ಅನಂತಮೂರ್ತಿ ಧರಣಿ ; ವಾರಪತ್ರಿಕೆ ಸಂಪಾದಕರ ಕ್ಷಮೆಯಾಚನೆ

ಅನಂತಮೂರ್ತಿ ಧರಣಿ ; ವಾರಪತ್ರಿಕೆ ಸಂಪಾದಕರ ಕ್ಷಮೆಯಾಚನೆ
ಸಾತ್ವಿಕ ಆಕ್ರೋಶಕ್ಕೆ ಮಣಿದ ಅಗ್ನಿ ಪತ್ರಿಕೆಯ ಸಂಪಾದಕ ಶ್ರೀಧರ್‌

ಬೆಂಗಳೂರು : ಡಾ. ಯು. ಆರ್‌. ಅನಂತಮೂರ್ತಿ ಮತ್ತು ಅವರ ಪತ್ನಿ ಎಸ್ತರ್‌ ಇಸ್ರೋ ಲೇ ಔಟ್‌ನಲ್ಲಿನ ‘ಅಗ್ನಿ’ ವಾರಪತ್ರಿಕೆಯ ಕಚೇರಿ ಎದುರು ಬುಧವಾರ ಬೆಳಗ್ಗೆ ಒಂದು ಗಂಟೆ ಕಾಲ ಧರಣಿ ಸತ್ಯಾಗ್ರಹ ಮಾಡಿದರು.

ತಮ್ಮ ವಿರುದ್ಧ ಅವಹೇಳನಕಾರಿ ಲೇಖನಗಳನ್ನು ‘ಅಗ್ನಿ’ ಪ್ರಕಟಿಸಿದೆ ಎಂದು ಕುಪಿತರಾಗಿದ್ದ ಅವರು ಧರಣಿ ಸತ್ಯಾಗ್ರಹವನ್ನು ಪ್ರತಿಭಟನೆಯ ಅಸ್ತ್ರವನ್ನಾಗಿ ಆರಿಸಿಕೊಂಡಿದ್ದರು.

ಬೆಳಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ನಡೆದ ಧರಣಿಯಲ್ಲಿ ಮೂರ್ತಿ ದಂಪತಿಗಳು ಮಾತ್ರ ಭಾಗವಹಿಸಿದ್ದರು. ತಮ್ಮ ಪತ್ರಿಕಾ ಕಚೇರಿ ಮುಂದೆ ಈ ರೀತಿ ಪ್ರತಿಭಟಿಸುತ್ತಿದ್ದ ಜ್ಞಾನಪೀಠ ಪ್ರಶಸ್ತಿ ವಿಜೇತ ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಮತ್ತು ಅವರ ಪತ್ನಿ ಎಸ್ತರ್‌ ಅವರನ್ನು ಪತ್ರಿಕೆಯ ಸಂಪಾದಕ ಶ್ರೀಧರ್‌ ಭೇಟಿ ಮಾಡಿದರು.

‘ತಮ್ಮ ಬಗ್ಗೆ ನಮಗೆ ಗೌರವ ಇದೆ. ದಯಮಾಡಿ ಅನ್ಯಥಾ ಭಾವಿಸಬಾರದು. ತಪ್ಪಾಗಿದ್ದರೆ ಕ್ಷಮಿಸಬೇಕು’ ಎಂದು ಶ್ರೀಧರ್‌ ಕೇಳಿಕೊಂಡರು ಎಂದು ಡಾ. ಯುಆರ್‌ಎ ದಟ್ಸ್‌ಕನ್ನಡ ಡಾಟ್‌ಕಾಮ್‌ಗೆ ತಿಳಿಸಿದರು.

‘ಕ್ಷಮಿಸುವುದರಿಂದ ನನಗೇನೂ ಪ್ರಯೋಜನವಿಲ್ಲ. ಬರೆದ್ದಾಯಿತು, ನೀವು ಅದನ್ನು ಪ್ರಕಟಿಸಿ ನನ್ನ ಮನಸ್ಸನ್ನು ನೋಯಿಸಿದ್ದೂ ಆಯಿತು’ ಎಂದು ಅನಂತಮೂರ್ತಿ ಸಂಪಾದಕರ ಕ್ಷಮೆ ಸೌಜನ್ಯಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

(ಇನ್ಫೋ ವಾರ್ತೆ)

Post your views

ಮುಖಪುಟ / ವಾಟ್ಸ್‌ ಹಾಟ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+