆ ಕಳಿಸುವಂತೆ ನ್ಯಾಯಪೀಠ ಆದೇಶಿಸಿತು.

ತೀರ್ಪು ನೀಡುವ ಸಂದರ್ಭದಲ್ಲಿ ಗೌರಿಶಂಕರ ಸ್ವಾಮಿ ನ್ಯಾಯಪೀಠದ ಮುಂದೆ ಹಾಜರಿರಲಿಲ್ಲ . ಅನಾರೋಗ್ಯದ ಪ್ರಮಾಣಪತ್ರ ಕಳುಹಿಸಿದ್ದ ಸ್ವಾಮಿ- ಸುಪ್ರಿಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವವರೆಗೆ ಶಿಕ್ಷೆಯನ್ನು ತಡೆಹಿಡಿಯಬೇಕೆಂದು ಕೋರಿದ್ದರು. ಪ್ರತಿಷ್ಠಿತ ವ್ಯಕ್ತಿಗಳು ಕಾನೂನಿನ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಬಹುದೆನ್ನುವ ಶಂಕೆಯ ಹಿನ್ನೆಲೆಯಲ್ಲಿ ಸ್ವಾಮಿಯ ಮನವಿಗಳನ್ನು ನ್ಯಾಯಪೀಠ ತಳ್ಳಿಹಾಕಿತು.

25 ಲಕ್ಷ ರುಪಾಯಿ ದಂಡ ವಸೂಲಿ ಮಾಡಿ, ಆ ಹಣವನ್ನು ಸ್ವಾಮಿಯಿಂದ ಲೈಂಗಿಕ ಶೋಷಣೆಗೆ ಒಳಗಾದ ದಿಲೀಪ್‌ಸಿಂಗ್‌ಗೆ ನೀಡಬೇಕು ಎಂದು ಆದೇಶಿಸಿರುವ ನ್ಯಾಯಪೀಠ- 25 ಲಕ್ಷ ರುಪಾಯಿ ದಂಡ ನೀಡಲು ತಪ್ಪಿದಲ್ಲಿ ಗೌರಿಶಂಕರ ಸ್ವಾಮಿಗೆ ಇನ್ನೂ ಒಂದು ವರ್ಷ ಕಠಿಣ ಸಜೆ ವಿಧಿಸಿದೆ.

ಸಿದ್ಧಗಂಗಾ ಮಠದಲ್ಲಿ ದ್ದ ದಿಲೀಪ್‌ ಸಿಂಗ್‌ ಎನ್ನುವ ವಿದ್ಯಾರ್ಥಿಯನ್ನು ಗೌರೀಶಂಕರ ಸ್ವಾಮಿ ಸಲಿಂಗ ರತಿಗೆ ಬಳಸಿಕೊಂಡಿದ್ದರು ಎನ್ನುವ ವಿವಾದ 1986ರಲ್ಲಿ ರಾಜ್ಯಾದ್ಯಂತ ಸುದ್ದಿಯಾಗಿತ್ತು . ಈ ಹಗರಣದ ಹಿನ್ನೆಲೆಯಲ್ಲಿ ಸ್ವಾಮಿಯನ್ನು ಸಿದ್ಧಗಂಗಾ ಮಠದಿಂದ ಉಚ್ಛಾಟಿಸಲಾಗಿತ್ತು .

(ಇನ್ಫೋ ವಾರ್ತೆ)

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X