ಚೆನ್ನೈ ಕನ್ನಡಿಗರ ಕೂಟದಿಂದ ಕೇಫ ಸ್ಮಾರಕ ಹಾಸ್ಯ ಲೇಖನ ಸ್ಪರ್ಧೆ
ಚೆನ್ನೈ ಕನ್ನಡಿಗರ ಕೂಟದಿಂದ ಕೇಫ ಸ್ಮಾರಕ ಹಾಸ್ಯ ಲೇಖನ ಸ್ಪರ್ಧೆ
ಬರಹಗಳನ್ನು ಕಳುಹಿಸಲು ಜನವರಿ 24, 2004 ಕೊನೆ ದಿನ.
ಕೇಫ ಸ್ಮಾರಕ ಹಾಸ್ಯ ಲೇಖನ ಸ್ಪರ್ಧೆಯನ್ನು ಕನ್ನಡಿಗರ ಕೂಟ ಕಳೆದ ಐದು ವರ್ಷಗಳಿಂದ ನಡೆಸುತ್ತಿದೆ. ಮೊದಲನೇ ಬಹುಮಾನ 2500 ರುಪಾಯಿ. ಎರಡನೇ ಬಹುಮಾನ 1500 ರುಪಾಯಿ. ಮೂರನೇ ಬಹುಮಾನ 1000 ರುಪಾಯಿ. ಸಮಾಧಾನಕರ ಬಹುಮಾನಗಳೂ ಉಂಟು.
ಸ್ಪರ್ಧೆಯ ನಿಯಮಗಳು :
- ಬರಹಗಳನ್ನು ಕಳುಹಿಸಲು ಜನವರಿ 24, 2004 ಕೊನೆ ದಿನ.
- ಲೇಖನಗಳು ಮಾತ್ರವಲ್ಲದೆ ಹಾಸ್ಯ ಕವಿತೆ ಹಾಗೂ ಚುಟುಕುಗಳನ್ನೂ ಸ್ಪರ್ಧೆಗೆ ಕಳುಹಿಸಿಕೊಡಬಹುದು. ಕವಿತೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುವುದು. ಬರಹಗಳು ಬೇರೆಲ್ಲೂ ಪ್ರಕಟವಾಗಿರಬಾರದು.
- ಲೇಖನಗಳು ಕೈಬರಹದಲ್ಲಿ ಎಂಟು ಪುಟ ಮೀರದಿರಲಿ.
- ಬರಹಗಳೊಂದಿಗೆ ಪ್ರವೇಶ ಶುಲ್ಕ 50 ರುಪಾಯಿಗಳನ್ನು ಡಿಮ್ಯಾಂಡ್ ಡ್ರಾಫ್ಟ್ ಅಥವಾ ಮನಿ ಆರ್ಡರ್ ಮೂಲಕ ಕಳುಹಿಸಬೇಕು.
- ಬರಹಗಳನ್ನು ಕಳುಹಿಸಬೇಕಾದ ವಿಳಾಸ : ಕನ್ನಡಿಗರ ಕೂಟ (ರಿ), ಎಂ1ನೇ ಕ್ರಾಸ್, ಬೆನ್ಕೊ ಕಾಲೊನಿ, ಬೆಸೆಂಟ್ ನಗರ, ಚೆನ್ನೈ-600090.
ಮುಖಪುಟ / ವಾರ್ತೆಗಳು












Click it and Unblock the Notifications