• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರಿನ ‘ಐಐಎಸ್‌ಸಿ’ಯಲ್ಲಿ ನಳಂದಾವಿವಿ ಕಂಡ ಡಾ.ಕಲಾಂ

By Staff
|

ಬೆಂಗಳೂರಿನ ‘ಐಐಎಸ್‌ಸಿ’ಯಲ್ಲಿ ನಳಂದಾವಿವಿ ಕಂಡ ಡಾ.ಕಲಾಂ

‘ಇಡೀ ದೇಶದ ಜನತೆಯ ಮೊಗದಲ್ಲಿ ನಗುವನ್ನು ತರಲಿಕ್ಕಾಗಿ ರಾಷ್ಟ್ರಪತಿಯಾದೆ... ’

ಬೆಂಗಳೂರು : ಬಡತನದ ರೇಖೆಗಿಂತ ಕೆಳಗಿರುವ ಕೋಟ್ಯಂತರ ಮಂದಿಯನ್ನು ಮೇಲಕ್ಕೆ ತರುವ ಉದ್ದೇಶದಿಂದ ತಾವು ರಾಷ್ಟ್ರಪತಿ ಹುದ್ದೆಯನ್ನು ಒಪ್ಪಿಕೊಂಡಿರುವುದಾಗಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್‌ ಕಲಾಂ ಹೇಳಿದ್ದಾರೆ.

ಬಡತನ ರೇಖೆಗಿಂತ ಕೆಳಗಿರುವ ಮಂದಿಯನ್ನು ಮೇಲೆತ್ತಲು ಅನುಕೂಲವಾಗುವಂಥ ರಾಜಕೀಯ ಹಾಗೂ ವಿವಿಧ ಆಡಳಿತಾತ್ಮಕ ಪದ್ಧತಿಗಳ ಚಿಂತನೆಗಳನ್ನು ಮಾರ್ಕೆಟಿಂಗ್‌ ಮಾಡುವ ಉದ್ದೇಶದಿಂದ ರಾಷ್ಟ್ರಪತಿ ಪದವನ್ನು ಒಪ್ಪಿಕೊಂಡೆ. ಇಡೀ ದೇಶದ ಜನತೆಯ ಮೊಗದಲ್ಲಿ ನಗುವನ್ನು ತರುವುದು ತಮ್ಮ ಗುರಿ ಎಂದು ಕಲಾಂ ಹೇಳಿದರು. ಭಾರತೀಯ ವಿಜ್ಞಾನ ಭವನ (ಐಐಎಸ್‌ಸಿ) ಕ್ಕೆ ಜ.16ರ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ - ಅಣ್ಣಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ತಾವು ರಾಷ್ಟ್ರಪತಿ ಭವನಕ್ಕೆ ಬಂದುದು ಹೇಗೆ ಮತ್ತು ಏಕೆ ಎನ್ನುವುದನ್ನು ಕಲಾಂ ವಿವರಿಸಿದರು.

ಐಐಎಸ್‌ಸಿಯ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಕಲಾಂ- ತಾವು ಈ ಮುನ್ನ ಅನೇಕ ಸಲ ಐಐಎಸ್‌ಸಿಗೆ ಭೇಟಿ ನೀಡಿದ ಸಂದರ್ಭಗಳನ್ನು ಸ್ಮರಿಸಿಕೊಂಡರು. ಐಐಎಸ್‌ಸಿ ತಮಗೆ ಮನೆಯಿದ್ದಂತೆ, ಇಲ್ಲಿ ಯಾವುದೇ ಸಂಕೋಚವಿಲ್ಲ ಎಂದು ಕಲಾಂ ಹೇಳಿದರು.

ಸಿದ್ಧಪಡಿಸಿದ ಭಾಷಣದ ಹೊರತಾಗಿ ಮಾತನಾಡಿದ ರಾಷ್ಟ್ರಪತಿ ಕಲಾಂ, ಸಭಿಕರು ತಮಗೆ ಯಾವುದೇ ಪ್ರಶ್ನೆಗಳನ್ನು ಕೇಳಬಹುದೆಂದು ಆಹ್ವಾನ ನೀಡಿದರು. ಭಾರತದ ವಿಷನ್‌-2020 ತಮ್ಮದು ಮಾತ್ರವಾಗಿರದೆ ಇಡೀ ದೇಶದ್ದಾಗಿದೆ ಎಂದು ಕಲಾಂ ಬಣ್ಣಿಸಿದರು.

ಶಿಕ್ಷಣದಲ್ಲಿ ವ್ಯಾಪಾರ್ಯೋದ್ಯಮ ವಿಷಯ : ಭಾರತೀಯ ಶಿಕ್ಷಣ ಪದ್ಧತಿ ತನ್ನ ಒಂದಂಗವಾಗಿ ವಾಣಿಜ್ಯ ವಿಷಯವನ್ನು ಒಳಗೊಳ್ಳಬೇಕು. ಈ ನಿಟ್ಟಿನಲ್ಲಿ ಬ್ಯಾಂಕುಗಳು ಹಾಗೂ ಹೂಡಿಕೆದಾರರು ಮಹತ್ವದ ಪಾತ್ರ ವಹಿಸಬೇಕು ಎಂದು ರಾಷ್ಟ್ರಪತಿ ಕಲಾಂ ಅಭಿಪ್ರಾಯಪಟ್ಟರು.

ಇಂಡಿಯಾ ವಿಷನ್‌-2020 : ತಾಂತ್ರಿಕ ವಿಶ್ವವಿದ್ಯಾಲಯಗಳ ಪಾತ್ರ ಎನ್ನುವ ಕಮ್ಮಟದ ಶಿಬಿರಾರ್ಥಿಗಳ ಉದ್ದೇಶಿಸಿ ಮಾತನಾಡಿದ ಕಲಾಂ- ಪ್ರತಿವರ್ಷ ಮೂರು ಮಿಲಿಯನ್‌ ಪದವೀಧರರು ವಿವಿಗಳಿಂದ ಹೊರಬೀಳುತ್ತಿದ್ದು , ಇದಕ್ಕೂ ಹೆಚ್ಚು ಮಂದಿ ಪದವಿ ಪೂರ್ವ ಶಿಕ್ಷಣ ಪೂರೈಸುತ್ತಿದ್ದಾರೆ. ಇವರೆಲ್ಲರ ಉದ್ಯೋಗದ ಅವಶ್ಯಕತೆಗಳನ್ನು ಪೂರೈಸುವ ಪಠ್ಯ ಶಿಕ್ಷಣದ ಆಂತರಿಕ ಮಟ್ಟದಲ್ಲೇ ಇರಬೇಕು. ಈ ರೀತಿಯ ಶಿಕ್ಷಣ ವಿದ್ಯಾರ್ಥಿಗಳನ್ನು ಉದ್ದಿಮೆದಾರರನ್ನಾಗಿ ರೂಪಿಸಬಲ್ಲದು ಎಂದು ಕಲಾಂ ಹೇಳಿದರು.

ಗ್ರಾಹಕಸ್ನೇಹಿಯಾಗಿರುವಂತೆ ಹಾಗೂ ಯುವ ಉದ್ದಿಮೆದಾರರನ್ನು ಬೆಂಬಲಿಸುವಂತೆ ಕಲಾಂ ಬ್ಯಾಂಕ್‌ಗಳಿಗೆ ಕರೆ ನೀಡಿದರು. ಸರ್ಕಾರ ಕೂಡ ಯುವ ಉದ್ದಿಮೆದಾರರನ್ನು ಪ್ರೋತ್ಸಾಹಿಸಬೇಕು ಎಂದರು.

ಬೆಂಗಳೂರು ಐಐಎಸ್‌ಸಿಯಲ್ಲಿ ನಲಂದಾದ ಕನಸು : ಜಾಗತಿಕ ಮಟ್ಟದ ವೈಜ್ಞಾನಿಕಾ ಸಂಶೋಧನಾ ಕೇಂದ್ರವಾಗಿ ಬೆಂಗಳೂರಿನಲ್ಲಿನ ಭಾರತೀಯ ವಿಜ್ಞಾನ ಭವನ ರೂಪುಗೊಳ್ಳಬೇಕು. ಈ ಸಂಸ್ಥೆಯಲ್ಲಿ ನೊಬೆಲ್‌ ಪ್ರಶಸ್ತಿ ಪಡೆಯುವ ವಿಜ್ಞಾನಿಗಳು ರೂಪುಗೊಳ್ಳುವಂತಾಗಬೇಕು ಎಂದು ರಾಷ್ಟ್ರಪತಿ ಕಲಾಂ ಆಶಿಸಿದರು.

ಬೆಂಗಳೂರು ಐಐಎಸ್‌ಸಿ ಮತ್ತೊಂದು ನಳಂದಾ ವಿಶ್ವವಿದ್ಯಾಲಯವಾಗಿ ರೂಪುಗೊಳ್ಳಬೇಕೆಂಬುದು ತಮ್ಮ ಕನಸು ಎಂದು ಕಲಾಂ ಹೇಳಿದರು. (1700 ವರ್ಷಗಳ ಹಿಂದಿನ ಬಿಹಾರದಲ್ಲಿ ನ ನಳಂದಾ ವಿಶ್ವವಿದ್ಯಾಲಯ ತನ್ನ ಶ್ರೇಷ್ಠತೆಗಾಗಿ ಜಾಗತಿಕ ಮನ್ನಣೆ ಪಡೆದಿತ್ತು ). ಇತ್ತೀಚೆಗೆ ತಾವು ನಳಂದಾ ವಿವಿಗೆ ಭೇಟಿ ನೀಡಿದುದನ್ನು ಸ್ಮರಿಸಿಕೊಂಡ ಕಲಾಂ- 90ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ನಳಂದಾಕ್ಕೆ ಆಗಮಿಸುತ್ತಿದ್ದಾರೆ. ಬೆಂಗಳೂರು ಐಐಎಸ್‌ಸಿ ಇನ್ನೊಂದು ನಳಂದಾ ಆಗಬೇಕು ಎಂದರು.

(ಪಿಟಿಐ)

ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more