ಛಾಪಾ ಪಾಪ : ಬಿಜೆಪಿಗೆ ಸುಶಿಲ್ ಕುಮಾರ್ ಶಿಂಧೆ ತಿರುಬಾಣ
ಛಾಪಾ ಪಾಪ : ಬಿಜೆಪಿಗೆ ಸುಶಿಲ್ ಕುಮಾರ್ ಶಿಂಧೆ ತಿರುಬಾಣ
‘ನಮ್ಮ ಸರ್ಕಾರದ ಯಾವ ಮಂತ್ರಿಯೂ ಹಗರಣದಲ್ಲಿ ಭಾಗಿಯಾಗಿಲ್ಲ’
ಶುಕ್ರವಾರ (ನ.28) ಸುದ್ದಿಗಾರರ ಜೊತೆ ಮಾತಾಡುತ್ತಿದ್ದ ಶಿಂಧೆ, ನಮ್ಮ ಕಾಂಗ್ರೆಸ್ ಸರ್ಕಾರದ ಯಾವೊಬ್ಬ ಮಂತ್ರಿ ಕೂಡ ಈ ಹಗರಣದಲ್ಲಿ ಭಾಗಿಯಾಗಿಲ್ಲ. ಈ ಹಗರಣ ಶುರುವಾಗಿರುವುದು ಈಗಲ್ಲ, ಒಂಬತ್ತು ಹತ್ತು ವರ್ಷಗಳ ಹಿಂದೆ. ಆಗ ಶಿವಸೇನೆ- ಬಿಜೆಪಿ ಸರ್ಕಾರ ಮಹಾರಾಷ್ಟ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿತ್ತು. ವರ್ಷಗಳಿಂದ ಸುಮ್ಮನಿದ್ದ ಕೇಂದ್ರ ಸರ್ಕಾರ ಕಳೆದ ಎರಡು ತಿಂಗಳಿಂದ ಮಾತ್ರ ಹಗರಣದ ಬಗ್ಗೆ ಆಸಕ್ತಿ ವಹಿಸುತ್ತಿರುವುದು ಅನುಮಾನಾಸ್ಪದವಾಗಿದೆ ಎಂದರು.
ಎರಡು ತಿಂಗಳ ಹಿಂದೆ ನಕಲಿ ಛಾಪಾ ಕಾಗದ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಸಾಧ್ಯವಿಲ್ಲ. ಅದು ದೊಡ್ಡ ಹಗರಣವಾದ್ದರಿಂದ ಸಿಬಿಐಗೆ ಹೊರೆಯಾಗಲಿದೆ ಎಂದು ಆಗಿನ ಹೆಚ್ಚುವರಿ ಸಾಲಿಸಿಟರ್ ಜನರಲ್ ಹೇಳಿದ್ದರು. ಈಗ ಇದ್ದಕ್ಕಿದ್ದಂತೆ ಕೇಂದ್ರ ಸರ್ಕಾರ ತನಿಖೆಯನ್ನು ಸಿಬಿಐಗೆ ವಹಿಸಿರುವ ಔಚಿತ್ಯವೇನೋ ತಿಳಿಯುತ್ತಿಲ್ಲ. ಸಿಬಿಐ ತನಿಖೆ ನಡೆದರೂ ಕೂಡ ನಮ್ಮ ಅಭ್ಯಂತರವಿಲ್ಲ. ಯಾಕೆಂದರೆ, ಮಹಾರಾಷ್ಟ್ರದ ಯಾವ ಮಂತ್ರಿಯೂ ಹಗರಣದಲ್ಲಿ ಭಾಗಿಯಾಗಿಲ್ಲ ಎಂದು ಶಿಂಧೆ ಹೇಳಿದರು.
ಹಗರಣದ ತನಿಖೆಯನ್ನು ಸದ್ಯಕ್ಕೆ ಸಿಬಿಐಗೆ ಒಪ್ಪಿಸದೆ, ವಿಶೇಷ ತನಿಖಾ ತಂಡ ದ ತನಿಖೆಗೆ ಮುಂಬಯಿ ಹೈಕೋರ್ಟ್ ಗುರುವಾರ ತೃಪ್ತಿ ವ್ಯಕ್ತಪಡಿಸಿತ್ತು. ಇದೇ ದಿನ, ಹಗರಣದ ಆರೋಪಿಗಳಲ್ಲಿ ಒಬ್ಬರಾಗಿರುವ ಪೊಲೀಸ್ ಅಧಿಕಾರಿ ಆರ್.ಎಸ್.ಶರ್ಮ- ಪ್ರಕರಣದಲ್ಲಿ ಕೆಲವು ಮಂತ್ರಿ ಮಹೋದಯರೂ ಭಾಗಿಯಾಗಿದ್ದಾರೆ ಎಂದು ಹೇಳಿದ್ದರು. ಆದರೆ ಶಿಂಧೆ ಬಿಜೆಪಿಗೇ ತಿರುಗೇಟು ನೀಡಲು ನಿಂತಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications