ಅಡಿಕೆಯ ಹೋದ ಮಾನ ಮರಳಿ ತಂದುಕೊಡಲು ಕೆಸಿಡಿಸಿ ಸಂಕಲ್ಪ
ಅಡಿಕೆಯ ಹೋದ ಮಾನ ಮರಳಿ ತಂದುಕೊಡಲು ಕೆಸಿಡಿಸಿ ಸಂಕಲ್ಪ
ಬಂಜೆ ಗಿಡಗಳ ಜಾಗದಲ್ಲಿ ಅಧಿಕ ಇಳುವರಿಯ ಗಿಡಗಳ ನಾಟಿ
ರಾಜ್ಯದ 1 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಧಿಕ ಇಳುವರಿಯ ಸುಧಾರಿಸಿದ ಅಡಿಕೆ ಗಿಡಗಳನ್ನು 2004-05 ವಿತ್ತ ವರ್ಷದಲ್ಲಿ ನೆಡಲು ಕೆಸಿಡಿಸಿ ನಿರ್ಧರಿಸಿದೆ ಎಂದು ಮಂಡಳಿಯ ಅಧ್ಯಕ್ಷ ವಿ.ಕಲ್ಲಿಗೆ ತಾರಾನಾಥ್ ಶೆಟ್ಟಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬಂಜೆ ಗಿಡಗಳನ್ನು ಬದಲಿಸಿ, ಆ ಜಾಗದಲ್ಲಿ ಸುಧಾರಿಸಿದ ತಳಿಯ 2 ಲಕ್ಷ ಅಡಿಕೆ ಗಿಡಗಳನ್ನು ನೆಡಲು 1.8 ಕೋಟಿ ರುಪಾಯಿ ವೆಚ್ಚದಲ್ಲಿ ಕೆಸಿಡಿಸಿ ಯೋಜನೆ ರೂಪಿಸಿದೆ. ಈ ಯೋಜನೆ ಜೂನ್ ವೇಳೆಗೆ ಕೊನೆಗೊಳ್ಳುವುದು. ಮಂಡಳಿಯ ಬೆಳ್ಳಿಹಬ್ಬದ ಪ್ರಯುಕ್ತ - ಮುಂದಿನ 5 ವರ್ಷಗಳಲ್ಲಿ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಗಿಡ ನಾಟಿ ಮಾಡಲು ಉದ್ದೇಶಿಸಲಾಗಿದೆ. ಈ ಯೋಜನೆಗೆ 10.5 ಕೋಟಿ ರುಪಾಯಿ ತಗುಲಲಿದೆ ಎಂದು ತಾರಾನಾಥ್ ಹೇಳಿದರು.
ಪ್ರಸಕ್ತ ಹಣಕಾಸು ವರ್ಷದಲ್ಲಿ ಕೆಸಿಡಿಸಿ 2.77 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. ಕಳೆದ ವಿತ್ತ ವರ್ಷದಲ್ಲಿ ಈ ಪ್ರಮಾಣ 2.67 ಕೋಟಿ ರುಪಾಯಿಗಳಾಗಿತ್ತು ಎಂದು ಮಂಡಳಿಯ ಲೆಕ್ಕಪತ್ರದ ವಿವರ ನೀಡಿದ ತಾರಾನಾಥ್- ಕುಂದಾಪುರ ಬಳಿಯಿರುವ ಫೆನ್ನಿ ಕಾರ್ಖಾನೆಯನ್ನು ಮುಚ್ಚಲು ಕೆಸಿಡಿಸಿ ನಿರ್ಧರಿಸಿದೆ ಎಂದರು.
2002-03ನೇ ಸಾಲಿನಲ್ಲಿ ದೇಶ 1.27 ಲಕ್ಷ ಮೆಟ್ರಿಕ್ ಟನ್ ಅಡಿಕೆಯ (2006 ಕೋಟಿ ರು.ಮೌಲ್ಯದ) ವಿದೇಶಿ ವಿನಿಮಯ ಸಾಧಿಸಿದೆ ಎಂದು ತಾರಾನಾಥ್ ಶೆಟ್ಟಿ ತಿಳಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications