ವೈ.ಕೆ.ರಾಮಯ್ಯನಿಧನ; ತುಮಕೂರು ಸಿನಿ ಸಮಾರಂಭ ಮುಂದಕ್ಕೆ

ವೈ.ಕೆ.ರಾಮಯ್ಯನಿಧನ; ತುಮಕೂರು ಸಿನಿ ಸಮಾರಂಭ ಮುಂದಕ್ಕೆ
ತುಮಕೂರು ಜಿಲ್ಲೆಯ ಜನಪ್ರಿಯ ರಾಜಕಾರಣಿಯ ಹಠಾತ್‌ ನಿಧನ

ತುಮಕೂರು : ಮಾಜಿ ಸಚಿವ ಹಾಗೂ ಜಿಲ್ಲೆಯ ಜನಪ್ರಿಯ ರಾಜಕಾರಣಿ ವೈ.ಕೆ.ರಾಮಯ್ಯ ಅವರು ಶನಿವಾರ (ಜ.3) ನಿಧನರಾದರು. ರಾಮಯ್ಯನವರ ನಿಧನದಿಂದಾಗಿ ಭಾನುವಾರ (ಜ.4) ನಡೆಯಬೇಕಾಗಿದ್ದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಮುಂದಕ್ಕೆ ಹೋಗಿದೆ.

ಕುಣಿಗಲ್‌ ಕ್ಷೇತ್ರದವರಾದ ವೈ.ಕೆ.ರಾಮಯ್ಯ ಅವರು ರೈತಪರ ಹೋರಾಟಕ್ಕೆ ಹೆಸರಾದವರು. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರೊಂದಿಗೆ ಕೆಲಸ ಮಾಡಿದ್ದ ವೈ.ಕೆ.ರಾಮಯ್ಯ ತಮ್ಮ ಗತ್ತುಗಾರಿಕೆ ಹಾಗೂ ರೈತಪರ ಕಾಳಜಿಗಳಿಂದಾಗಿ ಜನಪ್ರಿಯತೆ ಗಳಿಸಿದ್ದರು. ಕುಣಿಗಲ್‌ಗೆ ಹೇಮಾವತಿ ನೀರು ಹರಿಸುವಲ್ಲಿ ರಾಮಯ್ಯನವರ ಪಾತ್ರ ದೊಡ್ಡದು.

ಸಮಾರಂಭ ಮುಂದಕ್ಕೆ : ರಾಮಯ್ಯನವರ ಹಠಾತ್‌ ನಿಧನದ ಕಾರಣ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದೂಡಲಾಗಿದೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಥಾಮಸ್‌ ತಿಳಿಸಿದ್ದಾರೆ.

ತುಮಕೂರಿನ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಬೇಕಾಗಿದ್ದ ಸಮಾರಂಭಕ್ಕೆ ಸಕಲ ಸಿದ್ಧತೆಗಳನ್ನೂ ನಡೆಸಲಾಗಿತ್ತು . ಸಮಾರಂಭದ ಆಹ್ವಾನ ಪತ್ರಗಳನ್ನೂ ಈಗಾಗಲೇ ವಿತರಿಸಲಾಗಿದೆ. ಸಮಾರಂಭ ಏಕಾಏಕಿ ಮುಂದಕ್ಕೆ ಹೋಗಿರುವುದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸುಮಾರು 50 ಸಾವಿರ ರುಪಾಯಿ ನಷ್ಟ ಉಂಟಾಗಲಿದೆ ಎನ್ನಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+