ಮಂಗಳೂರು ಕೆಎಂಸಿಯಲ್ಲಿ ಹೃದ್ರೋಗ ವಿಶೇಷ ಚಿಕಿತ್ಸಾ ಘಟಕ
ಮಂಗಳೂರು ಕೆಎಂಸಿಯಲ್ಲಿ ಹೃದ್ರೋಗ ವಿಶೇಷ ಚಿಕಿತ್ಸಾ ಘಟಕ
ಡಾ.ಎಸ್.ವೆಂಕಟೇಶ್ ಹಾಗೂ ಡಾ.ಯೂಸಫ್ ಕುಂಬ್ಳೆ ಅವರಿಂದ ಚಿಕಿತ್ಸೆ
ಹೃದಯ, ಹೃದಯನಾಳ ಹಾಗೂ ಹೃದಯ ರಕ್ತಪೂರಣ ಸಂಬಂಧಿ ಕಾಯಿಲೆಗಳಿಗೆ ಉನ್ನತ ಹಾಗೂ ವಿಶೇಷ ಪರಿಣತಿಯ ಚಿಕಿತ್ಸೆಯನ್ನು ಒದಗಿಸುವ ಘಟಕವನ್ನು ಕೆಎಂಸಿಯಲ್ಲಿ ಸ್ಥಾಪಿಸಲಾಗಿದ್ದು , ಇಲ್ಲಿ ಔಷಧ ಭರಿತ ಸ್ಟಂಟ್ ಬಳಕೆಯ ಆ್ಯಂಜಿಯಾಪ್ಲಾಸ್ಟಿ ಚಿಕಿತ್ಸೆಯೂ ಲಭ್ಯವಿದೆ ಎಂದು ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಡಿ.ಪಿ.ಸಾರಸ್ವತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕೆಎಂಸಿ ಆಸ್ಪತ್ರೆಯಲ್ಲಿ ಪ್ರಸಿದ್ಧ ಹೃದಯರೋಗ ತಜ್ಞರಾದ ಡಾ.ಎಸ್.ವೆಂಕಟೇಶ್ ಹಾಗೂ ಡಾ.ಯೂಸಫ್ ಕುಂಬ್ಳೆ ಅವರಿಂದ ಚಿಕಿತ್ಸೆ ಲಭ್ಯವಿದೆ ಎಂದು ಡಾ.ಸಾರಸ್ವತ್ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications