ಬಿಸಿಯೂಟದ ಜೊತೆ ಮಕ್ಕಳಿಗೆ ವಿಟಮಿನ್-ಎ ಕೊಡಲು ಚಿಂತನೆ
ಬಿಸಿಯೂಟದ ಜೊತೆ ಮಕ್ಕಳಿಗೆ ವಿಟಮಿನ್-ಎ ಕೊಡಲು ಚಿಂತನೆ
ಇಂತಹ ಪ್ರಯೋಗಕ್ಕೆ ಶಾಲಾ ಮಕ್ಕಳನ್ನು ಒಡ್ಡುವ ನಿರ್ಧಾರವನ್ನು ಏನನ್ನುವುದು?
ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಮಂಗಳವಾರ (ನ. 25) ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಮಧ್ಯಾಹ್ನದ ಊಟಕ್ಕೆ ನೇರವಾಗಿ ವಿಟಮಿನ್ ಎ ಸೇರಿಸಿ ಕೊಡುವ ಸಾಧ್ಯತೆಯ ಬಗ್ಗೆ ವಿಜ್ಞಾನಿಗಳ ಜೊತೆ ಚರ್ಚಿಸಲಾಗುತ್ತಿದೆ. ಈ ರೀತಿಯ ವಿಟಮಿನ್ ಸೇವನೆಯ ಪರಿಣಾಮಗಳ ಬಗ್ಗೆ ವ್ಯತಿರಿಕ್ತ ಅಭಿಪ್ರಾಯಗಳಿವೆ. ನೇರವಾಗಿ ವಿಟಮಿನ್ ಎ ಸೇವಿಸುವುದರಿಂದ ಮಕ್ಕಳ ಕರುಳಿಗೆ ಧಕ್ಕೆಯಾಗಿರುವ ವರದಿಗಳಿವೆ. ಆದರೆ, ಆರ್ಥಿಕ ಹಾಗೂ ಆರೋಗ್ಯ ರಕ್ಷಣೆಯ ದೃಷ್ಟಿಯಲ್ಲಿ ಮಕ್ಕಳಿಗೆ ನೇರವಾಗಿ ವಿಟಮಿನ್ ಎ ಕೊಡುವುದು ಸಾಧ್ಯವಾದರೆ ಒಳ್ಳೆಯದು ಎಂಬ ಕಾರಣದಿಂದ ಸರ್ಕಾರ ಈ ಚಿಂತನೆಗೆ ಕೈಹಾಕಿದೆ ಎಂದು ಬಿ.ಕೆ.ಸಿ. ತಿಳಿಸಿದರು.
ಕೊಸರು : ಬಿಸಿಯೂಟ ಯೋಜನೆಯಲ್ಲಿ ದಿನಸಿಯನ್ನು ಕದಿಯುತ್ತಿರುವ ಹಾಗೂ ಪಾತ್ರೆಗಳನ್ನು ಮಾರಿಕೊಳ್ಳುತ್ತಿರುವ ಸುದ್ದಿಗಳು ಗರಿ ಬಿಚ್ಚಿಕೊಳ್ಳುತ್ತಿವೆ. ಮೂಲ ಯೋಜನೆಯೇ ಇನ್ನೂ ಭದ್ರವಾಗಿಲ್ಲ. ಅಂಥಾದರಲ್ಲಿ ಒಂದು ಸ್ಪಷ್ಟವಾದ ಫಲವನ್ನೇ ಕೊಟ್ಟಿರದ ವಿಟಮಿನ್ ನೇರ ಸೇವನೆಗೆ ಮಕ್ಕಳನ್ನು ಯಾಕೆ ಪ್ರಯೋಗ ಪಶುಗಳನ್ನಾಗಿಸಬೇಕು?
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications