ಇಫ್ತಾರ್‌ ಕೂಟ ರದ್ದು , ಕಲಾಂ ಮೇಲ್ಪಂಕ್ತಿ ಅನುಸರಿಸಿದ ಎಸ್ಸೆಂ.ಕೃಷ್ಣ

ಬೆಂಗಳೂರು : ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಅವರ ಮೇಲ್ಪಂಕ್ತಿಯನ್ನು ಅನುಸರಿಸಲು ಮುಂದಾಗಿರುವ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಈ ಬಾರಿಯ ಇಫ್ತಾರ್‌ ಕೂಟವನ್ನು ರದ್ದುಪಡಿಸಿದ್ದಾರೆ.

ಸಾಂಪ್ರದಾಯಿಕ ಇಫ್ತಾರ್‌ ಕೂಟವನ್ನು ರದ್ದು ಮಾಡಲು ನಿರ್ಧರಿಸುವ ಮುಖ್ಯಮಂತ್ರಿ ಕೃಷ್ಣ - ಔತಣ ಕೂಟಕ್ಕೆ ವೆಚ್ಚವಾಗಲಿದ್ದ ಐದು ಲಕ್ಷ ರುಪಾಯಿಗಳನ್ನು ಅನಾಥಾಶ್ರಮಗಳಿಗೆ ನೀಡುವರು. ಮೈಸೂರಿನ ಎರಡು, ಬೆಂಗಳೂರು ಹಾಗೂ ಗುಲ್ಬರ್ಗಾದ ತಲಾ ಒಂದು ಅನಾಥಾಶ್ರಮಗಳು ಇಫ್ತಾರ್‌ ಕೂಟ ರದ್ದಾದ ಕಾರಣದಿಂದ ಮಿಗುವ ಹಣದ ಫಲಾನುಭವಿಗಳು.

ಕಳೆದ ವಾರವಷ್ಟೇ, ಈ ಬಾರಿಯ ಇಫ್ತಾರ್‌ ಔತಣ ಕೂಟವನ್ನು ರದ್ದು ಮಾಡಿರುವುದಾಗಿ ರಾಷ್ಟ್ರಪತಿ ಕಲಾಂ ಪ್ರಕಟಿಸಿದ್ದರು. ಈ ಹಣವನ್ನು ಅನಾಥಾಶ್ರಮಗಳಿಗೆ ನೀಡುವುದಾಗಿಯೂ ಕಲಾಂ ಪ್ರಕಟಿಸಿದ್ದರು. ರಾಷ್ಟ್ರಪತಿಗಳ ಆದರ್ಶವನ್ನು ಪಾಲಿಸಲು ಮುಖ್ಯಮಂತ್ರಿ ಕೃಷ್ಣ ಮುಂದಾಗಿದ್ದಾರೆ ಎಂದು ವಿಧಾನಸೌಧದ ಮೂಲಗಳು ತಿಳಿಸಿವೆ.

ಇದಕ್ಕೂ ಮುನ್ನ , ರಾಜ್ಯದಲ್ಲಿನ ಬರದ ಕಾರಣ ಮುಖ್ಯಮಂತ್ರಿ ಕೃಷ್ಣ ತಮ್ಮ ವಿದೇಶಿ ಪ್ರವಾಸಗಳನ್ನು ರದ್ದುಪಡಿಸಿದ್ದರು. ಅದೇರೀತಿ, ಎರಡು ವರ್ಷಗಳ ಕಾಲ ಅದ್ದೂರಿ ದಸರಾ ಉತ್ಸವಕ್ಕೆ ರಾಜ್ಯ ಸರ್ಕಾರ ತಡೆ ಹಾಕಿತ್ತು .(ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+