ಬೆಂಗಳೂರಿಗೆ ಡಿ. 7ರಂದು ಭಾಷಣ ಭಯಂಕರ ತೊಗಾಡಿಯ
ಬೆಂಗಳೂರಿಗೆ ಡಿ. 7ರಂದು ಭಾಷಣ ಭಯಂಕರ ತೊಗಾಡಿಯ
ಅಲಸೂರಿನಲ್ಲಿ ಹಿಂದೂ ಸಮಾಜೋತ್ಸವದ ದೊಡ್ಡ ಕಾರ್ಯಕ್ರಮ
ಹಿಂದೂ ಸಮಾಜೋತ್ಸವ ಸಮಿತಿ ಸಂಚಾಲಕ ಮೋಹನ್‌ಕುಮಾರ್ ಮಂಗಳವಾರ (ನ. 18) ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಅಲಸೂರಿನ ಆರ್‌ಬಿಎಎನ್‌ಎಂಎಸ್ ಕಾಲೇಜು ಮೈದಾನದಲ್ಲಿ ಡಿ. 7ರಂದು ನಡೆಯಲಿರುವ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ತೊಗಾಡಿಯಾ ಭಾಷಣ ಮಾಡಲಿದ್ದಾರೆ ಎಂದರು.
ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿ, ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ, ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್, ತಮಿಳುನಾಡಿನ ಹಿಂದೂ ಮುನ್ನಣಿಯ ರಾಮಗೋಪಾಲನ್ ಸೇರಿದಂತೆ ಅನೇಕ ಧಾರ್ಮಿಕ ಮುಖಂಡರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. 50 ಸಾವಿರ ಮಹಿಳೆಯರೂ ಸೇರಿದಂತೆ 2 ಲಕ್ಷ ಮಂದಿ ಸಮಾರಂಭಕ್ಕೆ ಬರುವ ನಿರೀಕ್ಷೆಯಿದೆ ಎಂದು ಮೋಹನ್‌ಕುಮಾರ್ ಹೇಳಿದರು.
ಅಸ್ಪೃಶ್ಯತೆ ನಿವಾರಣೆಯ ಅರಿವು ಮೂಡಿಸುವುದು, ಭಯೋತ್ಪಾದನೆ ವಿರುದ್ಧ ಜಾಗೃತಿ ಮೂಡಿಸುವುದು, ಮತಾಂತರ ತಡೆಯುವುದು, ಗೋಹತ್ಯೆ ನಿಷೇಧಕ್ಕೆ ಒತ್ತಾಯಿಸುವುದು ಹಾಗೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಾಸನ ರೂಪಿಸುವಂತೆ ಒತ್ತಾಯಿಸುವುದು ಹಿಂದೂ ಸಮಾಜೋತ್ಸವದ ಮುಖ್ಯ ಉದ್ದೇಶಗಳು ಎಂದು ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications