ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ

By Staff
|
Google Oneindia Kannada News

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ
ವಿಮಾನ ನಿಲ್ದಾಣಕ್ಕೆ ದೇಶದ ಹೆಬ್ಬಾಗಿಲು ಎನ್ನುವ ಖ್ಯಾತಿ- ಕೃಷ್ಣ ವಿಶ್ವಾಸ

ಬೆಂಗಳೂರು : ನೆನೆಗುದಿಗೆ ಬಿದ್ದಿದ್ದ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿ ಆರಂಭಕ್ಕೆ ಕಂಕಣ ಕೂಡಿಬಂದಿದ್ದು , ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ವಿಮಾನ ನಿಲ್ದಾಣ ಕಾಮಗಾರಿಯ ಗುದ್ದಲಿಪೂಜೆಯನ್ನು ಗುರುವಾರ ನೆರವೇರಿಸಿದರು.

2006ರೊಳಗೆ ವಿಮಾನ ನಿಲ್ದಾಣ ಕಾಮಗಾರಿ ಮುಕ್ತಾಯವಾಗುವುದೆಂದು ನಿರೀಕ್ಷಿಸಲಾಗಿದೆ. ವಿಮಾನ ನಿಲ್ದಾಣದಿಂದ ಬೆಂಗಳೂರು ನಗರಕ್ಕೆ ಆರು ಪಥಗಳ ರಸ್ತೆ ನಿರ್ಮಿಸಲಾಗುವುದು. ಬೆಂಗಳೂರಿನಿಂದ ದೇವನಹಳ್ಳಿಗೆ ರೈಲು ಮಾರ್ಗ ನಿರ್ಮಿಸುವ ಕುರಿತು ಚಿಂತಿಸಲಾಗುತ್ತಿದೆ ಎಂದು ಶಂಕುಸ್ಥಾಪನೆ ನೆರವೇರಿಸಿದ ನಂತರ (ಜ.29ರ ಗುರುವಾರ ) ಮಾತನಾಡಿದ ಮುಖ್ಯಮಂತ್ರಿ ಕೃಷ್ಣ ತಿಳಿಸಿದರು.

ಅಂದಾಜು 1260 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ವಿಮಾನ ನಿಲ್ದಾಣ, ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣವಾಗುತ್ತಿರುವ ದೇಶದ ಮೊಟ್ಟಮೊದಲ ವಿಮಾನ ನಿಲ್ದಾಣ ಎನ್ನಿಸಿಕೊಂಡಿದೆ.

ವಿಮಾನ ನಿಲ್ದಾಣ ಕಾಮಗಾರಿ ಯೋಜನೆ ಆರಂಭಕ್ಕೆ ಸಹಕರಿಸಿದ ಪ್ರಧಾನಿ ವಾಜಪೇಯಿ ಹಾಗೂ ಇತರ ಕೇಂದ್ರ ಸಚಿವರ ಪ್ರೋತ್ಸಾಹವನ್ನು ಕೃಷ್ಣ ಪ್ರಶಂಸಿಸಿದರು. ವಿಮಾನ ನಿಲ್ದಾಣ ಕಾಮಗಾರಿ ವೇಗವಾಗಿ ನಡೆಯಲಿದ್ದು , ಈ ವೇಗಕ್ಕೆ ಯಾವುದೂ ಅಡ್ಡಿಯಾಗದು ಎಂದು ಕೃಷ್ಣ ಹೇಳಿದರು.

4300 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ಸಿದ್ಧಗೊಳ್ಳಲಿದೆ. ಕಾಮಗಾರಿ ಮುಕ್ತಾಯದ ನಂತರ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ದೇಶದ ಹೆಬ್ಬಾಗಿಲು ಎನ್ನುವ ಖ್ಯಾತಿ ಹೊಂದಲಿದೆ ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕ ಸರ್ಕಾರ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ತಲಾ ಶೇ.13ರಷ್ಟು ಷೇರನ್ನು, ಮತ್ತು ಖಾಸಗಿ ವಲಯ ಶೇ.74ರ ಪಾಲನ್ನು ವಿಮಾನ ನಿಲ್ದಾಣ ಕಾಮಗಾರಿ ವೆಚ್ಚದಲ್ಲಿ ಭರಿಸಲಿವೆ. ಖಾಸಗಿ ಬಂಡವಾಳವಾದ ಶೇ.74 ರಲ್ಲಿ - ಸೀಮನ್ಸ್‌ ಶೇ.40, ಲಾರ್ಸನ್‌ ಅಂಡ್‌ ಟರ್ಬೊ ಶೇ.17 ಮತ್ತು ಝಯೂರಿಚ್‌ ಏರ್‌ಫೋರ್ಟ್‌ ಶೇ.17ರಷ್ಟನ್ನು ಭರಿಸಲಿವೆ.

(ಪಿಟಿಐ)

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X