ನಕಲಿ ಸ್ಟಾಂಪ್ ಪೇಪರ್ ತನಿಖೆ ಸಿಬಿಐಗೆ ವಹಿಸಲು ಕೃಷ್ಣ ನಕಾರ
ನಕಲಿ ಸ್ಟಾಂಪ್ ಪೇಪರ್ ತನಿಖೆ ಸಿಬಿಐಗೆ ವಹಿಸಲು ಕೃಷ್ಣ ನಕಾರ
ಬಂಧನಕ್ಕೆ ಮುಂಚೆಯೇ ತೆಲಗಿಗೆ ಎಚ್‌ಐವಿ- ತನಿಖಾಧಿಕಾರಿ ಸ್ಪಷ್ಟನೆ
ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ . ಸ್ಟಾಂಪ್ ಪೇಪರ್ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವ ಅಗತ್ಯವೂ ಇಲ್ಲ ಎಂದು ಗುರುವಾರ (ನ.20) ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಸ್ಪಷ್ಟಪಡಿಸಿದರು. ಸುದ್ದಿಗಾರರೊಂದಿಗೆ ಕೃಷ್ಣ ಅನೌಪಚಾರಿಕವಾಗಿ ಮಾತನಾಡುತ್ತಿದ್ದರು.
ಸ್ಟಾಂಪ್ ಪೇಪರ್ ಕುರಿತ ತನಿಖೆ ಅಂತಿಮ ಹಂತಕ್ಕೆ ಬಂದಿದೆ. ಇಂತಹ ಸಂದರ್ಭದಲ್ಲಿ ಸಿಬಿಐನಿಂದ ಮತ್ತೊಂದು ತನಿಖೆ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ ಎನ್ನುವ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕೃಷ್ಣ ಸಮರ್ಥಿಸಿದರು. ತನಿಖೆಯನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ಸೇರಿದಂತೆ ವಿವಿಧ ಪ್ರತಿಪಕ್ಷಗಳ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಕೃಷ್ಣ - ತನಿಖೆಯನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಪುನರುಚ್ಛರಿಸಿದರು.
ಹಗರಣದಲ್ಲಿ ಹೆಸರು ಪ್ರಸ್ತಾಪವಾಗುತ್ತಿರುವ ಸಚಿವ ರೋಷನ್ ಬೇಗ್ ಅವರು ಸಚಿವ ಸಂಪುಟಕ್ಕೆ ರಾಜೀನಾಮೆ ನೀಡುವ ಕುರಿತ ವರದಿಗಳನ್ನು ಕೇವಲ ವದಂತಿಗಳು ಎಂದು ಕೃಷ್ಣ ಬಣ್ಣಿಸಿದರು.
ಸ್ಟಾಂಪ್ ಹಗರಣದ ತನಿಖೆಯ ಕುರಿತು ಪ್ರತ್ಯೇಕ ನ್ಯಾಯಾಧೀಶರನ್ನು ಒಳಗೊಂಡ ವಿಶೇಷ ನ್ಯಾಯಾಲಯವನ್ನು ಕರ್ನಾಟಕ ಹೈಕೋರ್ಟ್ ನೇಮಿಸುವ ನಿರೀಕ್ಷೆಯಿದೆ.
ತೆಲಗಿಗೆ ಬಂಧನಕ್ಕೆ ಮುಂಚೆಯೇ ಏಡ್ಸ್ : ಸ್ಟಾಂಪ್ ಪೇಪರ್ ಹರಗರದ ಪ್ರಮುಖ ಆರೋಪಿ ಕರೀಂಲಾಲ ತೆಲಗಿಗೆ ಪೊಲೀಸರು ಎಚ್‌ಐವಿ ವೈರಾಣುಗಳ ಚುಚ್ಚುಮದ್ದು ನೀಡಿದ್ದಾರೆ ಎನ್ನುವ ವರದಿಗಳನ್ನು ತನಿಖಾಧಿಕಾರಿ ಆರ್.ಶ್ರೀಕುಮಾರ್ ತಳ್ಳಿಹಾಕಿದ್ದಾರೆ. ಬಂಧನಕ್ಕೆ ಮುಂಚೆಯೇ ತೆಲಗಿಗೆ ಎಚ್‌ಐವಿ ಸೋಂಕು ತಗುಲಿತ್ತು ಎಂದು ಶ್ರೀಕುಮಾರ್ ಸ್ಪಷ್ಟನೆ ನೀಡಿದ್ದಾರೆ.
(ಪಿಟಿಐ)
ಪೂರಕ ಓದಿಗೆ
ನಕಲಿ ಛಾಪಾ ಕಾಗದಗಳ ಸರದಾರ ತೆಲಗಿಗೆ ಜೈಲಲ್ಲಿ ಏಡ್ಸ್ !
ಮುಖಪುಟ / ಕೃಷ್ಣಗಾರುಡಿ












Click it and Unblock the Notifications