ಮೇಷ್ಟ್ರು ಕೆಲಸದಿಂದ ಬರಗೂರು ರಾಮಚಂದ್ರಪ್ಪ ಸ್ವಯಂನಿವೃತ್ತಿ
ಮೇಷ್ಟ್ರು ಕೆಲಸದಿಂದ ಬರಗೂರು ರಾಮಚಂದ್ರಪ್ಪ ಸ್ವಯಂನಿವೃತ್ತಿ
ಬರವಣಿಗೆಯಲ್ಲಿ ಪೂರ್ಣಾವಧಿ ತೊಡಗಿಸಿಕೊಳ್ಳಲು ನಿರ್ಧಾರ
ಇನ್ನೂ ನಾಲ್ಕು ವರ್ಷಗಳ ಸೇವಾವಧಿಯನ್ನು ಹೊಂದಿರುವ ಬರಗೂರು ರಾಮಚಂದ್ರಪ್ಪ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬರವಣಿಗೆಯಲ್ಲಿ ಪೂರ್ಣಾವಧಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಸ್ವಯಂ ನಿವೃತ್ತಿ ಪಡೆಯುತ್ತಿರುವುದಾಗಿ ಬರಗೂರು ತಿಳಿಸಿದ್ದಾರೆ. ನಿವೃತ್ತಿಯ ನಂತರ ರಾಜಕೀಯ ಪ್ರವೇಶಿಸುವ ಉದ್ದೇಶ ತಮಗಿಲ್ಲ ಎಂದೂ ಬರಗೂರು ಹೇಳಿದ್ದಾರೆ.
ಬೀಳ್ಕೊಡುಗೆ : ಬೆಂಗಳೂರು ವಿಶ್ವವಿದ್ಯಾಲಯದ ಸ್ನೇಹಬಳಗ ನ.21ರ ಶುಕ್ರವಾರ ಬರಗೂರು ರಾಮಚಂದ್ರಪ್ಪ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಏರ್ಪಡಿಸಿದೆ. ಸಚಿವ ಎಚ್.ವಿಶ್ವನಾಥ್, ವಿಮರ್ಶಕ ಡಾ.ಬಸವರಾಜ ಕಲ್ಗುಡಿ ಹಾಗೂ ಬೆಂಗಳೂರು ವಿವಿ ಕುಲಪತಿ ಪ್ರೊ.ಎಂ.ಎಸ್.ತಿಮ್ಮಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸುವರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications