ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಪ್ರಚಂಡಜಯ-ಸಮೀಕ್ಷೆ

By Staff
|
Google Oneindia Kannada News

ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಪ್ರಚಂಡಜಯ-ಸಮೀಕ್ಷೆ
ಇಂಡಿಯಾ ಟುಡೆ ನಡೆಸಿದ ಸಮೀಕ್ಷೆಯಲ್ಲಿ ಎನ್‌ಡಿಎಗೆ ಮತದಾರರ ಒಲವು

ನವದೆಹಲಿ : ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾ ಸತ್ತಾತ್ಮಕ ಒಕ್ಕೂಟ ಭಾರೀ ಬಹುಮತ ಪಡೆಯುವುದೆಂದು ಇಂಡಿಯಾ ಟುಡೆ ಸಮೀಕ್ಷೆ ತಿಳಿಸಿದೆ.

‘ಮೂಡ್‌ ಆಫ್‌ ದಿ ನೇಷನ್‌’ ಎನ್ನುವ ಹೆಸರಿನಲ್ಲಿ ORG-MARG ಸಂಸ್ಥೆಯ ನೆರವಿನೊಂದಿಗೆ ಇಂಡಿಯಾ ಟುಡೆ ನಡೆಸಿದ ಸಮೀಕ್ಷೆ ಪ್ರಕಟವಾಗಿದ್ದು - 545 ಸಂಖ್ಯೆಯ ಲೋಕಸಭೆಯಲ್ಲಿ ಎನ್‌ಡಿಎ 330ರಿಂದ 340 ಸ್ಥಾನ ಪಡೆಯಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.

ಸಮೀಕ್ಷೆಯ ಎರಡು ಪ್ರಮುಖ ಅಂಶಗಳು :

  • ಎನ್‌ಡಿಎ ಕಳೆದ ಬಾರಿಗಿಂತ ಸುಮಾರು 30 ಸ್ಥಾನಗಳನ್ನು ಹೆಚ್ಚಾಗಿ ಪಡೆಯಲಿದೆ. 1999 ರ ಚುನಾವಣೆಯಲ್ಲಿ ಎನ್‌ಡಿಎ 304 ಸ್ಥಾನ ಪಡೆದಿತ್ತು .
  • ಕಾಂಗ್ರೆಸ್‌ ಹಾಗೂ ಮಿತ್ರಪಕ್ಷಗಳು 30 ಸ್ಥಾನಗಳನ್ನು ಕಳೆದುಕೊಳ್ಳಲಿದ್ದು , ಈ ಒಕ್ಕೂಟ 105 ರಿಂದ 115 ಸ್ಥಾನ ಪಡೆಯುವ ನಿರೀಕ್ಷೆಯಿದೆ.
90 ಲೋಕಸಭಾ ಕ್ಷೇತ್ರಗಳ 17,649 ಮತದಾರರನ್ನು ಸಂದರ್ಶಿಸುವ ಮೂಲಕ ಇಂಡಿಯಾಟುಡೆ-ಮಾರ್ಗ್‌ ಸಮೀಕ್ಷೆ ತನ್ನ ಮುನ್ಸೂಚನೆಗಳನ್ನು ಪ್ರಕಟಿಸಿದೆ. ಸಮೀಕ್ಷೆಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶದ, ಎಲ್ಲ ವಯೋಮಾನದ ಸ್ತ್ರೀ-ಪುರುಷ ಮತದಾರರ ಅಭಿಪ್ರಾಯ ಸಂಗ್ರಹಿಸಲಾಗಿದೆ.

2004ನೇ ಇಸವಿಯ ಜನವರಿ 9ರಿಂದ 17ರವರೆಗೆ ಈ ಸಮೀಕ್ಷೆ ನಡೆಸಲಾಗಿದೆ. ಈ ಸಮೀಕ್ಷೆ ನಡೆಸುವ ಕಾಲಕ್ಕೆ ಎನ್‌ಡಿಎ ಹಾಗೂ ತಮಿುನಾಡಿನ ಅಣ್ಣಾಡಿಎಂಕೆ ನಡುವಿನ ಒಪ್ಪಂದ ಏರ್ಪಟ್ಟಿರಲಿಲ್ಲ .

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X