ಹಾಸಣಗಿಯಲ್ಲಿ ನ.14ರಿಂದ 2 ದಿನಗಳ ಸಂಗೀತ ಸಮ್ಮೇಳನ
ಹಾಸಣಗಿಯಲ್ಲಿ ನ.14ರಿಂದ 2 ದಿನಗಳ ಸಂಗೀತ ಸಮ್ಮೇಳನ
ಬಸವರಾಜ ರಾಜಗುರು ಹಾಗೂ ಸಿ.ಆರ್.ವ್ಯಾಸರ ನೆನಪಲ್ಲಿ ಈ ಸಮ್ಮೇಳನ/್ಛಟ್ಞಠಿ।
ಯಲ್ಲಾಪುರದ ಪಂಡಿತ್ ಗಣಪತಿ ಭಟ್ ಸಂಗೀತ ಅಕಾಡೆಮಿ ಈ ಸಮ್ಮೇಳನವನ್ನು ಆಯೋಜಿಸಿದ್ದು, ರಾಜ್ಯದ ವಿವಿಧ ಭಾಗಗಳ ಸಂಗೀತಗಾರರು ಹಾಗೂ ಸಂಗೀತಾಸಕ್ತರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ಸಮ್ಮೇಳನದ ಕಾರ್ಯಕ್ರಮಗಳು ಇಂತಿವೆ-
ನವೆಂಬರ್ 14, ಶುಕ್ರವಾರ ಸಂಜೆ 5.30ಕ್ಕೆ
ಕ್ಯಾಸೆಟ್ ಬಿಡುಗಡೆ :
1. ಸಂಧ್ಯಾರಾಗ ಸ್ಮರಣೆ (ಪಂಡಿತ್ ಸಿ.ಆರ್.ವ್ಯಾಸರ ನೆನಪಿನಲ್ಲಿ ಪಂಡಿತ್ ಗಣಪತಿ ಭಟ್ ಹಾಸಣಗಿ ಅವರ ಸಂಗೀತದಲ್ಲಿ).
2. ಶ್ರೀಪಾದ ಹೆಗಡೆಯವರ ‘ಪರಂಪರ’ (ಹೊಸ ತಲೆಮಾರಿನ ಪ್ರತಿಭಾನ್ವಿತ ಸಂಗೀತಗಾರರಲ್ಲಿ ಶ್ರೀಪಾದ ಹೆಗಡೆ ಕೂಡ ಒಬ್ಬರು).
ಕ್ಯಾಸೆಟ್ ಬಿಡುಗಡೆ ಸಮಾರಂಭಕ್ಕೆ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ರಾಕೇಶ್ ಸಿಂಗ್ ಹಾಗೂ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಆ ದಿನ ಸಂಗೀತದೂಟ ಬಡಿಸಲಿರುವ ಕಲಾವಿದರು
ಪ್ರೊ. ಎಸ್.ಶಂಭುಭಟ್ ಕಾಡತೋಕ- ಕೊಳಲು ವಾದನ
ಡಾ. ಶಾಂತಾರಾಮ ಹೆಗಡೆ, ಧಾರವಾಡ- ಶಾಸ್ತ್ರೀಯ ಸಂಗೀತ
ಶೌನಕ್ ಅಭಿಷೇಖಿ, ಪುಣೆ- ಶಾಸ್ತ್ರೀಯ ಸಂಗೀತ
ಶ್ರೀಪಾದ ಹೆಗಡೆ, ಕಂಪ್ಲಿ- ಶಾಸ್ತ್ರೀಯ ಸಂಗೀತ.
ನವೆಂಬರ್ 15, ಶನಿವಾರ ಸಂಜೆ 5.30 ಗಂಟೆಯಿಂದ...
ಸಂಗೀತ ಕಚೇರಿ ಹಾಗೂ ನೃತ್ಯ ಕಾರ್ಯಕ್ರಮ ನಡೆಸಿಕೊಡಲಿರುವ ಕಲಾವಿದರು-
ಕೃಪ ಫಡ್ಕೆ, ಮೈಸೂರು- ಭರತನಾಟ್ಯ
ರೇಣುಕಾ ನಾಕೋಡ್, ಧಾರವಾಡ- ಶಾಸ್ತ್ರೀಯ ಸಂಗೀತ
ವಿನಾಯಕ ತೊರ್ವಿ- ಶಾಸ್ತ್ರೀಯ ಸಂಗೀತ.
ಗಣಪತಿ ಭಟ್, ಹಾಸಣಗಿ- ಶಾಸ್ತ್ರೀಯ ಸಂಗೀತ.
ಪಕ್ಕವಾದ್ಯದಲ್ಲಿ-
ತಬಲಾ ವಾದಕರು : ಪಂಡಿತ್ ರಘುನಾಥ ನಾಕೋಡ್- ಧಾರವಾಡ, ಗೋಪಾಲಕೃಷ್ಣ ಹೆಗಡೆ- ಕಲ್ಭಾಗ, ಸುಭಾಷ್ ಕಾಮತ್- ಪುಣೆ ಮತ್ತು ರವಿಕಿರಣ್ ನಾಕೋಡ್- ಧಾರವಾಡ.
ಹಾರ್ಮೋನಿಯಂ ಸಾಥಿಗಳು : ಪಂಡಿತ್ ವಸಂತ ಕನಕಪುರ, ಶ್ರೀಪಾದ ಹೆಗಡೆ- ಸೋಮನಮನೆ ಮತ್ತು ಪ್ರಸನ್ನ ವೈದ್ಯ.
ಗಣಪತಿ ಭಟ್ ಹಾಸಣಗಿ ಸಂಗೀತ ಅಕಾಡೆಮಿಯ ಅಧ್ಯಕ್ಷ ವಸಂತ ಭಟ್ ಸರ್ವರಿಗೂ ಆಮಂತ್ರಣ ಕೊಟ್ಟಿದ್ದಾರೆ. ಸಂಗೀತಾಸಕ್ತರು ಸಮ್ಮೇಳನದ ಅನುಭವ ತುಂಬಿಕೊಳ್ಳಿ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications