ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಸಂಚಯ’ ಬಳಗದಿಂದ ಜ.31ರಂದು ಕವಿದಿನವಾಗಿ ಬೇಂದ್ರೆ ಜನ್ಮದಿನ

By Staff
|
Google Oneindia Kannada News

‘ಸಂಚಯ’ ಬಳಗದಿಂದ ಜ.31ರಂದು ಕವಿದಿನವಾಗಿ ಬೇಂದ್ರೆ ಜನ್ಮದಿನ
ಸಂಚಯ ಸಾಹಿತ್ಯ ಸ್ಪರ್ಧೆ ಫಲಿತಾಂಶ

ಬೆಂಗಳೂರು : ‘ಸಂಚಯ’ ಸಾಂಸ್ಕೃತಿಕ ಪತ್ರಿಕೆಯ 2003ನೇ ಸಾಲಿನ ಸಾಹಿತ್ಯ ಸ್ಪರ್ಧೆ ಫಲಿತಾಂಶ ಪ್ರಕಟವಾಗಿದೆ. ಫಲಿತಾಂಶ ಕೆಳಕಂಡಂತಿದೆ :

ಕಾವ್ಯಸ್ಪರ್ಧೆ ಬಹುಮಾನಿತರು : ಉಗಮ ಶ್ರೀನಿವಾಸ (ಶಿವಮೊಗ್ಗ), ವಿಭಾ (ಬಾಗಲಕೋಟೆ), ರೋಸಿ ಶೈಲೇಶ್‌ (ಬೆಂಗಳೂರು), ಸುನಂದಾ ಪ್ರಕಾಶ ಕಡಮೆ (ಹುಬ್ಬಳ್ಳಿ), ಎ.ರಾಧಾಕೃಷ್ಣ (ಬಂಟ್ವಾಳ), ಮನೋಹರ ಜನ್ನು (ದಾಂಡೇಲಿ), ಅನಂತ ಹುದೆಂಗಜೆ (ದ.ಕ.), ಜ್ಯೋತಿ ಗುರುಪ್ರಸಾದ್‌ (ಕಾರ್ಕಳ).

ಕಥಾಸ್ಪರ್ಧೆ ಬಹುಮಾನಿತರು : ಪರಮೇಶ್ವರ ಪುರಾಣಿಕ. ಮೆಚ್ಚುಗೆ ಪಡೆದವರು : ವೆಂಕಟಾಚಲ (ಸರ್ಜಾಪುರ, ಬೆಂಗಳೂರು ಗ್ರಾ.), ಪ್ರಭಾಕರ ತಾಮ್ರಗೌರಿ (ಗೋಕರ್ಣ), ಚಂಪಾವತಿ ನಾವದಗಿ (ಬೆಂಗಳೂರು), ಚಂದ್ರಮ್ಮ (ಬೆಂಗಳೂರು), ನಿರ್ಮಲ ಎಸ್‌.ಖಟಾವ್‌ಕರ್‌ (ಬೆಂಗಳೂರು) ಪಿ.ಶ್ರೀಮತಿದೇವಿ, ಮೂಡುಮರ್ನಾಡು (ಕಾರ್ಕಳ).

ಜನವರಿ 31ರ ಕವಿದಿನದ ಸಮಾರಂಭದಲ್ಲಿ ಬಹುಮಾನಗಳನ್ನು ಪ್ರದಾನ ಮಾಡಲಾಗುವುದು ಎಂದು ಸಂಚಯ ಸಂಪಾದಕ ಡಿ.ವಿ.ಪ್ರಹ್ಲಾದ್‌ ದಟ್ಸ್‌ಕನ್ನಡ.ಕಾಂಗೆ ತಿಳಿಸಿದ್ದಾರೆ.

ಕವಿದಿನ : ಜನವರಿ 31 ರಂದು ವರಕವಿ ಬೇಂದ್ರೆ ಅವರ ಜನ್ಮದಿನ. ಕಳೆದ ಕೆಲವು ವರ್ಷಗಳಿಂದ ‘ಸಂಚಯ’ ಸಾಂಸ್ಕೃತಿಕ ಪತ್ರಿಕೆ ಬೇಂದ್ರೆ ಅವರ ಜನ್ಮದಿನವನ್ನು ಕವಿದಿನವನ್ನಾಗಿ ಆಚರಿಸುತ್ತಿದ್ದು , ಈ ಬಾರಿಯೂ ಕವಿದಿನವನ್ನು ಆಚರಿಸಲಿದೆ.

ಬೆಂಗಳೂರಿನ ನರಸಿಂಹರಾಜ ಕಾಲೊನಿಯ ಬಿಎಂಶ್ರೀ ಕಲಾಭವನದಲ್ಲಿ ಸಂಚಯ ಬಳಗದ ಕವಿದಿನ ಸಮಾರಂಭ ಜ.31ರ ಶನಿವಾರ ಸಂಜೆ 6.15ಕ್ಕೆ ನಡೆಯಲಿದೆ. ಹಿರಿಯ ಕವಿ ಡಾ.ಬಿ.ಸಿ.ರಾಮಚಂದ್ರಶರ್ಮ ಕವಿದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಹುಮಾನಿತ ಕವಿ-ಕಥೆಗಾರರಿಗೆ ಬಹುಮಾನಗಳನ್ನು ಪ್ರದಾನ ಮಾಡುವರು. ಇದೇ ಸಂದರ್ಭದಲ್ಲಿ ಪ್ರೊ.ಎಸ್‌.ಆರ್‌.ಮಳಗಿ ಅವರನ್ನು ಸಂಚಯ ಬಳಗ ಗೌರವಿಸಲಿದೆ.

ಸಂಚಯ ಬಳಗದ ದೂರವಾಣಿ : 080- 26791925, 26614510.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X