ಮೂಡಬಿದರೆ ಸಾಹಿತ್ಯ ಸಮ್ಮೇಳನ ಡಿ.4ರಿಂದ 18ಕ್ಕೆ ಮುಂದೂಡಿಕೆ
ಮೂಡಬಿದರೆ ಸಾಹಿತ್ಯ ಸಮ್ಮೇಳನ ಡಿ.4ರಿಂದ 18ಕ್ಕೆ ಮುಂದೂಡಿಕೆ
ಸಮ್ಮೇಳನಕ್ಕೆ 1.10 ಕೋಟಿ ರುಪಾಯಿ ಖರ್ಚಾಗಲಿದೆ
ಹೊಸ ವೇಳಾಪಟ್ಟಿಯ ಪ್ರಕಾರ, ಡಿಸೆಂಬರ್ 18ರಿಂದ 21ರವರೆಗೆ ಮೂಡಬಿದರೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಎಂ.ಮೋಹನ್ ಆಳ್ವ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ ಸಮ್ಮೇಳನದ ವೇಳಾಪಟ್ಟಿ ಬದಲಾಗಿರುವ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದರು.
ಈ ಮುನ್ನ ನಿಗದಿ ಪಡಿಸಿದ್ದಂತೆಯೇ ಸಮ್ಮೇಳನ ನಡೆಸಲು ಸಕಲ ಸಿದ್ಧತೆಗಳೂ ನಡೆದಿವೆ. ಅದರೆ, ಸಂಭವನೀಯ ಮಳೆ ಹಾಗೂ ಸಮ್ಮೇಳನಾಧ್ಯಕ್ಷರ ಆಯ್ಕೆಯಲ್ಲಿನ ವಿಳಂಬದಿಂದಾಗಿ ಸಮ್ಮೇಳನವನ್ನು ಮುಂದೂಡುವುದು ಅನಿವಾರ್ಯವಾಯಿತು ಎಂದು ಕಲ್ಕೂರ ಹೇಳಿದರು.
ಸಮ್ಮೇಳನಕ್ಕೆ 1.10 ಕೋಟಿ ರುಪಾಯಿ ಖರ್ಚಾಗಲಿದೆ. ಸರ್ಕಾರಿ ನೌಕರರು 30 ಲಕ್ಷ ರುಪಾಯಿ ದೇಣಿಗೆ ನೀಡಲಿದ್ದಾರೆ. 15 ಲಕ್ಷ ರುಪಾಯಿ ಅನುದಾನ ಸರ್ಕಾರದಿಂದ ಬರಲಿದೆ. ಈಗಾಗಲೇ 20 ಲಕ್ಷ ರುಪಾಯಿ ಹಣ ಬ್ಯಾಂಕಿನಲ್ಲಿದ್ದು , ಸಮ್ಮೇಳನಕ್ಕೆ ಹಣಕಾಸಿನ ತೊಂದರೆ ಉಂಟಾಗುವುದಿಲ್ಲ ಎಂದು ಕಲ್ಕೂರ ಸುದ್ದಿಗಾರರಿಗೆ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications