‘ಮೆಟ್ರೋ’ ಮತ್ತೊಂದು ಈಸ್ಟ್ ಇಂಡಿಯಾ ಕಂಪನಿ -ಚಂಪಾ
‘ಮೆಟ್ರೋ’ ಮತ್ತೊಂದು ಈಸ್ಟ್ ಇಂಡಿಯಾ ಕಂಪನಿ -ಚಂಪಾ
ಮೆಟ್ರೋ ವಿರುದ್ಧದ ಪ್ರತಿಭಟನೆಯಲ್ಲಿ ಸಾಹಿತಿಗಳು ಹಾಗೂ ಕಲಾವಿದರು
ಮೆಟ್ರೋ ವಿರುದ್ಧದ ಪ್ರತಿಭಟನಾ ಸಭೆ (ನ.21) ಯಲ್ಲಿ ಪಾಲ್ಗೊಂಡು ಚಂದ್ರಶೇಖರ ಪಾಟೀಲ ಮಾತನಾಡುತ್ತಿದ್ದರು. ಇದೇ ಮೊದಲ ಬಾರಿಗೆ ಮೆಟ್ರೋ ವಿರುದ್ಧದ ಪ್ರತಿಭಟನೆಯಲ್ಲಿ ಸಾಹಿತಿಗಳು ಹಾಗೂ ಕಲಾವಿದರು ಭಾಗವಹಿಸಿದ್ದರು.
ಮೆಟ್ರೋ ಕಂಪನಿ ಮತ್ತೊಂದು ಈಸ್ಟ್ ಇಂಡಿಯಾ ಕಂಪನಿ. 1 ಸಾವಿರ ಕೋಟಿ ರುಪಾಯಿ ನಷ್ಟವನ್ನು ಸಹಿಸುವ ತಾಕತ್ತು ಹೊಂದಿರುವ ಈ ಭಸ್ಮಾಸುರ ಕಂಪನಿ ಸ್ಥಳೀಯ ವರ್ತಕರು, ರೈತರು, ಜನಸಾಮಾನ್ಯರನ್ನು ನಾಶಪಡಿಸುವ ಹುನ್ನಾರ ಹೊಂದಿದೆ ಎಂದು ಚಂಪಾ ಎಚ್ಚರಿಸಿದರು. ಆರಂಭದಲ್ಲಿ ಕಡಿಮೆ ದರದ ಆಕರ್ಷಣೆಯನ್ನು ಹೊಂದಿರುವ ಮೆಟ್ರೋದ ಬಣ್ಣ ಶೀಘ್ರದಲ್ಲಿಯೇ ಬಯಲಾಗಲಿದೆ ಎಂದರು.
ಜಾಗತೀಕರಣದ ಪರಿಣಾಮವಾಗಿ ರೈತರು ನಾಶವಾಗುತ್ತಿದ್ದಾರೆ. ಪ್ರಸ್ತುತ ಬಂದಿರುವ ಮೆಟ್ರೋದಿಂದಾಗಿ ರೈತರೊಂದಿಗೆ ವರ್ತಕರೂ ನಾಶವಾಗಲಿದ್ದಾರೆ ಎಂದು ಚಂಪಾ ಎಚ್ಚರಿಸಿದರು.
ರೈತಸಂಘದ ಪ್ರಧಾನ ಕಾರ್ಯದರ್ಶಿ ಕೋಡಿಹಳ್ಳಿ ಚಂದ್ರಶೇಖರ್, ನಟ ಲೋಹಿತಾಶ್ವ , ಬೆಂಗಳೂರು ವರ್ತರ ಸಮಿತಿ ಸಂಚಾಲಕ ಛಾಯಾಪತಿ ಮತ್ತಿತರರು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications