ಪಾಲಿಮರ್/ ಪ್ಲಾಸ್ಟಿಕ್ ನೋಟು ಮುದ್ರಿಸಲು ಆರ್‌ಬಿಐ ಚಿಂತನೆ
ಪಾಲಿಮರ್/ ಪ್ಲಾಸ್ಟಿಕ್ ನೋಟು ಮುದ್ರಿಸಲು ಆರ್‌ಬಿಐ ಚಿಂತನೆ
ರೀಸೈಕಲ್-ಶುಚಿತ್ವ, ಸುಭದ್ರತೆಯ ದೃಷ್ಟಿಯಿಂದ ಪಾಲಿಮರ್ ನೋಟುಗಳು ಅನುಕೂಲಕರ
ರು.1000, ರು.500, ರು.100 ಹಾಗೂ ರು.50 ಮುಖಬೆಲೆಯ ಪಾಲಿಮರ್ ಅಥವಾ ಪ್ಲಾಸ್ಟಿಕ್ ಕರೆನ್ಸಿಗಳನ್ನು ಹೊಂದಲು ಭಾರತೀಯ ರಿಸರ್ವ್ ಬ್ಯಾಂಕ್ ಚಿಂತಿಸುತ್ತಿದೆ. ಪಾಲಿಮರ್/ಪ್ಲಾಸ್ಟಿಕ್ ನೋಟುಗಳು ಹೆಚ್ಚು ಬಾಳಿಕೆ ಬರುತ್ತವೆ ಹಾಗೂ ಈ ನೋಟುಗಳನ್ನು ನಕಲಿ ಮಾಡುವುದು ಕಷ್ಟ ಎನ್ನುವುದು ರಿಸರ್ವ್ ಬ್ಯಾಂಕ್ ಲೆಕ್ಕಾಚಾರ ಎನ್ನಲಾಗಿದೆ.
ಆಸ್ಟ್ರೇಲಿಯಾದ ರಿಸರ್ವ್ ಬ್ಯಾಂಕ್ ಹಾಗೂ ಯುಬಿ ಫಿಲ್ಮ್ಸ್ ಜಂಟಿ ಸಹಯೋಗದೊಂದಿಗೆ ಪಾಲಿಮರ್/ಪ್ಲಾಸ್ಟಿಕ್ ನೋಟುಗಳನ್ನು ರೂಪಿಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಚಿಂತನೆ ನಡೆಸಿದೆ. ಪ್ರಸ್ತುತ 22 ದೇಶಗಳು ಪಾಲಿಮರ್ ನೋಟುಗಳನ್ನು ಹೊಂದಿದ್ದು , ಕಳೆದ 6 ವರ್ಷಗಳಿಂದಲೂ ಆಸ್ಟ್ರೇಲಿಯಾದಲ್ಲಿ ಚಾಲ್ತಿಯಲ್ಲಿವೆ. ಪಾಲಿಮರ್ ನೋಟುಗಳು ಬಳಸಲು ಹೆಚ್ಚು ಅನುಕೂಲ, ರೀಸೈಕಲ್-ಶುಚಿತ್ವ, ಸುಭದ್ರತೆಯ ದೃಷ್ಟಿಯಿಂದಲೂ ಅನುಕೂಲಕರ ಎಂದು ಯುಬಿ ಫಿಲ್ಮ್ಸ್ ಮೂಲಗಳು ತಿಳಿಸಿವೆ.
(ಏಜೆನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications