ರವೀಂದ್ರ ಕಲಾಕ್ಷೇತ್ರದಲ್ಲಿ ಎರಡು ದಿನಗಳ ‘ರಂಗೋತ್ಸವ- 2003’
ರವೀಂದ್ರ ಕಲಾಕ್ಷೇತ್ರದಲ್ಲಿ ಎರಡು ದಿನಗಳ ‘ರಂಗೋತ್ಸವ- 2003’
ರಂಗಭೂಮಿ ಉದ್ಧಾರಕ್ಕೆ ಜನರೇ ಮುಂದಾಗಬೇಕು-ಮಲ್ಲಿಕಾರ್ಜುನಯ್ಯ
ನಗರದಲ್ಲಿ ಗೆಜ್ಜೆ- ಹೆಜ್ಜೆ ರಂಗ ತಂಡದ ಎರಡು ದಿನಗಳ ಕಾಲದ ರಂಗೋತ್ಸವ- 2003 ಕಾರ್ಯಕ್ರಮವನ್ನು ಸೋಮವಾರ (ನ.10) ಉದ್ಘಾಟಿಸಿ ಅವರು ಮಾತಾಡಿದರು. ಹಿಂದೆ ರಾಜ ಮಹಾರಾಜರು ನಾಟಕವನ್ನು ಬೆಂಬಲಿಸುತ್ತಿದ್ದರು. ಆಮೇಲೆ ಸರ್ಕಾರ ಅದಕ್ಕೆ ಬೆಂಬಲವಾಗಿ ನಿಂತಿತು. ಕೇವಲ ಸರ್ಕಾರದಿಂದ ರಂಗಭೂಮಿಯ ಬೆಳವಣಿಗೆ ಸಾಧ್ಯವಿಲ್ಲ. ಸಮಾಜವೇ ಅದನ್ನು ಕಾಪಾಡಲು ಮುಂದಾಗಬೇಕು ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪತ್ರಕರ್ತ ಎಸ್.ನಾಗಣ್ಣ ಇವತ್ತಿನ ವಿದ್ಯುನ್ಮಾನ ಪ್ರಪಂಚದಲ್ಲಿ ರಂಗಭೂಮಿ ಬಲವಾಗಬೇಕಾದರೆ ಗ್ರಾಮೀಣ ಪ್ರತಿಭೆಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆ ಕೊಟ್ಟರು.
ವಿಮಲಾ ರಂಗಾಚಾರ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮನುಷ್ಯ ಜೀವನದ ಬೆಳವಣಿಗೆಗೆ ಕಲಾ ಪ್ರಕಾರ ಎಷ್ಟು ಮುಖ್ಯ ಎಂಬುದನ್ನು ತಿಳಿಸಿದ ವಿಮಲಾ ರಂಗಾಚಾರ್, ಸನ್ಮಾನ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.
ಸೋಮವಾರ ಸಂಜೆ 6.30 ಗಂಟೆಗೆ ಖುಷಿಯಾಟ (ಬೋಧಾಯನನ ಭಗವದಜ್ಜುಕೀಯಂ) ನಾಟಕ ಪ್ರದರ್ಶಿತವಾಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೋಪಾಲಕೃಷ್ಣ ನಾಯರಿ ಅವರ ಮಾರ್ಗದರ್ಶನದಲ್ಲಿ ಎಂ.ಇ.ಎಸ್.ಕಿಶೋರ ಕೇಂದ್ರದ ರಂಗಕರ್ಮಿಗಳು ಈ ನಾಟಕದಲ್ಲಿ ಅಭಿನಯಿಸಿದರು. ಅದೇ ದಿನ ಸಂಜೆ 7.30 ಗಂಟೆಗೆ ಆಂಜನೇಯ ರಚಿಸಿರುವ ಸಾಮ್ರಾಟ್ ಶ್ರೀಪುರುಷ ನಾಟಕವನ್ನು ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘದವರು ಪ್ರದರ್ಶಿಸಿದರು. ಮರುದಿನ ಯಕ್ಷ ಜನಮೇಜಯ (ಶ್ರೀರಂಗರ ಕೇಳು ಜನಮೇಜಯ) ಹಾಗೂ ಕೀ.ರಂ.ನಾಗರಾಜ್ ಅನುವಾದಿಸಿರುವ ಭಾಸ ವ್ಯಾಯೋಗಂ ನಾಟಕಗಳು ಪ್ರದರ್ಶಿತವಾದವು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications