ಶಬರಿಮಲೆ ಅಯ್ಯಪ್ಪನ ವಾರ್ಷಿಕ ಹಬ್ಬಕ್ಕೆ ಭಕ್ತಾದಿಗಳ ದಂಡು
ಶಬರಿಮಲೆ ಅಯ್ಯಪ್ಪನ ವಾರ್ಷಿಕ ಹಬ್ಬಕ್ಕೆ ಭಕ್ತಾದಿಗಳ ದಂಡು
ಮಂಡಲ ಪೂಜೆಯ ಮೊದಲ 3 ದಿನ 1.44 ಕೋಟಿ ರು. ಆದಾಯ
ಮೇಲಸಂತಿ ಗೋಶಾಲ ವಿಷ್ಣು ವಾಸುದೇವನ್ ಅವರ ಉಪಸ್ಥಿತಿಯಲ್ಲಿ ದೇವಳದ ತಂತ್ರಿ ಕಂದ್ರರಾರು ರಾಜೀವರಾರು ಪೂಜೆಯ ನಂತರ ಬೆಳಗ್ಗೆ 10 ಗಂಟೆಗೆ ಧ್ವಜಾರೋಹಣ ಮಾಡಿದರು. ದೇವಳದ ಆಯುಕ್ತ ಅಯ್ಯಪ್ಪ ನಾಯರ್, ವಿಶೇಷ ಆಯುಕ್ತ ಡಿ. ಶ್ರೀವಲ್ಲಭನ್ ಮತ್ತು ಶಬರಿಮಲೆಯ ಕಾರ್ಯ ನಿರ್ವಾಹಕ ಅಧಿಕಾರಿ ಕೃಷ್ಣನ್ ನಾಯರ್ ಸಮಾರಂಭದಲ್ಲಿ ಹಾಜರಿದ್ದರು.
ಆದಾಯ ಸಂಗ್ರಹ : ಮಂಡಲ ಪೂಜೆಯ ಮೊದಲ ಮೂರು ದಿನದಲ್ಲಿ ಶಬರಿಮಲೆ ದೇವಳಕ್ಕೆ 1.44 ಕೋಟಿ ರುಪಾಯಿ ಆದಾಯ ಬಂದಿದೆ. ಅರವಣ ಪ್ರಸಾದದಿಂದ 53.62 ಲಕ್ಷ ಹಾಗೂ ಅಪ್ಪಂನಿಂದ 13.63 ಲಕ್ಷ ರುಪಾಯಿ ಬಂದಿದ್ದು, ಹುಂಡಿಯಲ್ಲಿ ಸಂಗ್ರಹವಾದ ಹಣದ ಮೊತ್ತ 48.41 ಲಕ್ಷ ರುಪಾಯಿಯಷ್ಟಿದೆ ಎಂದು ದೇವಳದ ಆಡಳಿತ ಮಂಡಳಿ ಹೇಳಿದೆ.
ಶಬರಿಮಲೆಗೆ ಪ್ರಯಾಣ ಮಾಡುವ ಅಯ್ಯಪ್ಪನ ಭಕ್ತಾದಿಗಳ ಸಂಖ್ಯೆ ಇನ್ನು ಮುಂದೆ ದಿನೇದಿನೇ ಹೆಚ್ಚಲಿದ್ದು, ದೇವಳದಲ್ಲಿ ಸೌಕರ್ಯ ಹಾಗೂ ಭದ್ರತೆ ಬಗ್ಗೆ ಗಮನ ಹರಿಸಲಾಗುತ್ತಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications