ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛಾಪ ಪಾಪ ಗದ್ದಲ: ಸದನದಲ್ಲಿ ನೆಲೆ ಕಳಕೊಂಡ ಬಿಜೆಪಿ ಸದಸ್ಯರು

By Staff
|
Google Oneindia Kannada News

ಛಾಪ ಪಾಪ ಗದ್ದಲ: ಸದನದಲ್ಲಿ ನೆಲೆ ಕಳಕೊಂಡ ಬಿಜೆಪಿ ಸದಸ್ಯರು
ಸಂಪು ಹೂಡಿದ ಬಿಜೆಪಿಯ 25 ಸದಸ್ಯರು 1 ದಿನದ ಮಟ್ಟಿಗೆ ಸದನದಿಂದ ಅಮಾನತು

ಬೆಂಗಳೂರು : ಬಹುಕೋಟಿ ನಕಲಿ ಛಾಪ ಪಾಪ ಹಗರಣದಲ್ಲಿ ಮಾಜಿ ಸಚಿವ ರೋಷನ್‌ಬೇಗ್‌ ಶಾಮೀಲಾಗಿದ್ದಾರೆಂದು ಆರೋಪಿಸಿ, ಅವರ ಬಂಧನಕ್ಕೆ ಪಟ್ಟು ಹಿಡಿದ ಬಿಜೆಪಿ ಶಾಸಕರನ್ನು ಬುಧವಾರ (ಜ.13) ಸದನದಿಂದ ಬಲತ್ಕಾರವಾಗಿ ಹೊರಹಾಕಲಾಯಿತು.

ಸತತ ನಾಲ್ಕನೇ ದಿನವೂ ಸದನ ಆರಂಭವಾಗುತಿದ್ದಂತೆಯೇ ಬಿಜೆಪಿ ಶಾಸಕರುಗಳು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಧರಣಿ ಮುಂದುವರೆಸಿದರು. ಕಾಂಗ್ರೆಸ್‌ ವಿರುದ್ಧ ಘೋಷಣೆ ಕೂಗಿಕೊಂಡು ಸದನದ ಬಾವಿಗಿಳಿದಿದ್ದ ಬಿಜೆಪಿ ಶಾಸಕರು, ಧರಣಿ ನಿಲ್ಲಿಸಿ ಕಲಾಪದಲ್ಲಿ ಪಾಲ್ಗೊಳ್ಳುವಂತೆ ಸಭಾಪತಿ ವೆಂಕಟಪ್ಪನವರು ಮಾಡಿದ ಸತತ ಮನವಿಯನ್ನು ಪುರಸ್ಕರಿಸಲಿಲ್ಲ.

‘ಈ ಹಗರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ತಮ್ಮ ಬಳಿ ಸಂಬಂಧ ಪಟ್ಟ ಸಾಕ್ಷ್ಯಪುರಾವೆಗಳಿದ್ದರೆ ಅವರಿಗೆ ಒಪ್ಪಿಸಿ ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಡಿ.ಬಿ.ಚಂದ್ರೇಗೌಡ ಹೇಳಿದರು. ಬೇಗ್‌ ಸಂಪುಟ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಸ್ತುತ ಅವರು ಹಜ್‌ ಯಾತ್ರೆಯಲ್ಲಿದ್ದಾರೆ ಎಂದ ಸಚಿವ ಚಂದ್ರೇಗೌಡ- ಬೇಗ್‌ ಬಂಧನದ ಒತ್ತಾಯಕ್ಕೆ ಸಕಾರಣ ನೀಡುವಂತೆ ಬಿಜೆಪಿ ಸದಸ್ಯರನ್ನು ಒತ್ತಾಯಿಸಿದರು.

ಚಂದ್ರೇಗೌಡ ಅವರ ಮಾತಿಗೆ ಸಮಾಧಾನಗೊಳ್ಳದೆ ಧರಣಿ ಮುಂದುವರಿಸಿದ ಬಿಜೆಪಿ ಶಾಸಕರನ್ನು ಸದನದಿಂದ ಹೊರನಡೆಯುವಂತೆ ಸಭಾಪತಿಯವರು ವಿನಂತಿಸಿದರು. ಬಿಜೆಪಿ ಶಾಸಕರು ಯಾವುದನ್ನೂ ಲೆಕ್ಕಿಸದಿದ್ದಾಗ ಬಿಜೆಪಿಯ 25 ಸದಸ್ಯರನ್ನು 1 ದಿನದ ಮಟ್ಟಿಗೆ ಸದನದಿಂದ ಅಮಾನತುಗೊಳಿಸಿದರು. ಸಭಾಪತಿಗಳ ಆದೇಶದ ಮೇರೆಗೆ ಬಿಜೆಪಿಯ ಸದಸ್ಯರನ್ನು ರಕ್ಷಣಾದಳ ಸದನದಿಂದ ಎತ್ತಿ ಹೊರಸಾಗಿಸಿತು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X