ಲಾಲ್‌ಬಾಗ್‌ನಲ್ಲೊಂದು ಹೊಟೇಲು ಕಟ್ಟಿ- ಮುಖ್ಯಮಂತ್ರಿ ಕೃಷ್ಣ
ಲಾಲ್‌ಬಾಗ್‌ನಲ್ಲೊಂದು ಹೊಟೇಲು ಕಟ್ಟಿ- ಮುಖ್ಯಮಂತ್ರಿ ಕೃಷ್ಣ
ಆದಷ್ಟು ಬೇಗ ಲಾಲ್‌ಬಾಗ್‌ನಲ್ಲೊಂದು ಕೆಫೆ ತಲೆಯೆತ್ತಲಿದೆ
ಬಹುಶಃ 2004ನೇ ಇಸವಿಯ ಜನವರಿ ಅಥವಾ ಫೆಬ್ರವರಿಯಲ್ಲಿ ಇಲ್ಲೊಂದು ಕೆಫೆ ತಲೆಯೆತ್ತಲಿದೆ. ಇತ್ತೀಚೆಗೆ ಲಾಲ್‌ಬಾಗ್ ಕಂಡ ಮುಖ್ಯಮಂತ್ರಿ ಕೃಷ್ಣ ಹೊಟೇಲೊಂದು ಬೇಕು ಅನ್ನಿಸಿದ್ದೇ ತಡ, ಅಲ್ಲಿನ ಸಿಬ್ಬಂದಿಗೆ ಅದನ್ನು ಕಟ್ಟುವಂತೆ ಆದೇಶಿಸಿದರು.
ಲಾಲ್‌ಬಾಗ್‌ನಲ್ಲಿ ಮೊದಲೂ ಒಂದು ಹೊಟೇಲ್ ಇತ್ತು. ಗ್ಲಾಸ್‌ಹೌಸ್ ಮುಂಭಾಗದಲ್ಲಿ ಈಗ ಉಪ ನಿರ್ದೇಶಕರ ಕಚೇರಿ ಇರುವ ಜಾಗದಲ್ಲೊಂದು ಪುಟ್ಟ ಹೊಟೇಲ್ ಇತ್ತು. ಆಮೇಲೆ ಅದನ್ನು ಗುಡ್ಡದ ಮೇಲಿದ್ದ ಇನ್ನೊಂದು ಕಟ್ಟಡಕ್ಕೆ ವರ್ಗಾಯಿಸಲಾಯಿತು. ಆಮೇಲೆ ಅದು ಫೀಲ್ಡ್ ಇನ್‌ಫರ್ಮೇಷನ್ ಕಟ್ಟಡವಾಗಿ ಪರಿವರ್ತಿತವಾಯಿತು. ಪರಿಸರ ಹಾಳುಮಾಡುತ್ತದೆ ಎಂಬ ನೆಪವೊಡ್ಡಿ ಹೊಟೇಲನ್ನು ಸಂಪೂರ್ಣವಾಗಿ ಮುಚ್ಚಲಾಯಿತು. ಈಗ ಅದೇ ಫೀಲ್ಡ್ ಇನ್‌ಫರ್ಮೇಷನ್ ಕಟ್ಟಡದ ಜಾಗದಲ್ಲಿ ಹೊಟೇಲ್ ಮಾಡಿ ಅಂತ ಕೃಷ್ಣ ಹೇಳಿದ್ದಾರೆ.
ಮುಂದಿನ ಬೇಸಗೆ ರಜೆಯಲ್ಲಿ ನೀವು ಲಾಲ್‌ಬಾಗ್‌ಗೆ ಹೋದರೆ, ಪ್ರಾಯಶಃ ಅಲ್ಲೊಂದು ಚೆಂದದ ಕೆಫೆ ತಲೆಯೆತ್ತಿರಲಿದೆ.
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications