ಬೆಂಗಳೂರಿನ ಎಚ್ಚೆನ್‌ ಕಲಾಕ್ಷೇತ್ರದಲ್ಲಿ ಅಪರೂಪದ ಮದುವೆ

ಬೆಂಗಳೂರಿನ ಎಚ್ಚೆನ್‌ ಕಲಾಕ್ಷೇತ್ರದಲ್ಲಿ ಅಪರೂಪದ ಮದುವೆ
ಮಧು- ನಸೀಮಾ ಕೊನೆಗೂ ಮದುವೆಯಾದರು

ನಸೀಮಾ ಮತ್ತು ಮದ್ದೂರಿನ ಟಿ.ಮಧು ಎಚ್ಚೆನ್‌ ಕಲಾಕ್ಷೇತ್ರದಲ್ಲಿ ಮದುವೆಯಾದರು. ಇದು ಧರ್ಮಾತೀತ ಮದುವೆ. 28ರ ಹರೆಯದ ಮಧು ದೇವಾಲಯ ವಾಸ್ತುಶಿಲ್ಪದ ವಿಷಯದಲ್ಲಿ ಬಿಎಫ್‌ಎ ಮಾಡಿದ್ದಾರೆ. ನಸೀಮಾ ಶಿಲ್ಪಕಲೆ ವಿಷಯದ ಪದವೀಧರೆ. ಇಬ್ಬರ ನಡುವೆ ಸ್ನೇಹ ಬೆಳೆಯಿತು. ಸ್ನೇಹ ಪ್ರೇಮವಾಯಿತು. ಅನೇಕ ಪ್ರೇಮ ಪ್ರಸಂಗಗಳಂತೆ ಇಲ್ಲೂ ಮನೆಯವರ ಜಾತಿ ಬೇಲಿಯ ಅಡ್ಡ. ಚನ್ನಪಟ್ಟಣದ ಕುವೆಂಪು ಕಾಲೇಜಲ್ಲಿ ಅಂಕುರಿಸಿದ ಈ ಜಾತ್ಯತೀತ ಪ್ರೇಮಕ್ಕೆ ಮದುವೆಯ ಅರ್ಥ ಸಿಗಲು ಮೂರು ವರ್ಷ ಕಾಯಬೇಕಾಯಿತು.

ಕೊನೆಗೂ ಮಧುವಿನ ತಾಯಿ ಇಂದ್ರಮ್ಮ ಹಾಗೂ ನಸೀಮಾ ತಂದೆ- ತಾಯಿ ಗುಲಾಬ್‌ ಮತ್ತು ಶಾಫುಲ್ಲ ಮದುವೆಗೆ ಒಪ್ಪಿದರು. ನವೆಂಬರ್‌ 12ನೇ ತಾರೀಕು ಎಚ್ಚೆನ್‌ ಕಲಾಕ್ಷೇತ್ರದಲ್ಲಿ ಮದುವೆ.

ಪ್ರೇಮಕಥೆ ಮಾಮೂಲಾಗಿದೆ. ಆದರೆ, ಎಚ್ಚೆನ್‌ ಕಲಾಕ್ಷೇತ್ರ ಕಲ್ಯಾಣ ಮಂಟಪವಾದದ್ದು ಒಂದು ವಿಶೇಷ. ಇದಕ್ಕೆ ಮೂಲ ಕಾರಣ ನಾಗತೀಹಳ್ಳಿ ಚಂದ್ರಶೇಖರ್‌. ಈ ಜಾತ್ಯತೀತ ಮದುವೆಗೆ ಸಾಕ್ಷಿಯಾಗಲು ಅವರು ಒಪ್ಪಿ ಬಂದಿದ್ದರು. ಎಚ್ಚೆನ್‌ ಕಲಾಕ್ಷೇತ್ರದ ವೇದಿಕೆಯ ಮೇಲೆ ತೀರಾ ಸರಳ ವಿವಾಹ. ನಸೀಮಾ ಬೆರಳಿಗೆ ಮಧು ಉಂಗುರ ತೊಡಿಸಿದಾಗ ಸಾಹಿತಿಗಳಿಂದ ಕರತಾಡನ ! ಕೀ.ರಂ.ನಾಗರಾಜ್‌, ಸಿ.ಜಿ.ಕೆ., ರಂಗ ಚಳವಳಿಕಾರ ಅಶೋಕ್‌ ಬಾದರದಿನ್ನಿ ಮೊದಲಾದ ಅಕ್ಷರ ಹಾಗೂ ಕಲಾ ಮಿತ್ರರು ಮದುವೆಯ ಮುಖ್ಯ ಅತಿಥಿಗಳಾಗಿದ್ದರು.

ಇಂಥಾ ಮದುವೆಗಳನ್ನು ನಾವು ಹೆಚ್ಚು ಹೆಚ್ಚಾಗಿ ಬೆಂಬಲಿಸಬೇಕು. ಮಧು ಹಾಗೂ ನಸೀಮಾ ಧೃತಿಗೆಡಗೆ ಪರಿಸ್ಥಿತಿಯನ್ನು ಎದುರಿಸಿ, ಮದುವೆಯಾಗುತ್ತಿರುವುದು ಹೆಮ್ಮೆಯ ವಿಷಯ ಎಂದು ನಾಗತಿ ನಕ್ಕರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+