ಧಾರವಾಡ ಜಿಲ್ಲಾಪಂಚಾಯಿತಿ ಅಧ್ಯಕ್ಷರಾಗಿ ಬಸವಂತಪ್ಪ ಆಯ್ಕೆ
ಧಾರವಾಡ ಜಿಲ್ಲಾಪಂಚಾಯಿತಿ ಅಧ್ಯಕ್ಷರಾಗಿ ಬಸವಂತಪ್ಪ ಆಯ್ಕೆ
ಉಪಾಧ್ಯಕ್ಷೆಯಾಗಿ ಪರಿಶಿಷ್ಟ ಮಹಿಳೆ ಅಕ್ಕವ್ವ ಲಮಾಣಿ
ಜಿಲ್ಲಾಧಿಕಾರಿ ಕಪಿಲಮೋಹನ್ ಅವರು ಚುನಾವಣಾಧಿಕಾರಿಯಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ಬಸವಂತಪ್ಪ ತಿಪ್ಪಣ್ಣ ಗುಡದರಿ, ಸಿ. ಎನ್. ಶ್ಯಾಗೋಟಿ, ಎಸ್. ಕೆ. ಸೊಟ್ಟಮ್ಮನವರ, ಶಾಂತಪ್ಪ ಗೋನಾಳ ಹಾಗೂ ಈರಮ್ಮ ಕುಂದಗೋಳ ಸೇರಿದಂತೆ ಐವರು ನಾಮಪತ್ರ ಸಲ್ಲಿಸಿದ್ದರು.
ಆದರೆ ಕೊನೆ ಗಳಿಗೆಯಲ್ಲಿ ಬಸವಂತಪ್ಪ ಅವರ ಪರವಾಗಿ ಉಳಿದ ನಾಲ್ವರು ತಮ್ಮ ನಾಮಪತ್ರವನ್ನು ವಾಪಸ್ಸು ಪಡೆದರು. ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಮಹಿಳೆಗೆ ಮೀಸಲಾಗಿದ್ದು, ಹಿಂದೆ ಅಧ್ಯಕ್ಷರಾಗಿದ್ದ ಅಕ್ಕವ್ವ ಲಮಾಣಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.
(ಇನ್ಪೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications