‘ಮೂಡಬಿದಿರೆ ಸಮ್ಮೇಳನಕ್ಕೆ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ’
‘ಮೂಡಬಿದಿರೆ ಸಮ್ಮೇಳನಕ್ಕೆ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ’
ಜೋರು ಸಿದ್ಧತೆಗಳ ನಡುವೆಯೂ ಪುನರೂರು ಬೇಜಾರು
ಪ್ರತಿ ಸಮ್ಮೇಳನಕ್ಕೆ ಸರ್ಕಾರ 15 ಲಕ್ಷ ರುಪಾಯಿ ಕೊಡುತ್ತಿತ್ತು. ಆದರೆ ಈ ವರ್ಷ ಅದನ್ನು 12 ಲಕ್ಷಕ್ಕೆ ಇಳಿಸಿದೆ. ಸಾಹಿತ್ಯ ಪರಿಷತ್‌ಗೆ 20 ಲಕ್ಷ ರುಪಾಯಿ ಪರಿಹಾರ ಕೊಡುವುದಾಗಿಯೂ ಸರ್ಕಾರ ಹೇಳಿದೆ. ಆದರೆ ಇದುವರೆಗೆ ಹಣ ಬಿಡುಗಡೆಯಾಗಿಲ್ಲ ಎಂದು ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಸೋಮವಾರ (ನ.24) ಪುನರೂರು ಹೇಳಿದರು.
ಸಮ್ಮೇಳನಕ್ಕೆ ಸುಮಾರು 1 ಕೋಟಿ ರುಪಾಯಿ ಖರ್ಚಾಗುವ ನಿರೀಕ್ಷೆಯಿದ್ದು, ಸ್ಥಳೀಯರಿಂದಲೇ ಸಂಪನ್ಮೂಲ ಸಂಗ್ರಹಿಸುತ್ತಿದ್ದೇವೆ. ವೇದಿಕೆಯ ಶೇ. 70ರಷ್ಟು ನಿರ್ಮಾಣ ಮುಗಿದಿದೆ. 20 ಸಾವಿರ ಜನ ಕೂರುವಂತೆ ಸಭಾಂಗಣ ನಿರ್ಮಿಸಲಾಗುತ್ತಿದೆ. 400 ಪುಸ್ತಕ ಮಳಿಗೆಗಳನ್ನು ತೆರೆಯಲು ವ್ಯವಸ್ಥೆ ಒದಗಿಸಲಾಗುತ್ತಿದೆ ಎಂದು ಪುನರೂರು ಸಮ್ಮೇಳನದ ಸಿದ್ಧತೆಯ ವಿವರಗಳನ್ನು ಕೊಟ್ಟರು.
ಸಮ್ಮೇಳನ ಉದ್ಘಾಟಿಸಲು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಕರೆಯಲಾಗಿದೆ. ಆದರೆ ಈವರೆಗೂ ಅವರು ಒಪ್ಪಿಗೆ ಸೂಚಿಸಿಲ್ಲ. ಮತ್ತೆ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ಸಮ್ಮೇಳನವನ್ನು ಮುಂದಕ್ಕೆ ಹಾಕುವುದಿಲ್ಲ ಎಂದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications