ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಲೂರ ಸಮಾವೇಶದಲ್ಲಿ ಎನ್‌ಡಿಎಗೆ ಸೋನಿಯಾಗಾಂಧಿ ‘ಪೂಜೆ’

By Staff
|
Google Oneindia Kannada News

ಬೇಲೂರ ಸಮಾವೇಶದಲ್ಲಿ ಎನ್‌ಡಿಎಗೆ ಸೋನಿಯಾಗಾಂಧಿ ‘ಪೂಜೆ’
ಐತಿಹಾಸಿಕ ಬೇಲೂರು ಘೋಷಣೆಗೆ ವೇದಿಕೆಯಾದ ಪಂಚಾಯತ್‌ರಾಜ್‌ ಸಮಾವೇಶ

ಬೇಲೂರು : ‘ಭಾರತ ಪ್ರಕಾಶಿಸುತ್ತಿದೆ’ ಎಂದು ವಿವಿಧ ವಾಹಿನಿಗಳಲ್ಲಿ ಕೇಂದ್ರದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಸರ್ಕಾರ ಪ್ರಸಾರ ಮಾಡುತ್ತಿರುವ ಜಾಹಿರಾತಿನ ಕುರಿತು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳ ಮೂಲಕ ಜನರನ್ನು ವಂಚಿಸಲು ಎನ್‌ಡಿಎ ತೊಡಗಿದೆ. ಅವರು ಮಾಡಿರುವ ಕೆಲಸ ಅಲ್ಪ , ತೋರಿಸಿಕೊಳ್ಳುತ್ತಿರುವುದು ಮಾತ್ರ ಬಹಳಷ್ಟು ಎಂದು ಸೋನಿಯಾ ಟೀಕಿಸಿದರು. ಅವರು ಶುಕ್ರವಾರ ಧಾರವಾಡ ಜಿಲ್ಲೆಯ ಬೇಲೂರಿನಲ್ಲಿ ನಡೆದ ಪಂಚಾಯತ್‌ರಾಜ್‌ ಮತ್ತು ನಗರಸಭೆಗಳ ಬೃಹತ್‌ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಪತ್ರಿಕೆಗಳು ಮತ್ತು ವಿವಿಧ ಮಾಧ್ಯಮಗಳ ಮೂಲಕ ಎನ್‌ಡಿಎ ಸರ್ಕಾರ ತನ್ನ ಪ್ರಚಾರ ಮಾಡಿಕೊಳ್ಳುತ್ತಿದೆ. ತಪ್ಪು ಕಲ್ಪನೆಗಳನ್ನು ಜನರು ನಂಬಬೇಕೆಂದು ಎನ್‌ಡಿಎ ಮಂದಿ ಬಯಸುತ್ತಿದ್ದಾರೆ. ಅಲ್ಪ ಸಾಧನೆಯ ಸರ್ಕಾರ ಬಡಾಯಿ ಕೊಚ್ಚಿಕೊಳ್ಳುತ್ತಿದ್ದು , ಮಾಧ್ಯಮಗಳ ಮೂಲಕ ಜನರನ್ನು ವಂಚಿಸಲು ಹೊರಟಿದೆ ಎಂದು ಸೋನಿಯಾ ಆವೇಶದಿಂದ ನುಡಿದರು.

ಪಂಚಾಯತ್‌ರಾಜ್‌ ಮತ್ತು ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರು ನೀಡಿದ ಕೊಡುಗೆಯನ್ನು ಸೋನಿಯಾ ಸ್ಮರಿಸಿದರು.

ಬೇಲೂರು ಘೋಷಣೆ : ಪಂಚಾಯತ್‌ರಾಜ್‌ ಸಮಾವೇಶದಲ್ಲಿ ಮಾತನಾಡಿದ ರಾಜ್ಯದ ಪಂಚಾಯತ್‌ರಾಜ್‌ ಸಚಿವ ಎಂ.ವೈ.ಘೋರ್ಪಡೆ- ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡುವ ರಾಜ್ಯ ಸರ್ಕಾರದ ಘೋಷಣೆಯನ್ನು ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಮತ್ತು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರ ಸಮ್ಮುಖದಲ್ಲಿ ಪ್ರಕಟಿಸಿದರು.

ಪ್ರಾದೇಶಿಕ ಅಸಮತೋಲನ ನಿವಾರಣೆಯ ಯೋಜನೆಗಳಲ್ಲಿ ಪಂಚಾಯತ್‌ ರಾಜ್‌ ಹಾಗೂ ಸ್ಥಳೀಯ ಸಂಸ್ಥೆಗಳನ್ನು ಸಕ್ರಿಯವಾಗಿ ಬಳಸಿಕೊಳ್ಳುವುದು, ಪಂಚಾಯತ್‌ರಾಜ್‌ ಸಂಸ್ಥೆಗಳಿಗೆ ಹಣಕಾಸು, ಸಿಬ್ಬಂದಿ ಹಾಗೂ ಜವಾಬ್ದಾರಿ ವಹಿಸುವುದು, ಅಕ್ಷರ ದಾಸೋಹ, ಪ್ರಾಥಮಿಕ ಶಾಲೆಗಳು, ನ್ಯಾಯಬೆಲೆ ಅಂಗಡಿಗಳು, ಅಂಗನವಾಡಿಗಳು ಮತ್ತು ವಯಸ್ಕರ ಶಿಕ್ಷಣ ಕೇಂದ್ರಗಳನ್ನು ಪಂಚಾಯತ್‌ಗಳ ಆಡಳಿತದ ವ್ಯಾಪ್ತಿಗೆ ತರುವುದು ಬೇಲೂರು ಘೋಷಣೆಯ ಬೀಜಮಂತ್ರವಾಗಿದೆ.

ಬಹಿಷ್ಕಾರ: ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಈ ಸಮಾವೇಶವನ್ನು ಪ್ರತಿಪಕ್ಷಗಳ ಸದಸ್ಯರು ಬಹಿಷ್ಕರಿಸಿದ್ದರು. ಪಂಚಾಯತ್‌ರಾಜ್‌ ಸಮಾವೇಶವನ್ನು ಕಾಂಗ್ರೆಸ್‌ನ ಚುನಾವಣಾ ಪೂರ್ವ ಗಿಮಿಕ್‌ ಹಾಗೂ ಕಾಂಗ್ರೆಸ್‌ ಸಮಾವೇಶ ಎಂದು ಬಿಜೆಪಿ ಹಾಗೂ ಜಾತ್ಯತೀತ ಜನತಾದಳಗಳು ಟೀಕಿಸಿವೆ.

(ಏಜನ್ಸೀಸ್‌)

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X